ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿಎಂ ಆಸ್ಪತ್ರೆ ಹೊರಭಾಗದಲ್ಲೇ ಕೊವಿಡ್-19 ರೋಗಿಯ ಮೃತದೇಹ!

|
Google Oneindia Kannada News

ವಾರಂಗಲ್, ಜುಲೈ.21: ದೇಶದಲ್ಲಿ ಕೊರೊನಾವೈರಸ್ ಸೋಂಕಿತರು ಎಂದರೆ ಜನರು ಬೆಚ್ಚಿ ಬೀಳುವಂತಾ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಪ್ರತಿಯೊಬ್ಬರನ್ನು ಅನುಮಾನದ ದೃಷ್ಟಿಯಲ್ಲೇ ನೋಡುವಂತಾ ಪರಿಸ್ಥಿತಿ ಎದುರಾಗಿದೆ.

68 ವರ್ಷದ ವೃದ್ಧೆಯೊಬ್ಬರು ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿತ್ತು. ಈ ಹಿನ್ನೆಲೆ ಮಹಾತ್ಮಗಾಂಧಿ ಮೆಮೋರಿಯನ್ ಆಸ್ಪತ್ರೆಯ ಅಪಘಾತದ ವಾರ್ಡ್ ಹೊರಭಾಗದಲ್ಲೇ ಮೃತದೇಹವನ್ನು ಇರಿಸಿದ್ದರು.

Video: ತೆಲಂಗಾಣದ ಕೊವಿಡ್-19 ಆಸ್ಪತ್ರೆಯಲ್ಲೇ ಪ್ರವಾಹ ಪರಿಸ್ಥಿತಿ!Video: ತೆಲಂಗಾಣದ ಕೊವಿಡ್-19 ಆಸ್ಪತ್ರೆಯಲ್ಲೇ ಪ್ರವಾಹ ಪರಿಸ್ಥಿತಿ!

ಮೃತಪಟ್ಟಿದ್ದ ವೃದ್ಧೆಯ ಶವವನ್ನು 2 ಗಂಟೆಗಳ ಕಾಲ ಹೀಗೆ ಆಸ್ಪತ್ರೆಯ ಅಪಘಾತ ವಾರ್ಡ್ ನ ಹೊರಭಾಗದಲ್ಲಿಯೇ ಇರಿಸಲಾಗಿತ್ತು. ಕುಟುಂಬ ಸದಸ್ಯರು ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವವರೆಗೂ ಅಂತ್ಯಸಂಸ್ಕಾರವನ್ನು ಕೂಡಾ ಮಾಡಿರಲಿಲ್ಲ ಎಂದು ಹೇಳಲಾಗುತ್ತಿದೆ.

Warangal: Suspected Coronavirus Patients Deadbody Kept Outside Casualty Ward In MGM Hospital

ಮಹಾತ್ಮ ಗಾಂಧಿ ಆಸ್ಪತ್ರೆ ವೈದ್ಯರು ಹೇಳುವುದೇನು?:

ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 68 ವರ್ಷದ ವೃದ್ಧೆಯನ್ನು ಮಹಾತ್ಮ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗೆ ದಾಖಲಾದ ಕೆಲವು ನಿಮಿಷಗಳಲ್ಲೇ ವೃದ್ಧೆ ಮೃತಪಟ್ಟಿದ್ದು, ಇವರಲ್ಲಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಅದಾಗಿಯೂ ವೃದ್ಧೆಯ ಕುಟುಂಬ ಸದಸ್ಯರು ಮೃತದೇಹವನ್ನು ತೆಗೆದುಕೊಂಡಿ ಹೋಗಿದ್ದಾರೆ ಎಂದು ಎಂಜಿಎಂ ಆಸ್ಪತ್ರೆಯ ಸೂಪರಿಟೆಂಡೆಂಡ್ ಡಾ.ಶ್ರೀನಿವಾಸ್ ರೈ ತಿಳಿಸಿದ್ದಾರೆ.

English summary
Warangal: Suspected Coronavirus Patient's Deadbody Kept Outside Casualty Ward In MGM Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X