• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

9 ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ!

|

ಹೈದರಾಬಾದ್, ಅಕ್ಟೋಬರ್ 28: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹತ್ಯೆ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ತೆಲಂಗಾಣ ರಾಜ್ಯದಲ್ಲಿ 9 ಜನರನ್ನು ಕೊಂದು ಶವಗಳನ್ನು ಬಾವಿಗೆ ಎಸೆದಿದ್ದ ಪ್ರಕರಣವಿದಾಗಿದೆ.

ಬಿಹಾರ ಮೂಲದ 26 ವರ್ಷದ ಸಂಜಯ್ ಕುಮಾರ್ ಯಾದವ್‌ಗೆ ಈ ಪ್ರಕರಣದ ಪ್ರಮುಖ ಆರೋಪಿ. ವಾರಂಗಲ್‌ನ ಜಿಲ್ಲಾ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ. ಬಿಹಾರ ಮೂಲದ ಸಂಜಯ್ ಕೂಲಿ ಕೆಲಸಕ್ಕಾಗಿ ವಾರಂಗಲ್‌ಗೆ ಬಂದಿದ್ದ.

ಬಾವಿಯಲ್ಲಿ 9 ಶವ; ತೆಲಂಗಾಣ ಬೆಚ್ಚಿಬಿದ್ದ ಪ್ರಕರಣದ ಚಾರ್ಜ್ ಶೀಟ್ ವಿವರ

ಮೇ 20ರಂದು ಬೆಳಕಿಗೆ ಬಂದಿದ್ದ 9 ಜನರ ಹತ್ಯೆ ಪ್ರಕರಣ ತೆಲಂಗಾಣ ರಾಜ್ಯ ಮಾತ್ರವಲ್ಲ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸಂಜಯ್ ಕುಮಾರ್ ವಾರಂಗಲ್ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶ ಜಯಕುಮಾರ್ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಕೊಲೆ; ಜೀವಾವಧಿ ಶಿಕ್ಷೆ ರದ್ದು ಮಾಡಿದ ಹೈಕೋರ್ಟ್!

ವಾರಂಗಲ್ ಸಮೀಪದ ಗೊರ್ರೆಕುಂಟಾ ಗ್ರಾಮದಲ್ಲಿ ಈ ಸರಣಿ ಕೊಲೆ ನಡೆದಿತ್ತು. ಮೊದಲು ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಎಲ್ಲರಿಗೂ ನಿದ್ರೆ ಮಾತ್ರೆ ನೀಡಿ, ಹತ್ಯೆ ಮಾಡಿ ಶವಗಳನ್ನು ಬಾವಿಗೆ ಎಸೆದಿದ್ದು ತಿಳಿದುಬಂದಿತ್ತು.

ಮೈಸೂರಿನ ನಿವೃತ್ತ ಪ್ರಾಂಶುಪಾಲ ಕೊಲೆ ಪ್ರಕರಣ: ಅನನ್ಯ ಭಟ್ ತಂದೆ ಸೇರಿದಂತೆ ಐವರ ಬಂಧನ

ಪ್ರಕರಣದ ವಿವರ : ಮೊದಲ ದಿನ ಬಾವಿಯಲ್ಲಿ ಪಶ್ಚಿಮ ಬಂಗಾಳದಿಂದ ಕೆಲಸ ಹುಡುಕಿಕೊಂಡು ವಾರಂಗಲ್‌ಗೆ ಬಂದಿದ್ದ ಮಕ್ಸೂದ್ (56), ಆತನ ಪತ್ನಿ ನಿಶಾ (48), ಪುತ್ರಿ ಬುಶ್ರಾ (24), ಮೂರು ವರ್ಷದ ಮೊಮ್ಮಗನ ಶವ ಸಿಕ್ಕಿತ್ತು.

ಅದೇ ಬಾವಿಯಲ್ಲಿ ಒಂದು ದಿನದ ಬಳಿಕ ಮುಕ್ಸೂದ್ ಮಗ, ಬಿಹಾರದಿಂದ ಬಂದ ಇನ್ನಿಬ್ಬರು ಕಾರ್ಮಿಕರು, ಇಬ್ಬರು ಸ್ಥಳೀಯರ ಶವ ಪತ್ತೆಯಾಗಿತ್ತು. ಸಂಜಯ್ ಕುಮಾರ್ ಯಾದವ್ ಈ ಎಲ್ಲಾ ಕೊಲೆಗಳನ್ನು ಮಾಡಿದ್ದ. ಒಂದು ಕೊಲೆಯನ್ನು ಮುಚ್ಚಿ ಹಾಕಲು 9 ಕೊಲೆಗಳನ್ನು ಮಾಡಿದ್ದ.

ಬಿಹಾರದಿಂದ ಗೊರ್ರೆಕುಂಟಾ ಗ್ರಾಮಕ್ಕೆ ಕೆಲಸಕ್ಕಾಗಿ ಸಂಜಯ್ ಕುಮಾರ್ ಯಾದವ್ ಬಂದಿದ್ದ. ಕಾರ್ಖಾನೆಯೊಂದರಲ್ಲಿ ಆತನಿಗೆ ಕೆಲಸ ಸಿಕ್ಕಿತ್ತು. ಸಂಜಯ್ ವಾಸವಿದ್ದ ಮನೆಯ ಸಮೀಪ ಮೃತ ಮಕ್ಸೂದ್ ಮನೆ ಇತ್ತು. ಅಲ್ಲಿಗೆ ಆತನ ಸಂಬಂಧಿ ರಫಿಕಾ ಮೂವರು ಮಕ್ಕಳ ಜೊತೆ ಬಂದು ನೆಲೆಸಿದ್ದಳು.

ರಫಿಕಾ ಜೊತೆ ಸಂಜಯ್ ಕುಮಾರ್ ಅನೈತಿಕ ಸಂಬಂಧ ಬೆಳೆಸಿದ್ದ. ಬಳಿಕ ಆಕೆ ಆರೋಪಿ ಮನೆಗೆ ಬಂದು ವಾಸವಾಗಿದ್ದಳು. ರಫಿಕಾ ಮಗಳ ಜೊತೆಗೂ ಸಂಜಯ್ ಕುಮಾರ್ ಕೆಟ್ಟದಾಗಿ ನಡೆದುಕೊಂಡಿದ್ದ. ಆದ್ದರಿಂದ ರಫಿಕಾ ಜಗಳವಾಡಿದ್ದಳು.

ಇದರಿಂದ ಕೋಪಗೊಂಡಿದ್ದ ಸಂಜಯ್ ಕುಮಾರ್ ಮದುವೆಯಾಗುವುದಾಗಿ ನಂಬಿಸಿ ರಫಿಕಾಳನ್ನು ಕರೆದುಕೊಂಡು ಹೋಗಿದ್ದ. ಪಶ್ಚಿಮ ಬಂಗಾಳಕ್ಕೆ ತೆರಳುವ ರೈಲಿನಲ್ಲಿ ಹೋಗುವಾಗ ಮತ್ತು ಬರುವ ಔಷಧಿ ಇರುವ ಮಜ್ಜಿಗೆ ಕುಡಿಸಿ ಗೋದಾವರಿ ಬಳಿ ರೈಲಿನಿಂದ ತಳ್ಳಿ ಆಕೆಯನ್ನು ಹತ್ಯೆ ಮಾಡಿದ್ದ. ಶವದ ಗುರುತು ಪತ್ತೆಯಾಗದ ಕಾರಣ ಪೊಲೀಸರು ಅಂತ್ಯ ಸಂಸ್ಕಾರ ಮಾಡಿದ್ದರು.

ಗೊರ್ರೆಕುಂಟಾ ಗ್ರಾಮಕ್ಕೆ ಸಂಜಯ್ ಒಬ್ಬನೇ ವಾಪಸ್ ಆದಾಗ ರಫಿಕಾ ಮಕ್ಕಳು ಅಮ್ಮ ಎಲ್ಲಿ ಎಂದು ವಿಚಾರಿಸಿದ್ದರು. ಆಗ ಪಶ್ಚಿಮ ಬಂಗಾಳದಲ್ಲಿಯೇ ಉಳಿದುಕೊಂಡಿದ್ದಾಳೆ ಎಂದು ನಂಬಿಸಿದ್ದ. ಮಕ್ಸೂದ್ ಪತ್ನಿ ನಿಶಾ ಈ ವಿಚಾರದಲ್ಲಿ ಜಗಳವಾಡಿದ್ದಳು, ದೂರು ಕೊಡುವುದಾಗಿ ಹೇಳಿದ್ದಳು.

ಆಗ ಕೊಲೆ ಮಾಡಲು ಸಂಚು ರೂಪಿಸಿದ್ದ ಸಂಜಯ್ ಕುಮಾರ್ ಮಕ್ಸೂದ್ ಮಗನ ಹುಟ್ಟು ಹಬ್ಬದ ದಿನ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದ. ಮುಂಜಾನೆ 2 ಗಂಟೆ ಸಮಯದಲ್ಲಿ ಮಕ್ಸೂದ್, ನಿಶಾ, ಬುಶ್ರಾ, ಮೂರು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಶವಗಳನ್ನ ಎಳೆದುಕೊಂಡು ಹೋಗಿ ಬಾವಿಗೆ ಎಸೆದಿದ್ದ.

ಈ ಕೊಲೆಗಳು ನಡೆದ ಮರುದಿನ ಶವಗಳನ್ನು ಎಸೆಯುವಾಗ ನೋಡಿದ್ದಾರೆ ಎಂಬ ಕಾರಣಕ್ಕೆ ಮುಕ್ಸೂದ್ ಮಗ, ಬಿಹಾರದಿಂದ ಬಂದಿದ್ದ ಇನ್ನಿಬ್ಬರು ಕಾರ್ಮಿಕರು ಹಾಗೂ ಇಬ್ಬರು ಸ್ಥಳೀಯರನ್ನು ಹತ್ಯೆ ಮಾಡಿ ಶವಗಳನ್ನು ಮತ್ತೆ ಬಾವಿಗೆ ಹಾಕಿದ್ದ. ಒಂದು ಕೊಲೆ ಮುಚ್ಚಿ ಹಾಕಲು 9 ಜನರ ಹತ್ಯೆ ನಡೆದಿತ್ತು.

English summary
Telangana Warangal court sentenced life imprisonment for the Sanjay Kumar Yadav who killed 9 people. Bodies found in well after the brutal murder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X