ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ ದುರಂತದ ಕಾರಣ ಬಹಿರಂಗಗೊಳಿಸಿದ ಆಸ್ಕರ್

By Mahesh
|
Google Oneindia Kannada News

ನವದೆಹಲಿ,ಡಿ.15: ಹೈದ್ರಾಬಾದ್ ಜಬ್ಬಾರ್ ಟ್ರಾವೆಲ್ಸ್ ವೋಲ್ವೊ ಬಸ್ ದುರಂತಕ್ಕೆ ಏನು ಕಾರಣ ಎಂಬುದು ಈಗ ತನಿಖಾ ವರದಿಯಿಂದ ಬಹಿರಂಗವಾಗಿದೆ. ಈ ಬಸ್ ದುರಂತದಲ್ಲಿ 52 ಮಂದಿ ಸುಟ್ಟು ಕರಕಲಾಗಿ ಅಸುನೀಗಿದ್ದರು. ಚಾಲಕನ ಬೇಜವಾಬ್ದಾರಿತನ ಹಾಗೂ ಪಟಾಕಿಗಳ ಪಾರ್ಸೆಲ್ ಈ ದುರ್ಘಟನೆಗೆ ಕಾರಣ ಎಂದು ಕೇಂದ್ರ ಭೂ ಸಾರಿಗೆ ಖಾತೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರು ಭಾನುವಾರ ಹೇಳಿದ್ದಾರೆ.

ವೋಲ್ವೋ ಬಸ್ ಚಾಲಕ ಎರಡು ಅವಧಿಗೆ ಕರ್ತವ್ಯ ನಿರ್ವಹಿಸಿ ಒತ್ತಡದಲ್ಲಿದ್ದ ಹಾಗೂ ಬಸ್ ಒಳಗಡೆ ಪಟಾಕಿ(ಸಿಡಿಮದ್ದು) ಪಾರ್ಸೆಲ್ ಇದ್ದದ್ದು ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಸಚಿವ ಆಸ್ಕರ್ ಫರ್ನಾಂಡಿಸ್ ತಿಳಿಸಿದರು.

ಬೆಂಗಳೂರಿನಿಂದ ಹೈದರಾಬಾದಿಗೆ ಹೋಗುತ್ತಿದ್ದ ಜಬ್ಬಾರ್ ಸಂಸ್ಥೆಗೆ ಸೇರಿದ ವೋಲ್ವೊ ಬಸ್ ಮಹೆಬೂಬ್ ನಗರ ಬಳಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು 52 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದರು. ಆ ನತದೃಷ್ಟ ಬಸ್ ನ ಚಾಲಕ ಎರಡು ಅವಧಿಗೆ ನಿರ್ವಹಿಸಿದ್ದ ಹಿನ್ನೆಲೆಯಲ್ಲಿ ಭಾರೀ ಒತ್ತಡದಲ್ಲಿದ್ದ ವಾಸ್ತವವಾಗಿ ಚಾಲಕ ಬಸ್ ಗೆ ಬ್ರೇಕ್ ಹಾಕುವಷ್ಟು ಮಾನಸಿಕವಾಗಿ ಎಚ್ಚರವಿರಲಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ ಎಂದು ಭೂ ಸಾರಿಗೆ ಖಾತೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.[ಬಸ್ ದುರಂತದ ಚಿತ್ರಗಳು]

Hyd Volvo mishap: Driver was on double duty, fire crackers in bus

ಬಸ್ಸಿಗೆ ಬೆಂಕಿ ತಗುಲಿದ ತಕ್ಷಣ ಚಾಲಕ ಫಿರೋಜ್ ಶಾ ಅವರು ಪ್ರಯಾಣಿಕರನ್ನು ಎಚ್ಚರಿಸಿದ್ದರೆ 45 ಮಂದಿ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಸಮಯ ಪ್ರಜ್ಞೆ ತೋರಿ, ಬಾಗಿಲನ್ನೂ ತೆರೆಯದೆ ಚಾಲಕ ಬಸ್ಸಿನಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವೋಲ್ವೊ ಬಸ್ ಅಗ್ನಿ ದುರಂತಕ್ಕೆ ಅವೈಜ್ಞಾನಿಕ ರಸ್ತೆ ನಿರ್ಮಾಣವೇ (Poor road engineering) ಕಾರಣ ಎಂದು ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಿದ್ಧಪಡಿಸಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಲಾಗಿತ್ತು.

ಹೆದ್ದಾರಿಯಲ್ಲಿ ಸುಮಾರು 20 ಅಡಿಗಳಷ್ಟು ದೂರ ಸ್ಟೀಲ್ ಪೈಪ್ ತಡೆಗೋಡೆ ನಿರ್ಮಿಸಲಾಗಿದ್ದು, ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ತಡೆಗೋಡೆಗೆ ಉಜ್ಜಿಕೊಂಡು ಚಲಿಸಿದ್ದರಿಂದ ಪೈಪುಗಳಿಂದ ಸಿಡಿದ ಬೆಂಕಿ ಕಿಡಿ ಡೀಸೆಲ್ ಟ್ಯಾಂಕಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎಂದು Data Analysis Centre of National Automotive Testing and R&D Infrastructure Project ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಬಸ್ ನ ಡೀಸೆಲ್ ಟ್ಯಾಂಕ್ ಸ್ಫೋಟಗೊಳ್ಳುತ್ತಿದ್ದಂತೆ ನಿದ್ರಾಸ್ಥಿತಿಯಲ್ಲಿದ್ದ ಪ್ರಯಾಣಿಕರು ಹೊರಬರಲು ಸಾಧ್ಯವಾಗಲಿಲ್ಲ. ಇದರಿಂದ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರು ಸುಟ್ಟು ಭಸ್ಮವಾಗಿದ್ದಾರೆ. ಡಿಎನ್ ಎ ಹೊಂದಾಣಿಕೆ ಮೂಲಕ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಶವಗಳ ಗುರುತು ಪತ್ತೆ ಹಚ್ಚಿದ್ದರು.

ನವೆಂಬರ್ 14 ರಂದು ಕರ್ನಾಟಕದ ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಬಸ್ ಹಾವೇರಿ ಬಳಿ ಬೆಂಕಿ ಆಕಸ್ಮಿಕಕ್ಕೆ ಸಿಲುಕಿದ ಬಗ್ಗೆ ವರದಿ ಇನ್ನೂ ಬರಬೇಕಿದೆ. ರಸ್ತೆ ಅಪಘಾತ ತಡೆಗೆ ಸೂಕ್ತ ಕ್ರಮ ಜರುಗಿಸುವಂತೆ ಸಂಸದೀಯ ಸಮಿತಿಯಿಂದ ರಸ್ತೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ನಿರ್ದೇಶನ ಬಂದಿದೆ ಎಂದು ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದರು. (ಪಿಟಿಐ)

English summary
The driver of the ill-fated Hyderabad-bound Volvo bus was overstressed and there were fire crackers inside the vehicle, according to findings of an investigation that probed two recent road mishaps in which 52 persons were killed said Union Cabinet Minister for Transport, Road and Highways Oscar Fernandes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X