ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ : ಸಂಚಾರಿ ಪೊಲೀಸರಿಂದ ಕೊರೊನಾ ಜಾಗೃತಿ

|
Google Oneindia Kannada News

ಹೈದರಾಬಾದ್, ಮಾರ್ಚ್ 19 : ದೇಶ-ವಿದೇಶದಲ್ಲಿ ಕೊರೊನಾ ಆತಂಕವನ್ನು ಸೃಷ್ಟಿಮಾಡಿದೆ. ಮಾರಣಾಂತಿಕ ವೈರಸ್ ಹರಡದಂತೆ ತಡೆಯುವುದು ಹೇಗೆ? ಎಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸದಾ ಜನರ ನಡುವೆ ಇರುವ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ತೆಲಂಗಾಣ ರಾಜ್ಯದ ರಾಚಕೊಂಡ ಸಂಚಾರಿ ಪೊಲೀಸರು ಬಿಸಿಲನ್ನು ಲೆಕ್ಕಿಸದೇ ರಸ್ತೆಯಲ್ಲಿಯೇ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಿಗ್ನಲ್‌ನಲ್ಲಿ ಕೆಂಪು ದೀಪಗಳು ಬಿದ್ದಾಗ ಸಾಲಾಗಿ ನಿಲ್ಲುವ ಪೊಲೀಸರು ಜನರಿಗೆ ಅರಿವನ್ನು ಮೂಡಿಸುತ್ತಿದ್ದಾರೆ.

ಕೊರೊನಾ ಜಾಗೃತಿ: ಕೇರಳ ಪೊಲೀಸರ ಕೈ ತೊಳಿಯೋ ಡ್ಯಾನ್ಸ್ ವೈರಲ್ಕೊರೊನಾ ಜಾಗೃತಿ: ಕೇರಳ ಪೊಲೀಸರ ಕೈ ತೊಳಿಯೋ ಡ್ಯಾನ್ಸ್ ವೈರಲ್

ರಾಜ್ಯದಲ್ಲಿ ಈಗಾಗಲೇ 6 ಕೊರೊನಾ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ವೈರಸ್ ಹರಡದಂತೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಪೊಲೀಸರು ಸಹ ಜೋಡಿಸಿದ್ದಾರೆ. ಹೇಗೆ ಕೈಗಳನ್ನು ತೊಳೆಯಬೇಕು? ಎಂದು ಜನರಿಗೆ ತಿಳಿಸುತ್ತಿದ್ದಾರೆ.

ಮಾರ್ಚ್ 31ರ ತನಕ ಬಂದ್ ವಿಸ್ತರಣೆ; ಏನಿರುತ್ತೆ ಎಂದು ತಿಳಿಯಿರಿಮಾರ್ಚ್ 31ರ ತನಕ ಬಂದ್ ವಿಸ್ತರಣೆ; ಏನಿರುತ್ತೆ ಎಂದು ತಿಳಿಯಿರಿ

Viral Video Rachakonda Police Promoting Washing Of Hands

ಸಾಮಾಜಿಕ ಜಾಲತಾಣದಲ್ಲಿ ರಾಚಕೊಂಡ ಪೊಲೀಸರು ಜಾಗೃತಿ ಮೂಡಿಸುವ ವಿಡಿಯೋ ವೈರಲ್ ಆಗಿದೆ. ಸಿಗ್ನಲ್‌ನಲ್ಲಿ ಸಾಲಾಗಿ ನಿಲ್ಲುವ ಸಂಚಾರಿ ಪೊಲೀಸರು ಹಂತ-ಹಂತವಾಗಿ ಕೈಗಳನ್ನು ಹೇಗೆ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸುತ್ತಿದ್ದಾರೆ.

ಕೊರೊನಾ ಎಫೆಕ್ಟ್: ವಿಶ್ವದ 2.5 ಕೋಟಿ ಕಾರ್ಮಿಕರ ಕೆಲಸಕ್ಕೆ ಕುತ್ತುಕೊರೊನಾ ಎಫೆಕ್ಟ್: ವಿಶ್ವದ 2.5 ಕೋಟಿ ಕಾರ್ಮಿಕರ ಕೆಲಸಕ್ಕೆ ಕುತ್ತು

ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಮನವಿ ಮಾಡಿವೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಅರಿವನ್ನು ಮೂಡಿಸಲಾಗುತ್ತಿದೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ.

English summary
Rachakonda police promoting the washing of hands as part of awareness drive against Coronavirus in Telangana. Video viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X