• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ವಿಡಿಯೋ; ಪ್ರಾಣಪಣಕ್ಕಿಟ್ಟು ನಾಯಿ ಕಾಪಾಡಿದ ಹೋಂ ಗಾರ್ಡ್

|

ಹೈದರಾಬಾದ್, ಸೆಪ್ಟೆಂಬರ್ 17: ನಾಯಿ ಎಂದರೆ ಇಷ್ಟಪಡುವ ಜನರು ಅನೇಕರಿದ್ದಾರೆ. ನಾಯಿಗಳಿಗೆ ಆಹಾರ ಹಾಕುವುದು ಸೇರಿದಂತೆ ಅವರುಗಳ ಆರೈಕೆ ಮಾಡುವ ಶ್ವಾನ ಪ್ರಿಯರು ಇದ್ದಾರೆ. ಆದರೆ, ಇಲ್ಲೊಬ್ಬರು ಜೀವದ ಹಂಗು ತೊರೆದು ನಾಯಿಯ ಜೀವ ಉಳಿಸಿದ್ದಾರೆ.

ತೆಲಂಗಾಣದ ಹೋಂ ಗಾರ್ಡ್‌ ಮುಜೀದ್ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಾಯಿಯನ್ನು ರಕ್ಷಣೆ ಮಾಡಿದ್ದಾರೆ. ಬುಧವಾರ ಮುಜೀದ್ ನಾಯಿಯನ್ನು ಕಾಪಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶ್ರೀನಾಥ್ ಭಲ್ಲೆ ಅಂಕಣ; ನೀವು ನಾಯಿ ಅನುಯಾಯಿಗಳೇ? ಅಲ್ಲವೇ?

ಹೋಂ ಗಾರ್ಡ್ ಮುಜೀದ್ ತೆಲಂಗಾಣದ ನಾಗರ್ ಕುರ್ನೂಲ್ ಎಂಬಲ್ಲಿ ನಾಯಿಯ ಜೀವ ಉಳಿಸಿದ್ದಾರೆ. ಕಾಲುವೆಯಲ್ಲಿ ರಭಸದಿಂದ ನೀರು ಹರಿಯುತ್ತಿತ್ತು. ಪೊದೆಯಲ್ಲಿ ನಾಯಿ ಜೀವ ಉಳಿಸಿಕೊಳ್ಳಲು ಪರದಾಟ ನಡೆಸಿತ್ತು.

ಬೀದಿ ನಾಯಿ ಮೇಲಿನ ಪ್ರೀತಿ; 18 ಸಾವಿರ ಕಳೆದುಕೊಂಡ ಯುವತಿ

ಜೆಸಿಬಿ ಸಹಾಯದಿಂದ ಸ್ಥಳಕ್ಕೆ ಧಾವಿಸಿದ್ದ ಮುಜೀದ್ ನೀರಿನ ರಭಸವನ್ನು ಲೆಕ್ಕಿಸದೆ ನಾಯಿಯನ್ನು ಕಾಪಾಡಿದ್ದಾರೆ. ಜೆಸಿಬಿಯ ಬಕೆಟ್‌ ಮೇಲೆ ನಾಯಿಯನ್ನು ಕೂರಿಸಿಕೊಂಡು ಅದನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ.

ಬೆಳಗಾವಿ: ನಾಯಿ ಉಳಿಸಲು ಹೋಗಿ ಅಪಘಾತದಲ್ಲಿ ಪಿಎಸ್ಐ ಸಾವು

ಮುಜೀದ್ ರಕ್ಷಣಾ ಕಾರ್ಯಾಚರಣೆ ವಿಡಿಯೋವನ್ನು ಹಲವಾರು ಜನರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ

English summary
Viral video of Telangana. Home Guard jawan Mujeed rescued a dog stuck in thick bushes at overflowing stream in Nagarkurnool.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X