ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಮಹಿಳಾ ಅರಣ್ಯ ಅಧಿಕಾರಿಯ ಥಳಿಸಿದ ಶಾಸಕನ ಸಹೋದರ

|
Google Oneindia Kannada News

ಹೈದರಾಬಾದ್, ಜುಲೈ 01: ಖಾಕಿ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಅರಣ್ಯ ಅಧಿಕಾರಿಯೊಬ್ಬರನ್ನು ದೊಣ್ಣೆಯಿಂದ ಶಾಸಕನ ತಮ್ಮನೊಬ್ಬ ಹೊಡೆದಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ವರದಿಯಾಗಿದೆ.

ತೆಲಂಗಾಣದ ಕೌಮರಮ್ ಭೀಮ್ ಆಸಿಫಾಬಾದ್ ಜಿಲ್ಲೆಯ ಸರಸಲ ಎಂಬ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮತ್ತು ಸ್ಥಳೀಯ ಶಾಸಕನ ಸಹೋದರ ಆಗಿರುವ ಕೋನೇರು ಕೃಷ್ಣ ಎಂಬಾತ ಕರ್ತವ್ಯ ನಿರತ ಮಹಿಳಾ ಅಧಿಕಾರಿಗೆ ದೊಣ್ಣೆಯಿಂದ ಭಾರಿಸಿದ್ದಾನೆ.

ಬಳಸಿದ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸಿದ ಹೈದರಾಬಾದ್ ಇಂಜಿನಿಯರ್ಬಳಸಿದ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸಿದ ಹೈದರಾಬಾದ್ ಇಂಜಿನಿಯರ್

ಕೋನೇರು ಕೃಷ್ಣ ಅಮಾನುಷವಾಗಿ ಮಹಿಳಾ ಅಧಿಕಾರಿಗೆ ಹೊಡೆಯುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಕೊನೇರು ಕೃಷ್ಣನನ್ನು ಬಂಧಿಸಿದ್ದಾರೆ.

Video: Woman forest officer beaten by MLA brother in Telangana

ಅರಣ್ಯ ಅಧಿಕಾರಿ ಅನಿತಾ ಅವರು ಸರ್ಕಾರದ ಯೋಜನೆಯಾದ 'ಹರಿತ ಹರಂ' ಯೋಜನೆ ಅಡಿಯಲ್ಲಿ ಗಿಡ ನೆಡಲು ಸರಸಲ ಗ್ರಾಮಕ್ಕೆ ಹೋಗಿದ್ದಾರೆ. ಆಗ ಅಲ್ಲಿಗೆ ತನ್ನ ಬೆಂಬಲಿಗರೊಂದಿಗೆ ಭಾವಿಸಿದ ಕೋನೇರು ಕೃಷ್ಣ ದೊಣ್ಣೆಗಳೊಂದಿಗೆ ಬಂದು ಅರಣ್ಯ ಅಧಿಕಾರಿಗಳ ವಾಹನಗಳು, ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾರೆ.

ಗಾಂಧಿಗಳು ಕ್ಷಮೆ ಕೋರಬೇಕು: ಕಾಂಗ್ರೆಸ್‌ನ ಮಾಜಿ ಪ್ರಧಾನಿ ಮೊಮ್ಮಗ ಆಗ್ರಹ ಗಾಂಧಿಗಳು ಕ್ಷಮೆ ಕೋರಬೇಕು: ಕಾಂಗ್ರೆಸ್‌ನ ಮಾಜಿ ಪ್ರಧಾನಿ ಮೊಮ್ಮಗ ಆಗ್ರಹ

ಅನಿತಾ ಅವರಿಗೆ ಕೈ ಮತ್ತು ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಅನಿತಾ ಅವರು ಆಸ್ಪತ್ರೆಯಲ್ಲಿದ್ದಾರೆ. ಹಲ್ಲೆ ಮಾಡಿರುವ ಕೋನೇರು ಕೃಷ್ಣ, ಸಿರಪುರದ ಟಿಆರ್‌ಎಸ್‌ ಶಾಸಕ ಕೋನೇರು ಕೋನಪ್ಪ ಅವರ ಸಹೋದರನಾಗಿದ್ದಾನೆ. ಹಲ್ಲೆ ಮಾಡಿರುವ ಕೋನೇರು ಕೃಷ್ಣ ಸಹ ಟಿಆರ್‌ಎಸ್ ಪಕ್ಷಕ್ಕೆ ಸೇರಿದವನಾಗಿದ್ದಾನೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಕತೆ ಮುಗೀತು! ವಿರೋಧ ಪಕ್ಷದ ಸ್ಥಾನವೂ ಇಲ್ಲ!ತೆಲಂಗಾಣದಲ್ಲಿ ಕಾಂಗ್ರೆಸ್ ಕತೆ ಮುಗೀತು! ವಿರೋಧ ಪಕ್ಷದ ಸ್ಥಾನವೂ ಇಲ್ಲ!

ಘಟನೆ ಬಗ್ಗೆ ಮಾತನಾಡಿರುವ ತೆಲಂಗಾಣ ಅರಣ್ಯ ಇಲಾಖೆ ಉನ್ನತ ಅಧಿಕಾರಿ, ಅನಿತಾ ಅವರು ಸಿಬ್ಬಂದಿಯೊಂದಿಗೆ ಗಿಡ ನೆಡಲು ತೆರಳಿದ್ದ ಸ್ಥಳ ಅರಣ್ಯ ಇಲಾಖೆಗೆ ಸೇರಿದ್ದು, ಈ ಬಗ್ಗೆ ಸ್ಥಳೀಯ ಶಾಸಕರಿಗೂ ಮೊದಲೇ ತಿಳಿಸಲಾಗಿತ್ತು. ಘಟನೆಯನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ಕ್ರಮಗಳನ್ನು ಮುಂದೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

English summary
A woman forest officer Anitha beaten by MLA's brother Koneru Krishna in Telangana. Koneru Krishna also a zila parishad vice president. he is arrested by police now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X