ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ತೆಲಂಗಾಣ ಮಳೆ ಪ್ರವಾಹಕ್ಕೆ ಸಿಲುಕಿದ ಯುವಕನಿಗೆ ದೇವದೂತರಾದ ಪೊಲೀಸರು

|
Google Oneindia Kannada News

ಸೈಬರಾಬಾದ್ (ತೆಲಂಗಾಣ) ಜುಲೈ 27: ತೆಲಂಗಾಣದ ಸೈಬರಾಬಾದ್ ಪೊಲೀಸರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಮೂಸಿ ನದಿ ಉಕ್ಕಿ ಹರಿಯುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಜೊತೆಗೆ ಹಿಮಾಯತ್ ಸಾಗರ್ ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಿರುವ ಸೇತುವೆ ಮೇಲೆ ಈ ನೀರು ಹರಿಯುತ್ತಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಸೇತುವೆಯನ್ನು ದಾಟಲು ಹೋಗಿ ಬೈಕ್ ಸವಾರನೊಬ್ಬ ನಡು ದಾರಿಯಲ್ಲಿ ಸಿಲುಕಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳವಾರ ವ್ಯಕ್ತಿಯೊಬ್ಬ ತನ್ನ ಬೈಕ್‌ನಲ್ಲಿ ವೇಗವಾಗಿ ಹರಿಯುತ್ತಿರುವ ಪ್ರವಾಹದಲ್ಲಿ ಸಾಗುವ ಹರಸಾಹಸ ಮಾಡುತ್ತಾನೆ. ಆದರೆ, ತೆಲಂಗಾಣದ ಸೈಬರಾಬಾದ್ ಪೊಲೀಸರು ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಿ ಯುವಕನ ಪ್ರಾಣ ಉಳಿಸಿದ್ದಾರೆ. ಎಎನ್‌ಐ ವರದಿ ಪ್ರಕಾರ, ಯುವಕನು ಕಲೀಜ್ ಖಾನ್ ದರ್ಗಾದಿಂದ ಶಂಶಾಬಾದ್‌ಗೆ ಸಂಪರ್ಕ ಕಲ್ಪಿಸುವ ಹಿಮಾಯತ್‌ಸಾಗರ್ ಸರ್ವೀಸ್ ರಸ್ತೆಯಲ್ಲಿ ಸೇತುವೆಯನ್ನು ದಾಟಲು ಪ್ರಯತ್ನಿಸುತ್ತಿದ್ದನು. ಆದರೆ ಮೂಸಿ ನದಿ ಉಕ್ಕಿ ಹರಿಯುತ್ತಿದ್ದರಿಂದ ಸೇತುವೆ ಮೇಲೆ ನೀರು ಹರಿದು ಯುವಕ ಮುಂದೆ ಸಾಗಲು ಸಾಧ್ಯವಾಗಿಲ್ಲ. ಈ ವೇಳೆ ಪೊಲೀಸರು ಯುವಕನನ್ನು ಪ್ರಾಣ ಉಳಿಸಿದ್ದಾರೆ.

ಸೈಬರಾಬಾದ್ ಪೊಲೀಸರ ಅಧಿಕೃತ ಹೇಳಿಕೆಯ ಪ್ರಕಾರ, ರಾಜೇಂದ್ರನಗರ ಸಂಚಾರ ಪೊಲೀಸ್ ಠಾಣೆಯ ಎಚ್‌ಸಿ ಬೇಗ್ ನೇತೃತ್ವದ ಪೊಲೀಸ್ ತಂಡ ಸಂಜೆ 4.45 ರ ಸುಮಾರಿಗೆ ವ್ಯಕ್ತಿಯನ್ನು ರಕ್ಷಿಸಿತು. ''ಕಾಲೀಜ್ ಖಾನ್ ದರ್ಗಾದಿಂದ ಶಂಶಾಬಾದ್‌ಗೆ ಹೋಗುವ ಹಿಮಾಯತ್ ಸಾಗರ್ ಸರ್ವಿಸ್ ರಸ್ತೆಯಲ್ಲಿರುವ ಸೇತುವೆಯನ್ನು ದಾಟಲು ವ್ಯಕ್ತಿ ಪ್ರಯತ್ನಿಸುತ್ತಿದ್ದ. ಈ ವೇಳೆ ಪ್ರವಾಹದಲ್ಲಿ ಸಿಲುಕಿಕೊಂಡನು. ನಾವು ಆತನನ್ನು ಉಳಿಸಿದ್ದೇವೆ'' ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ರಕ್ಷಣೆ ಮಾಡಿದ್ದು ಹೇಗೆ?

ರಕ್ಷಣೆ ಮಾಡಿದ್ದು ಹೇಗೆ?

ಯುವಕ ಕಡಲತೀರದ ಸೇತುವೆಯಲ್ಲಿ ಹೇಗೆ ಸಿಲುಕಿಕೊಂಡ ಎಂದು ಕೇಳಿದಾಗ, ಸೈಬರಾಬಾದ್ ಪೊಲೀಸರು, ನದಿ ನೀರು ಉಕ್ಕಿ ಹರಿಯುತ್ತಿದ್ದರೂ ಯುವಕ ರಸ್ತೆ ದಾಟುವ ಹರಸಾಹಸ ಮಾಡಿದ್ದಾನೆ. ಆದರೆ ಅದು ಸಾಧ್ಯವಾಗದೇ ಮಾರ್ಗಮಧ್ಯೆ ಸಿಲುಕಿದ್ದಾನೆ. ಬಳಿಕ ನಾವು ಸಾಕಷ್ಟು ಸಿಬ್ಬಂದಿ ಮತ್ತು ಸಂಚಾರ ಸಿಬ್ಬಂದಿಯನ್ನು ಎರಡೂ ತುದಿಗಳಲ್ಲಿ ನಿಯೋಜಿಸಲಾಗಿತ್ತು. ದುರದೃಷ್ಟವಶಾತ್ ಆತ ಸೇತುವೆಯಿಂದ ನೀರಿನಲ್ಲಿ ಹರಿದು ಹೋಗಲಿಲ್ಲ. ಒಂದೇ ಸ್ಥಳದಲ್ಲಿ ಆತನ ನಿಂತಿದ್ದನು. ಆಗ ಯುವಕನನ್ನು ಸೇತುವೆಯಿಂದ ದಾಟಿಸಲು ನಮಗೆ ಸಹಾಯವಾಯಿತು. ಪೊಲೀಸರ ಚುರುಕಿನಿಂದ ಯುವಕನನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದರು.

ಜೀವದ ಹಂಗು ತೊರೆದು ರಕ್ಷಣೆ ಮಾಡಿದ ಪೊಲೀಸರು

ಸೈಬರಾಬಾದ್ ಪೊಲೀಸರ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಯುವಕರ ಮುಖದಲ್ಲಿ ಸಾವಿನ ಭಯ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ, ದೇವತೆಯಂತೆ ಆಗಮಿಸಿದ ಸೈಬರಾಬಾದ್ ಪೊಲೀಸರು ಕಬ್ಬಿಣದ ಸರಪಳಿಯಿಂದ ಯುವಕನನ್ನು ಸುರಕ್ಷಿತವಾಗಿ ಹೊರಕ್ಕೆ ಕರೆದೊಯ್ದಿದ್ದಾರೆ. ನೀರಿನ ಬಲವಾದ ಪ್ರವಾಹದಿಂದ ಉಂಟಾಗುವ ಹೃದಯ ವಿದ್ರಾವಕ ಶಬ್ದವು ವೀಡಿಯೊದಲ್ಲಿ ಸ್ಪಷ್ಟವಾಗಿ ಕೇಳುತ್ತದೆ.

ಪ್ರವಾಹದ ನೀರಿನ ತೀವ್ರತೆ ಕಡಿಮೆಯಾಗುವ ಉದ್ದೇಶದಿಂದ ಬೈಕ್‌ಗೆ ಅಡ್ಡಲಾಗಿ ಪೊಲೀಸ್ ರಕ್ಷಣಾ ತಂಡ ವಾಹನವನ್ನು ನಿಲ್ಲಿಸುತ್ತದೆ. ಇದರಿಂದಾಗಿ ನೀರಿನಿಂದ ಯುವಕ ಹರಿದು ಹೋಗಲು ತಡೆಯೊಡ್ಡಿ ಬಳಿಕ ವಾಹನದಲ್ಲಿ ಯುವಕ ಮತ್ತು ಆತನ ಬೈಕ್‌ ಅನ್ನು ಹತ್ತಿಸಿಕೊಳ್ಳಲಾಗುತ್ತದೆ.

ಉಕ್ಕಿ ಹರಿಯುತ್ತಿರುವ ನದಿಗಳು

ತೆಲಂಗಾಣದ ಸೈಬರಾಬಾದ್ ಪೊಲೀಸರು ಬಿಡುಗಡೆ ಮಾಡಿರುವ ಹಿಮಾಯತ್ ಸಾಗರ್ ಸೇತುವೆಯ ರಕ್ಷಣಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು 24 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ತೆಲಂಗಾಣದಲ್ಲಿ ಭಾರೀ ಮಳೆಯಿಂದಾಗಿ ಹಲವು ನದಿಗಳು ಮತ್ತು ತೊರೆಗಳು ಉಕ್ಕಿ ಹರಿಯುತ್ತಿವೆ. ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ತೀರಾ ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಬರುವಂತೆ ಜನರಿಗೆ ಮನವಿ ಮಾಡುತ್ತಿವೆ. ರಕ್ಷಣೆಯ ವೀಡಿಯೋ ಇಲ್ಲಿದೆ ನೋಡಿ.

'ಯುವಕನಿಗೆ ಕಪಾಳಮೋಕ್ಷ ಮಾಡಿ' ನೆಟ್ಟಿಗರು ಗರಂ

'ಯುವಕನಿಗೆ ಕಪಾಳಮೋಕ್ಷ ಮಾಡಿ' ನೆಟ್ಟಿಗರು ಗರಂ

ಸೈಬರಾಬಾದ್ ಪೊಲೀಸರ ಈ ಸಮರ್ಥ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಟ್ವಿಟರ್ ಬಳಕೆದಾರರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಕೆಲಸಕ್ಕಾಗಿ ಪೊಲೀಸರು ಪೂರ್ಣ 100 ಸಂಖ್ಯೆಗಳನ್ನು ಪಡೆಯಬೇಕು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಸೇತುವೆಯ ಮೇಲೆ ಸಿಕ್ಕಿಬಿದ್ದ ಯುವಕನ ದಿಟ್ಟತನವನ್ನು ಮತ್ತೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ರಕ್ಷಣೆಯ ನಂತರ ಪೊಲೀಸರು ಯುವಕನಿಗೆ ಕಪಾಳಮೋಕ್ಷ ಮಾಡಿರಬೇಕು ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.

English summary
A video of police saving a youth caught in floods in Telangana has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X