ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ವರ ಪ್ರಾಣ ಉಳಿಸಿ ತಾನೇ ಕೊಚ್ಚಿಹೋದ ದುರ್ದೈವಿ

By Mahesh
|
Google Oneindia Kannada News

ಹೈದರಾಬಾದ್, ಜೂ.11: ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಆಂಧ್ರದ 24 ವಿದ್ಯಾರ್ಥಿಗಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಮನಾಲಿಯಲ್ಲಿ ಸುಮಾರು 633 ರಕ್ಷಣಾ ಸಿಬ್ಬಂದಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಮೃತ ದುರ್ದೈವಿಗಳ ಪೈಕಿ ಕಿರಣ್ ಕುಮಾರ್ ಎಂಬಾತ ನಾಲ್ವರನ್ನು ರಕ್ಷಿಸಿ ಪ್ರಾಣತೆತ್ತ ದೃಶ್ಯಾವಳಿ ಮನಕಲಕುತ್ತಿದೆ.

ಖಮ್ಮಂ ಜಿಲ್ಲೆಯ ಮೂಲದ ವಿದ್ಯಾರ್ಥಿ ಕಿರಣ್ ಕುಮಾರ್ ಅವರು ನಾಲ್ವರು ವಿದ್ಯಾರ್ಥಿಗಳನ್ನು ರಕ್ಷಿಸಿ ತನ್ನ ಪ್ರಾಣ ತೆತ್ತಿದ್ದಾರೆ. ಆದರೆ, ಆತನ ಪೋಷಕರು ಕಿರಣ್ ಒಳ್ಳೆ ಈಜುಗಾರ ಅವನು ಸುರಕ್ಷಿತ ಸ್ಥಳ ತಲುಪಿರುವ ಭರವಸೆ ಇದೆ ಎಂದು ಆಶಾ ಭಾವನೆಯಲ್ಲಿದ್ದಾರೆ.

ದುರಂತದಿಂದ ಪಾರಾಗಿರುವ ವಿದ್ಯಾರ್ಥಿನಿ ಪ್ರತ್ಯೂಷಾ ಮಾತನಾಡಿ, ಕಿರಣ್ ಗೆ ಆಪತ್ತಿನ ಮುನ್ಸೂಚನೆ ಸಿಕ್ಕಿದ ತಕ್ಷಣವೇ ಎಲ್ಲರನ್ನು ದಡದ ಕಡೆಗೆ ತಳ್ಳಲು ಆರಂಭಿಸಿದ. ನಾಲ್ವರು ದಡ ತಲುಪಿ ಹಿಂತಿರುಗಿ ನೋಡಿದಾಗ ಕಿರಣ್ ನೀರನ ಆರ್ಭಟದ ಎದುರು ದಡ ಸೇರಲು ಯತ್ನಿಸುತ್ತಿದ್ದ ದೃಶ್ಯ ಕಂಡು ಬಂದಿತು. ಪವಾಡ ಏನಾದರೂ ನಡೆದು ಆತ ಬದುಕಿದ್ದರೆ ಸಾಕು' ಎಂದಿದ್ದಾರೆ. [ಅಳಿದುಹೋದವರ ಅಂತಿಮಯಾತ್ರೆ]

Video : Beas tragedy: He saved the lives of 4 friends, got swept away himself

ಹಿಮಾಚಲ ಪ್ರದೇಶದ ಮಂಡಿಯಲ್ಲಿ ಕಳೆದ ಭಾನುವಾರ ಪ್ರವಾಹದಲ್ಲಿ ಕೊಚ್ಚಿಹೋಗಿರುವ ಹೈದರಾಬಾದ್‌ನ ವಿಜ್ಞಾನ ಕಾಲೇಜ್‌ನ ವಿದ್ಯಾರ್ಥಿಗಳ ಪತ್ತೆಗಾಗಿ ಶೋಧ ಕಾರ್ಯ ಬುಧವಾರವೂ ಮುಂದುವರೆದಿದೆ.

ಈ ನಡುವೆ ವಿದ್ಯಾರ್ಥಿಗಳು ನೀರುಪಾಲಾಗುವ ಕೆಲವೇ ಕ್ಷಣಗಳ ಮುನ್ನ ತೆಗೆದ ವಿಡಿಯೋ ಮಾಧ್ಯಮಕ್ಕೆ ಲಭ್ಯವಾಗಿದೆ. ವಿಡಿಯೋದಲ್ಲಿ ವಿದ್ಯಾರ್ಥಿಗಳು ಬಿಯಾಸ್ ನದಿಯ ಮಧ್ಯಭಾಗಕ್ಕೆ ತೆರಳಿ, ಖುಷಿಯಿಂದ ಫೋಟೋ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ದಿಢೀರನೇ ಬಂದ ಭಾರಿ ಪ್ರಮಾಣದ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗುತ್ತಾರೆ.

ವಿಜ್ಞಾನ್ ಕಾಲೇಜಿನ 60 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮನಾಲಿಗೆ ಪ್ರವಾಸಕ್ಕೆ ತೆರಳಿದ್ದರು. ಈ ಪೈಕಿ 24 ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಕಳೆದ ಸೋಮವಾರ ಐವರ ಮೃತದೇಹ ಪತ್ತೆಯಾಗಿದೆ. ಸೂಚನೆ ನೀಡದೆ ನದಿಗೆ ನೀರು ಬಿಟ್ಟಿದ್ದಕ್ಕಾಗಿ ಲಾರ್ಜಿ ಡ್ಯಾಂ ಅಧಿಕಾರಿಗಳ ವಿರುದ್ಧ ಹಿಮಾಚಲ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪಾರ್ವತಿ ಮತ್ತು ಬಿಯಾಸ್ ನದಿಗಳ ಸಂಗಮ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಯಾವುದೇ ಮುನ್ಸೂಚನೆ ನೀಡದೆ ನೀರು ಬಿಟ್ಟ ಲಾರ್ಜಿ ಹೈಡ್ರೋ ಪವರ್ ಪ್ರಾಜೆಕ್ಟ್ ಹಾಗೂ ಡ್ಯಾಂನ ಎಲ್ಲ ಅಧಿಕಾರಿಗಳನ್ನೂ ಹಿಮಾಚಲ ಪ್ರದೇಶ ಸರ್ಕಾರ ಅಮಾನತು ಮಾಡಿದೆ.

English summary
One among the 24 students who got swept away in the beas river would be remembered by his friends as a hero. M Kiran Kumar saved the lives of four of his friends before being swept away by the strong gush of water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X