ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಾಂಕ ಘೋಷಣೆ ಬೆನ್ನಲ್ಲೇ ವೈಎಸ್ಆರ್ ಪಕ್ಷ ಸೇರಿದ ಖ್ಯಾತ ತೆಲುಗು ನಟ

|
Google Oneindia Kannada News

ಹೈದರಾಬಾದ್, ಮಾರ್ಚ್ 11 : ಕೇಂದ್ರ ಚುನಾವಣಾ ಆಯೋಗ ಆಂಧ್ರಪ್ರದೇಶದ ಅಸೆಂಬ್ಲಿ ಮತ್ತು ಸಾರ್ವತ್ರಿಕ ಚುನಾವಣೆಗೆ ದಿನಾಂಕ ಘೋಷಿಸಿದ ಬೆನ್ನಲ್ಲೇ ಖ್ಯಾತ ತೆಲುಗು ಹಾಸ್ಯನಟ ಆಲಿ, ವೈಎಸ್ ಜಗನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

ಸೋಮವಾರ (ಮಾ 11) ಜಗನ್ ಅವರನ್ನು, ಅವರ ಲೋಟಸ್ ಪಾಂಡ್ ನಿವಾಸದಲ್ಲಿ ಭೇಟಿಯಾದ ನಟ ಆಲಿ, ವೈಎಸ್ಆರ್ ಪಕ್ಷವನ್ನು ಸೇರುವ ಮೂಲಕ ಹಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗೆ ತೆರೆ ಎಳೆದಿದ್ದಾರೆ.

ಮೋದಿಗೆ ಅಧಿಕಾರ ತಪ್ಪಿಸಲು ಮತ್ತೊಂದು ಹೆಜ್ಜೆಯಿಟ್ಟ ಚಂದ್ರಬಾಬು ನಾಯ್ಡುಮೋದಿಗೆ ಅಧಿಕಾರ ತಪ್ಪಿಸಲು ಮತ್ತೊಂದು ಹೆಜ್ಜೆಯಿಟ್ಟ ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶದ ಜನತೆ ಜಗನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸುತ್ತಿದ್ದಾರೆ. ಚುನಾವಣೆಯ ವೇಳೆ ಪಕ್ಷದ ಪರವಾಗಿ ಸಕ್ರಿಯವಾಗಿ ತೊಡಗಿಸಿಕೊಂಡು, ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ಆಲಿ ಹೇಳಿದರು.

Veteran Telugu comedian Ali Joins YSRCP and he is willing to contest

ವಿಜಯವಾಡ ಅಥವಾ ರಾಜಮಹೇಂದ್ರಿಯಿಂದ ಪಕ್ಷ ಟಿಕೆಟ್ ನೀಡಿದರೆ ಚುನಾವಣಾ ಕಣಕ್ಕೆ ಇಳಿಯಲಿದ್ದೇನೆ ಎಂದಿರುವ ಆಲಿ, ಎಲ್ಲಾ ನಿರ್ಧಾರವನ್ನು ಜಗನ್ ಅವರಿಗೆ ಬಿಟ್ಟಿದ್ದೇನೆ ಎಂದು ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷದಿಂದ ಯಾವುದೇ ಭರವಸೆ ಸಿಗದ ಹಿನ್ನಲೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದೇನೆ ಎಂದು ಆಲಿ ಹೇಳಿದ್ದಾರೆ.

ಜಗನ್ ರೆಡ್ಡಿಯನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದ ಚಂದ್ರಬಾಬು ನಾಯ್ಡುಜಗನ್ ರೆಡ್ಡಿಯನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದ ಚಂದ್ರಬಾಬು ನಾಯ್ಡು

ಏಪ್ರಿಲ್ ಹನ್ನೊಂದರಂದು (ಮೊದಲ ಹಂತದ ಚುನಾವಣೆ) ಆಂಧ್ರಪ್ರದೇಶದ ಅಸೆಂಬ್ಲಿಗೆ ಚುನಾವಣೆ ನಡೆಯಲಿದೆ. ಮತ್ತು ಅದೇ ದಿನದಂದು ಆಂಧ್ರ (25) ಮತ್ತು ತೆಲಂಗಾಣದಲ್ಲಿರುವ (17) ಒಟ್ಟು (42) ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

English summary
Veteran Telugu Comedian, Actor Ali Joins YSR Congess Party on March 11. Ali said, I am willing to Contest From Vijayawada, Rajahmundry if party gives ticket to me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X