ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒರಿಸ್ಸಾದಲ್ಲಿ ತಗ್ಗಿಲ್ಲ ಫೈಲಿನ್ ಅಬ್ಬರ

|
Google Oneindia Kannada News

ಹೈದರಾಬಾದ್, ಅ.13 : ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಿಗೆ ಬಂದು ಅಪ್ಪಳಿಸಿರುವ 'ಫೈಲಿನ್‌' ಚಂಡಮಾರುತದ ಪ್ರಭಾವ ಭಾನುವಾರ ಬೆಳಗ್ಗೆ ವೇಳೆಗೆ ಸ್ವಲ್ಪ ಕಡಿಮೆಯಾಗಿದೆ. ಆಂಧ್ರಪ್ರದೇಶದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಒಟ್ಟು 8 ಜನರು ಫೈಲಿನ್ ಅಬ್ಬರಕ್ಕೆ ಬಲಿಯಾಗಿದ್ದಾರೆ.

ಗಂಟೆಗೆ 200ಕ್ಕೂ ಹೆಚ್ಚು ಕಿ.ಮೀ. ತೀವ್ರತೆಯ ಭಾರೀ ಬಿರುಗಾಳಿಯೊಂದಿಗೆ ಶನಿವಾರ ರಾತ್ರಿ ಫೈಲಿನ್ ಚಂಡಮಾರುತದ ಆಂಧ್ರಪ್ರದೇಶ ಮತ್ತು ಒರಿಸ್ಸಾ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿತ್ತು. ರಾತ್ರಿ ಎರಡೂ ರಾಜ್ಯಗಳಲ್ಲಿ ಭಾರೀ ಮಳೆಸುರಿದಿದೆ.

cyclone

ಚಂಡಮಾರುತ ಅಪ್ಪಳಿಸಿದ 6 ಗಂಟೆಗಳ ಬಳಿಕ ಅದರ ಪ್ರಭಾವ ಕಡಿಮೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಸದ್ಯ ಭಾನುವಾರ ಬೆಳಗ್ಗೆ ಚಂಡಮಾರುತದ ವೇಗ ಕಡಿಮೆ ಆಗಿದ್ದು, 90 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ ಚಂಡಮಾರುತದ ಅಬ್ಬರ ಕಡಿಮೆಯಾಗಿದ್ದು, ಶ್ರೀಕಾಕುಳಂ ಹೊರತು ಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ಉತ್ತರ ಆಂಧ್ರ ಕರಾವಳಿ ಸಹಜ ಸ್ಥತಿಯತ್ತ ಮರಳುತ್ತಿದೆ. ವಿಶಾಖಪಟ್ಟಣಂ ನಲ್ಲಿ ವಿಮಾನಯಾನ ಸೇವೆಯನ್ನು ಆರಂಭಿಸಲಾಗಿದೆ.

ಆದರೆ, ಒರಿಸ್ಸಾದಲ್ಲಿ ಫೈಲಿನ್ ಚಂಡಮಾರುತದ ಅಬ್ಬರ ಮುಂದುವರೆದಿದೆ. ಮುಂದಿನ 36 ಗಂಟೆಗಳಲ್ಲಿ ಒರಿಸ್ಸಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫೈಲಿನ್ ಚಂಡಮಾರುತ ಉತ್ತರ ಮತ್ತು ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದ್ದರಿಂದ ಛತ್ತೀಸ್ ಗಢ್, ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ.

English summary
The very severe cyclonic storm, PHAILIN over Odisha moved northwards during past 3 hours with a speed of 20 kmph said, India Meteorological Department (IMD). very heavy falls at a few places and isolated extremely heavy fallswould occur over Odisha during next 24 hrs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X