ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹರಡದಂತೆ ತಾನು ಸಾಕಿದ ಆಡುಗಳಿಗೂ ಮಾಸ್ಕ್ ಹಾಕಿದ ವ್ಯಕ್ತಿ

|
Google Oneindia Kannada News

ಖಮ್ಮಂ, ಏಪ್ರಿಲ್ 09: ಕೊರೊನಾ ವೈರಸ್‌ ದೊಡ್ಡ ಮಟ್ಟದಲ್ಲಿ ಹಬ್ಬುತ್ತಿದ್ದರೂ, ಸಾಕಷ್ಟು ಜನರು ಈಗಲೂ ನಿರ್ಲಕ್ಷಾ ತೋರುತ್ತಿದ್ದಾರೆ. ಅನಗತ್ಯವಾಗಿ ಮನೆಯಿಂದ ಆಚೆ ಬರುವುದು, ಮಾಸ್ಕ್ ಧರಿಸದೆ ಓಡಾಟ ಮಾಡುವುದು ಕಂಡು ಬರುತ್ತಿದೆ. ಆದರೆ, ತೆಲಂಗಾಣದ ವ್ಯಕ್ತಿಯೊಬ್ಬರು ತನ್ನ ಕುಟುಂಬದ ಜೊತೆಗೆ ತಾನು ಸಾಕಿರುವ ಪ್ರಾಣಿಗಳನ್ನು ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸಿದ್ದಾರೆ.

ತೆಲಂಗಾಣದ ಖಮ್ಮಂ ನಿವಾಸಿ ವೆಂಕಟೇಶ್ ರಾವ್ ಆಡುಗಳನ್ನು ಸಾಕಿದ್ದಾರೆ. ಆತ ಕೊರೊನಾ ವೈರಸ್‌ ಹರಡಬಾರದು ಎಂದು ಅವುಗಳಿಗೂ ಮಾಸ್ಕ್ ಹಾಕಿದ್ದಾರೆ. ತನ್ನ ಬಳಿ 20 ಆಡುಗಳಿದ್ದು, ಎಲ್ಲವಕ್ಕೂ ಮಾಸ್ಕ್ ಹಾಕಿದ್ದಾರೆ. ಈ ಫೋಟೋ ಈಗ ಜನರ ಗಮನ ಸೆಳೆದಿದೆ.

ಹುಲಿಗೆ ಕೊರೊನಾ ಸೋಂಕು: ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರಹುಲಿಗೆ ಕೊರೊನಾ ಸೋಂಕು: ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ

ನ್ಯೂಯಾರ್ಕ್ ನಲ್ಲಿ ಹುಲಿಗೆ ಕೊರೊನಾ ವೈರಸ್ ಪಾಸಿಟಿವ್ ಆದ ಪ್ರಕರಣ ದಾಖಲಾಗಿದೆ. ಈ ಸುದ್ದಿಯನ್ನು ನೋಡಿದ ವೆಂಕಟೇಶ್ ರಾವ್ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದಾರಂತೆ. ತನ್ನ ಆಡುಗಳಿಗೆ ಕೊರೊನಾ ವೈರಸ್‌ ಹರಡಬಾರದು ಎಂದು ಮಾಸ್ಕ್ ಹಾಕಿದ್ದಾರಂತೆ.

Venkatesh A Telangana Man Ties Masks On His Goats

ವೆಂಕಟೇಶ್ ಯಾವುದೇ ಕೃಷಿ ಭೂಮಿಯನ್ನು ಹೊಂದಿಲ್ಲ. ತನ್ನ ಜೀವನ ಸಾಗಿಸಲು ಆಡುಗಳನ್ನು ನಂಬಿಕೊಂಡಿದ್ದಾರೆ. ಹೀಗಾಗಿ ಅವುಗಳಿಗೆ ಸ್ವಲ್ಪವೂ ತೊಂದರೆ ಆಗದಂತೆ ಅವರು ನೋಡಿಕೊಳ್ಳುತ್ತಿದ್ದಾರೆ.

ಅಂದಹಾಗೆ, ಈವರೆಗೆ ತೆಲಂಗಾಣದಲ್ಲಿ 427 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 7 ಜನರು ಕೊರೊನಾದಿಂದ ಮೃತರಾಗಿದ್ದಾರೆ.

English summary
Venkatesh A telangana man ties masks on his goats after tiger tests coronavirus positive in new york.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X