ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಮುಂದುವರಿಕೆ ಸಾಧ್ಯತೆ ಶೇ 1ರಷ್ಟೂ ಇಲ್ಲ: ಮೊಯ್ಲಿ

|
Google Oneindia Kannada News

ಹೈದರಾಬಾದ್, ಜೂನ್ 28: ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಶೇ 1ರಷ್ಟು ಕೂಡ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಲು ರಾಹುಲ್ ಗಾಂಧಿ ಪಟ್ಟುಹಿಡಿದು ಕುಳಿತಿದ್ದಾರೆ. ಈ ವಿಚಾರವನ್ನು ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ನಿರ್ಧರಿಸಲಿದೆ ಎಂದು ಅವರು ತಿಳಿಸಿದರು.

ದೇವೇಗೌಡರು ಹೇಗೆ ಬೇಕಾದರೂ ಬದಲಾಗುತ್ತಾರೆ: ವೀರಪ್ಪ ಮೊಯ್ಲಿ ದೇವೇಗೌಡರು ಹೇಗೆ ಬೇಕಾದರೂ ಬದಲಾಗುತ್ತಾರೆ: ವೀರಪ್ಪ ಮೊಯ್ಲಿ

ಪಕ್ಷದ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಏನು ಬೇಕಾದರೂ ಆಗಬಹುದು. ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಶೇ 1ರಷ್ಟು ಕೂಡ ಇಲ್ಲ. ಯಾವುದೇ ಬೇರೆ ಹೆಸರನ್ನು ಪರಿಗಣಿಸುವ ಮುನ್ನ ಸಿಡಬ್ಲ್ಯೂಸಿ ಖಂಡಿತವಾಗಿಯೂ ಸಭೆ ಸೇರಲಿದೆ. ಸಿಡಬ್ಲ್ಯೂಸಿ ಅವರ ರಾಜೀನಾಮೆ ಅಂಗೀಕರಿಸಿದ ಹೊರತು ಊಹಾಪೋಹಗಳು ಮತ್ತು ರಾಹುಲ್ ಅವರ ಪಟ್ಟು ಮುಂದುವರಿಯಲಿದೆ ಎಂದರು.

veerappa moily congress president rahul gandhi not even 1 per cent possibility

ರಾಹುಲ್ ಗಾಂಧಿ ಅವರ ಸ್ಥಾನಕ್ಕೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ನೇಮಿಸಬೇಕೆಂಬ ಕಾಂಗ್ರೆಸ್‌ನ ಕೆಲವು ನಾಯಕ ಬೇಡಿಕೆಗೆ ಪ್ರತಿಕ್ರಿಯಿಸಲು ಮೊಯ್ಲಿ ನಿರಾಕರಿಸಿದರು. ಸಿಡಬ್ಲ್ಯೂಸಿ ಮುಂದಿನ ಸೂಕ್ತ ಕ್ರಮ ತೆಗೆದುಕೊಳ್ಳುವವರೆಗೂ ನಾನು ಕಾಯಲು ಬಯಸುತ್ತೇನೆ ಎಂದು ಹೇಳಿದರು.

English summary
Former Union Minister M Veerappa Moily said that, there is not even 1% of possibility of Rahul Gandhi continuing as Congress President.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X