ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಅಧ್ಯಕ್ಷರ ಭೇಟಿ ಮಾಡಿಸಿ, ಸರ್ಕಾರಕ್ಕೆ ಮೊರೆಯಿಟ್ಟ ಟ್ರಂಪ್ ''ಭಕ್ತ"

|
Google Oneindia Kannada News

ಅಹಮದಾಬಾದ್, ಫೆಬ್ರವರಿ 19: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತಕ್ಕೆ ಭೇಟ ನೀಡುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ತೆಲಂಗಾಣದ ವ್ಯಕ್ತಿಯೊಬ್ಬನಿಗೆ ಎಲ್ಲೆಲ್ಲಿದ ಆನಂದವಾಗಿದೆ. ತನ್ನ ಆರಾಧ್ಯ ದೈವ ಟ್ರಂಪ್ ನೋಡಲು ಒಂದೇ ಒಂದು ಅವಕಾಶ ಸಿಕ್ಕರೆ ಸಾಕು ಎಂದು ಕಾದಿರುವ ಟ್ರಂಪ್ ಭಕ್ತನ ಹೆಸರು ಬುಸಾ ಕೃಷ್ಣ.

"ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ಇನ್ನಷ್ಟು ಸದೃಢಗೊಳ್ಳಬೇಕು, ಪ್ರತಿ ಶುಕ್ರವಾರದಂದು ನಾನು ಟ್ರಂಪ್ ಏಳಿಗೆಗಾಗಿ ಉಪವಾಸ ವ್ರತ ಕೈಗೊಂಡಿದ್ದೇನೆ. ಪ್ರತಿ ಒಳ್ಳೆ ಕೆಲಸಕ್ಕೂ ಮುನ್ನ ಟ್ರಂಪ್ ಅವರ ಫೋಟೋಗೆ ನಮಿಸಿ, ಎಲ್ಲವೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ. ನಾನು ಅವರನ್ನು ಒಮ್ಮೆಯಾದರೂ ಭೇಟಿಯಾಗಬೇಕಿದೆ. ನನ್ನ ಕನಸನ್ನು ಸರ್ಕಾರ ನೆರವೇರಿಸಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ" ಎಂದು ಎಎನ್ಐ ಜೊತೆ ಮಾತನಾಡಿದ ಕೃಷ್ಣ ಹೇಳಿಕೊಂಡಿದ್ದಾನೆ.

ಟ್ರಂಪ್ ಭೇಟಿ: ವಿಮಾನ ನಿಲ್ದಾಣ ಮಾರ್ಗದ ಪಾನ್ ಶಾಪ್ ಬಂದ್ ಟ್ರಂಪ್ ಭೇಟಿ: ವಿಮಾನ ನಿಲ್ದಾಣ ಮಾರ್ಗದ ಪಾನ್ ಶಾಪ್ ಬಂದ್

ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ವಹಿಸಿಕೊಂಡಾಗ ಸಂಭ್ರಮಿಸಿ ಸಿಹಿ ಹಂಚಿದ್ದ ಕೃಷ್ಣ ನಂತರ, ಟ್ರಂಪ್ ಪ್ರತಿಮೆ(6 ಅಡಿ ಎತ್ತರ) ಸ್ಥಾಪಿಸಿದ್ದಾರೆ. ಬುಸ್ಸಾ ಕೃಷ್ಣನನ್ನು ಅವನ ಊರಿನಲ್ಲಿ ಟ್ರಂಪ್ ಕೃಷ್ಣ ಎಂದೇ ಕರೆಯುತ್ತಾರೆ.

‘Urge govt to fulfil my dream’: Donald Trump ‘bhakt’ Bussa Krishna wants to meet US President

ನನಗೆ ಶಿವ ಬೇರೆಯಲ್ಲ ಟ್ರಂಪ್ ಬೇರೆಯಲ್ಲ, ಇಬ್ಬರೂ ಸರ್ವಶಕ್ತಿಶಾಲಿಗಳು ಎಂದಿರುವ ಕೃಷ್ಣ ಜೀವನೋಪಾಯಕ್ಕೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದಾರೆ. 1.3 ಲಕ್ಷ ರು ವೆಚ್ಚದಲ್ಲಿ ಪ್ರತಿಮೆ ಸ್ಥಾಪಿಸಿದ್ದು, ಟ್ರಂಪ್ ಹುಟ್ಟುಹಬ್ಬದ ದಿನದಂದು ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸುತ್ತಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಹಮದಾಬಾದ್‌ಗೆ ಅವರು ಭೇಟಿ ನೀಡಲಿದ್ದು, ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಜೊತೆ ರೋಡ್ ಶೋ ನಡೆಸಲಿದ್ದಾರೆ. ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದು, ನಂತರ ಮೊಟೆರಾದ ನೂತನ ಬೃಹತ್ ಕ್ರೀಡಾಂಗಣ ಉದ್ಘಾಟಿಸಿ, ಭಾಷಣ ಮಾಡಲಿದ್ದಾರೆ.

English summary
Bussa Krishna, US President Donald Trump's 'biggest fan' from Telangana has requested the Centre to fulfill his wish to meet his idol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X