ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂಟ್ಯೂಬಿನ ಸ್ಟಾರ್ ಶೆಫ್ ರೆಡ್ಡಿ ನಿಧನಕ್ಕೆ ಕಂಬನಿ ಮಿಡಿದ ಯೂನಿಸೆಫ್

|
Google Oneindia Kannada News

ಹೈದರಾಬಾದ್, ನವೆಂಬರ್ 02: ಯೂಟ್ಯೂಬಿನಲ್ಲಿ ಅಡುಗೆ ವಿಡಿಯೋಗಳನ್ನು ಹಿಂಬಾಲಿಸುವವರ ಪಾಲಿನ ನೆಚ್ಚಿನ ಶೆಫ್ 'ಗ್ರ್ಯಾಂಡ್ ಪಾ ಕಿಚನ್' ಖ್ಯಾತಿಯ ಸ್ಟಾರ್ ಶೆಫ್ ನಾರಾಯಣ ರೆಡ್ಡಿ (73) ನಿಧನಕ್ಕೆ ಯೂನಿಸೆಫ್ ಕೂಡಾ ಕಂಬಿನಿ ಮಿಡಿದಿದೆ.

ತೆಲಂಗಾಣ ಮೂಲದ ಈ ಅಜ್ಜನ ಅಡುಗೆ ಅರಮನೆ ಹೊಕ್ಕರೆ ಅಲ್ಲಿ ಪ್ರೀತಿ, ಆರೈಕೆ, ಹಂಚಿಕೆ ಮುಖ್ಯವಾಗಿ ಕಾಣಬಹುದಾಗಿದೆ. ಇದು ನಾರಾಯಣ ರೆಡ್ಡಿ ಅವರ ಧ್ಯೇಯವಾಗಿತ್ತು ಎಂದು ತಮ್ಮ ಟ್ವೀಟ್ ನಲ್ಲಿ ಯೂನಿಸೆಫ್ ಕಾರ್ಯಕಾರಿ ನಿರ್ದೇಶಕಿ ಹೆನ್ಸಿಟಾ ಫೋರ್ ಹೇಳಿದ್ದಾರೆ. ಲಕ್ಷಾಂತರ ಮಂದಿಯ ಹೃದಯ ಗೆದ್ದ ನಾರಾಯಣ ರೆಡ್ಡಿ ಅವರು ನಮಗೆಲ್ಲರಿಗೂ ಮಾದರಿ ಎಂದಿದ್ದಾರೆ.

Unicef Executive Director condolences death of Youtuber Narayana reddy

2017ರಲ್ಲಿ ಯೂಟ್ಯೂಬಿಗೆ ಎಂಟ್ರಿ ಕೊಟ್ಟ ಅಜ್ಜ ರೆಡ್ಡಿ ಅವರು 'ಗ್ರ್ಯಾಂಡ್ ಪಾ ಕಿಚನ್' ಹೆಸರಿನಲ್ಲಿ ತಮ್ಮದೇ ಚಾನೆಲ್ ಹೊಂದಿದ್ದರು. 60 ಲಕ್ಷಕ್ಕೂ ಅಧಿಕ ಚಂದಾದಾರನ್ನು ಹೊಂದಿದ್ದ ನಾರಾಯಣಾ ರೆಡ್ಡಿ ಅವರು ತಾವು ತಯಾರಿಸಿದ ತಿಂಡಿ, ತಿನಿಸು, ಅಡುಗೆಯನ್ನು ಸಮೀಪದ ಅನಾಥಾಶ್ರಮದ ಮಕ್ಕಳಿಗೆ ಹಂಚುತ್ತಿದ್ದರು.

ಬಯಲಿನಲ್ಲಿ ಕಟ್ಟಿಗೆ ಸೌದಿ ಬಳಸಿ ಅಡುಗೆ ಮಾಡುತ್ತಿದ್ದ ನಾರಾಯಣ ರೆಡ್ಡಿ, ಚಿಕನ್ ಬಿರಿಯಾನಿ, ಲಾಲಿಪಪ್ಸ್, ವಿವಿಧ ಚಿಪ್ಸ್, ಪಿಜ್ಜಾ, ಬರ್ಗರ್ ಅಲ್ಲದೆ ವಿವಿಧ ಬಗೆಯ ಕೇಕ್ ಗಳನ್ನು ಮಾಡುತ್ತಿದ್ದರು. ಅಕ್ಟೋಬರ್ 27ರಂದು ರೆಡ್ಡಿ ಅವರು ನಿಧನರಾಗಿದ್ದು, ಅವರ ಅಂತಿಮ ಸಂಸ್ಕಾರ ವಿಧಿ ವಿಧಾನ ಮುಗಿದ ಬಳಿಕ ಶುಕ್ರವಾರದಂದು ಅವರ ಕುಟುಂಬಸ್ಥರೊಬ್ಬರು ಸುದ್ದಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ದೇಶ ವಿದೇಶಗಳಿಂದ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

English summary
Unicef Executive Director Henrietta H Fore in her tweet condolences death of Senior Youtuber Narayana reddy whose enormous meals served local orphan children. Narayana Reddy, of Grandpa Kitchen, died at 73.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X