ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಪ್ರಾಣಿಗಳ ಜೀವ ಉಳಿಸಿದ ಪೊಲೀಸ್ ಪೇದೆಗಳು

|
Google Oneindia Kannada News

ಹೈದರಾಬಾದ್, ಏಪ್ರಿಲ್ 23 : ಪೊಲೀಸರ ಕೆಲಸ ಎಂದರೆ ಹಾಗೆಯೇ. ತುರ್ತು ಸಂದರ್ಭದಲ್ಲಿ ಸಮಯವನ್ನು ನೋಡದೆ ಅವರು ಕೆಲಸ ಮಾಡಬೇಕಾಗುತ್ತದೆ. ಹೀಗೆ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಮೂಕ ಪ್ರಾಣಿಗಳ ಜೀವ ಉಳಿದಿದೆ.

ತೆಲಂಗಾಣದ ಇಬ್ಬರು ಪೊಲೀಸ್ ಪೇದೆಗಳ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಠಾಣೆಗೆ ವಾಪಸ್ ಹೊರಟಿದ್ದ ಇಬ್ಬರು ಪೇದೆಗಳು ಮಾಡಿದ ಕೆಲಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಧಾರವಾಡ; ಪೊಲೀಸ್ ಅಧಿಕಾರಿಯಿಂದ ಸ್ವಂತ ಖರ್ಚಲ್ಲಿ ದಿನಸಿ ವಿತರಣೆ ಧಾರವಾಡ; ಪೊಲೀಸ್ ಅಧಿಕಾರಿಯಿಂದ ಸ್ವಂತ ಖರ್ಚಲ್ಲಿ ದಿನಸಿ ವಿತರಣೆ

ರವೀಂದ್ರ ರೆಡ್ಡಿ, ಯಾದಗಿರಿ ಎಂಬ ಇಬ್ಬರು ಪೇದೆಗಳು ರಾಮಣ್ಣ ಪೇಟ್ ಪೊಲೀಸ್ ಠಾಣೆಯ ಸಿಬ್ಬಂದಿಗಳು. ಲಾಕ್ ಡೌನ್ ಸಂದರ್ಭದಲ್ಲಿ ಇಬ್ಬರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ತಮ್ಮ ಡ್ಯೂಟಿ ಮುಗಿಸಿ ಇವರು ಠಾಣೆಗೆ ವಾಪಸ್ ಹೊರಟಿದ್ದರು.

ತರಕಾರಿ ಮಾರುಕಟ್ಟೆಯಲ್ಲಿ ''ಪಾಸ್'' ಕೇಳಿದ ಪೊಲೀಸ್ ಕೈ ಕಟ್ ತರಕಾರಿ ಮಾರುಕಟ್ಟೆಯಲ್ಲಿ ''ಪಾಸ್'' ಕೇಳಿದ ಪೊಲೀಸ್ ಕೈ ಕಟ್

Two Police Constables Saved Cattle From Fire Accident

ದಾರಿಯಲ್ಲಿ ಅವರಿಗೆ ಕೊಟ್ಟಿಗೆಗೆ ಬೆಂಕಿ ಬಿದಿದ್ದು ಕಂಡಿದೆ. ಹಸು ಮತ್ತು ಎಮ್ಮೆಗಳನ್ನು ಕಟ್ಟಿ ಹಾಕಿದ್ದ ಕೊಟ್ಟಿಗೆ ಹೊತ್ತಿ ಉರಿಯುತ್ತಿತ್ತು. ತಮ್ಮ ಜೀವ ಲೆಕ್ಕಿಸದೇ ಕೊಟ್ಟಿಗೆಗೆ ನುಗ್ಗಿದ ಇಬ್ಬರು ಅವುಗಳ ಹಗ್ಗವನ್ನು ಬಿಚ್ಚಿದರು.

 ಶಿವಮೊಗ್ಗ; ವಾಕಿಂಗ್ ಬಂದವರನ್ನು ಲಾಕ್ ಮಾಡಿ ಕ್ಲಾಸ್ ತೆಗೆದುಕೊಂಡ ಎಸ್ಪಿ, ಡಿಸಿ ಶಿವಮೊಗ್ಗ; ವಾಕಿಂಗ್ ಬಂದವರನ್ನು ಲಾಕ್ ಮಾಡಿ ಕ್ಲಾಸ್ ತೆಗೆದುಕೊಂಡ ಎಸ್ಪಿ, ಡಿಸಿ

ಹಸು, ಎಮ್ಮೆ ಬೆಂಕಿಯ ಕೆನ್ನಾಗಲಿಗೆಗೆ ಸಿಲುಕುವುದು ಬೇಡ ಎಂದು ಅವುಗಳ ಹಗ್ಗ ಬಿಚ್ಚಿ ಓಡಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಪೇದೆಗಳ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ.

English summary
In Telangana two police constables saved cattle that were stuck amid a fire that broke out in the animal shed where they were tied. Constables on their way to Ramannapet police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X