• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗ್ರೇಟರ್ ಹೈದರಾಬಾದ್‌ ಮೇಯರ್, ಉಪ ಮೇಯರ್ ಸ್ಥಾನ ಟಿಆರ್‌ಎಸ್‌ಗೆ

|

ಹೈದರಾಬಾದ್, ಫೆಬ್ರವರಿ 11: ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (ಜಿಎಚ್ ಎಂಸಿ) ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದಿದ್ದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಇಂದು ಮೇಯರ್ ಹಾಗೂ ಉಪ ಮೇಯರ್ ಗಳನ್ನು ಹೆಸರಿಸಿದೆ.

ಡಿ.1ರಂದು 150 ಸ್ಥಾನಕ್ಕಾಗಿ ಗ್ರೇಟರ್ ಹೈದರಾಬಾದಿನ ವಿವಿಧ ವಲಯಗಳಲ್ಲಿ ಮತದಾನ ನಡೆಸಲಾಗಿತ್ತು. ಡಿ. 4ರಂದು ಫಲಿತಾಂಶ ಪ್ರಕಟವಾಗಿತ್ತು. ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಂಡಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ.

ವಿಜಯಲಕ್ಷ್ಮಿ ಆರ್ ಗದ್ವಾಲ್ ಅವರು ಮೇಯರ್ ಆಗಿ ಹಾಗೂ ಮೊಥೆ ಶ್ರೀಲತಾ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಜಿಎಚ್‌ಎಂಸಿ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್‌ಎಸ್ 150 ವಾರ್ಡ್‌ಗಳ ಪೈಕಿ 55 ವಾರ್ಡ್‌ಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿ 48 ಮತ್ತು ಎಐಎಂಐಎಂ 44 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಎಐಎಂಐಎಂ ಬಾಹ್ಯ ಬೆಂಬಲದಿಂದ ಟಿಆರ್‌ಎಸ್ ಮತ್ತೊಮ್ಮೆ ಪಾಲಿಕೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

2016ರಲ್ಲಿನಡೆದ ಚುನಾವಣೆಯಲ್ಲಿ ಟಿಆರ್‌ಎಸ್ 99 ಸೀಟುಗಳಲ್ಲಿ ಗೆದ್ದು ಭರ್ಜರಿ ಬಹುಮತ ಪಡೆದುಕೊಂಡಿತ್ತು. ಆಗ ಬಿಜೆಪಿ ಕೇವಲ ನಾಲ್ಕು ಕಡೆ ಗೆಲುವು ಕಂಡಿತ್ತು. ಈ ಬಾರಿ ಟಿಆರ್‌ಎಸ್ ಶೇ 40ರಷ್ಟು ಸೀಟುಗಳನ್ನು ಕಳೆದುಕೊಂಡಿದೆ.

ಮಹಿಳಾ ಮೇಯರ್:
1951ರಿಂದ ಹೈದರಾಬಾದ್ ಕಾರ್ಪೊರೇಷನ್ ಇದ್ದು, ಆಂಧ್ರ -ತೆಲಂಗಾಣ ವಿಭಜನೆಗೂ ಮುನ್ನ ಮಹಿಳಾ ಪ್ರಥಮ ಪ್ರಜೆಯನ್ನು ಮುತ್ತಿನನಗರಿ ಕಂಡಿತ್ತು.

ಆದರೆ, 2009ರಿಂದ ಗ್ರೇಟರ್ ಹೈದರಾಬಾದ್ ಪಾಲಿಕೆ ರೂಪುಗೊಂಡಿದೆ. 2009ರಲ್ಲಿ ಕಾಂಗ್ರೆಸ್ಸಿನ ಬಂಡ ಕಾರ್ತಿಕ್ ರೆಡ್ಡಿ, 2012ರಲ್ಲಿ ಎಐಎಂಐಎಂನ ಮೊಹಮ್ಮದ್ ಮಾಜಿದ್ ಹುಸೇನ್ ಹಾಗೂ 2016ರಿಂದ ಟಿಆರ್‌ಎಸ್ ಪಕ್ಷದ ಬೊಂಥು ರಾಮ್ ಮೋಹನ್ ಅವರು ಮೇಯರ್ ಆಗಿದ್ದಾರೆ.

ಈ ಬಾರಿ ಆಯ್ಕೆಯಾಗಿರುವ ವಿಜಯಲಕ್ಷ್ಮಿ ಅವರು ಟಿಆರ್ ಎಸ್ ರಾಜ್ಯಸಭಾ ಸದಸ್ಯ ಕೆ ಕೇಶವರಾವ್ ಅವರ ಪುತ್ರಿಯಾಗಿದ್ದಾರೆ. ಬಿಎ, ಎಲ್ ಎಲ್ ಬಿ ಪದವೀಧರೆ ಎಂದು ಪಕ್ಷ ಹೇಳಿದೆ. ಯುಎಸ್ ನಲ್ಲಿ ನೆಲೆಸಿದ್ದ ಇವರು ಡ್ಯೂಕ್ ವಿವಿಯಲ್ಲಿ ಸಂಶೋಧನಾ ಸಹಾಯಕಿಯಾಗಿದ್ದರು. 2007ರಲ್ಲಿ ಹೈದರಬಾದಿಗೆ ಹಿಂತಿರುಗಿದರು. 2016ರಲ್ಲಿ ಬಂಜರಾ ಹಿಲ್ಸ್ ವಾರ್ಡ್ ನಲ್ಲಿ ಜಯ ಗಳಿಸಿದ್ದರು. 2020ರಲ್ಲೂ ಇದೇ ವಾರ್ಡ್ ನಲ್ಲಿ ಗೆದ್ದಿದ್ದಾರೆ.

English summary
The ruling TRS in Telangana on Thursday bagged the Mayor and Deputy Mayor posts in the Greater Hyderabad Municipal Corporation (GHMC) with the support of ex-officio members and the AIMIM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X