ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ಉದಯ, ಸಿಂಗಾರಗೊಂಡ ಹೈದರಾಬಾದ್

By Mahesh
|
Google Oneindia Kannada News

ಹೈದರಾಬಾದ್, ಜೂ.1:-ಟಿಆರ್‌ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ್‌ರಾವ್ ಅವರು ಮಂಗಳವಾರ ನೂತನ ತೆಲಂಗಾಣ ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವಿಭಜಿತ ಆಂಧ್ರಕ್ಕೆ ವಿಧಿಸಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಭಾಗಶಃ ತೆರವುಗೊಳಿಸಲಾಗುತ್ತದೆ.

ಚಂದ್ರಶೇಖರರಾವ್ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿರುವ ಹಿನ್ನೆಲೆಯಲ್ಲಿ ತೆಲಂಗಾಣದ ಮೇಲಿನ ರಾಷ್ಟ್ರಪತಿ ಆಡಳಿತ ತೆರವಾಗಲಿದ್ದು, ಸೀಮಾಂಧ್ರದಲ್ಲಿ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಸೀಮಾಂಧ್ರ ಮುಖ್ಯಮಂತ್ರಿಯಾಗಿ ಎನ್.ಚಂದ್ರಬಾಬು ನಾಯ್ಡು ಮುಂದಿನ ವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಚಂದ್ರಶೇಖರರಾವ್ ಅವರು ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅನುವಾಗುವಂತೆ ನಾಳೆ ಬೆಳಗ್ಗೆ ನೂತನ ರಾಜ್ಯದ ಮೇಲಿನ ರಾಷ್ಟ್ರಪತಿ ಆಡಳಿತವನ್ನು ಕೇಂದ್ರ ಸರ್ಕಾರ ತೆರವುಗೊಳಿಸುವ ಸಾಧ್ಯತೆಗಳಿವೆ. ಈ ಕುರಿತಂತೆ ನಾಳೆಯೊಳಗಾಗಿ ಅಧಿಸೂಚನೆ ಹೊರಬೀಳಲಿದೆ. ರಾಜಭವನದಲ್ಲಿ ಬೆಳಗ್ಗೆ 8.15ರಿಂದ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಇದಕ್ಕಾಗಿ ಹೈದರಾಬಾದ್ ನಗರವಿಡಿ ನವವಧುವಿನಂತೆ ಸಜ್ಜಾಗುತ್ತಿದೆ.[ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?]

ಕಳೆದ ಮಾ.1 ರಂದು ಅಂದಿನ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ರಾಜೀನಾಮೆ ಕೊಟ್ಟ ಸಂದರ್ಭ ಆಂಧ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಆಂಧ್ರ ವಿಭಜನೆ ವಿರೋಧಿಸಿ ಕಿರಣ್‌ಕುಮಾರ್ ರೆಡ್ಡಿ ರಾಜೀನಾಮೆ ನೀಡಿದ್ದರು. ಒಟ್ಟು 119 ಸ್ಥಾನಗಳನ್ನು ಹೊಂದಿರುವ ತೆಲಂಗಾಣ ವಿಧಾನಸಭೆಯಲ್ಲಿ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ 63 ಸ್ಥಾನಗಳಲ್ಲಿ ಜಯಗಳಿಸಿ ಸ್ಪಷ್ಟ ಬಹುಮತ ಸಾಧಿಸಿದೆ. ಹೈದರಾಬಾದ್ ನಗರದ ಸಿಂಗಾರದ ಚಿತ್ರಗಳನ್ನು ತಪ್ಪದೇ ನೋಡಿ

29ನೇ ರಾಜ್ಯವಾಗಿ ಅಧಿಕೃತವಾಗಿ ತೆಲಂಗಾಣ

29ನೇ ರಾಜ್ಯವಾಗಿ ಅಧಿಕೃತವಾಗಿ ತೆಲಂಗಾಣ

ದೇಶದ 29ನೇ ರಾಜ್ಯವಾಗಿ ನಾಳೆಯಿಂದ ಅಧಿಕೃತವಾಗಿ ಉದಯಿಸಲಿರುವ ನೂತನ ತೆಲಂಗಾಣ ರಾಜ್ಯಕ್ಕೆ ಕೇಂದ್ರ ಸರ್ಕಾರವು 44 ಮಂದಿ ಐಎಎಸ್ (ಇಂಡಿಯನ್ ಆಡ್ಮಿನಿಸ್ಟ್ರೇಟಿನ್ ಸರ್ವಿಸ್)ಅಧಿಕಾರಿಗಳ ನೇಮಕಾತಿಗೆ ಮಂಜೂರಾತಿ ನೀಡಿದೆ. ಮಂಜೂರಾತಿ ನೀಡಲಾಗಿರುವ ಈ ಐಎಎಸ್ ಅಧಿಕಾರಿಗಳು ಅವಿಭಜಿತ ಆಂಧ್ರಪ್ರದೇಶದ ಮೂಲದವರಾಗಿದ್ದು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಪಾರ್ಟ್‌ಮೆಂಟ್ ಆಫ್ ಪರ್ಸೊನೆಲ್ ಅಂಡ್ ಟ್ರೈನಿಂಗ್) ಇಲಾಖಾ ಅನುಮೋದನೆ ನೀಡಿದೆ.

ಐಎಎಸ್, ಐಪಿಎಸ್ ಅಧಿಕಾರಗಳು ಅಲ್ಲಿಂದ ಇಲ್ಲಿಗೆ

ಐಎಎಸ್, ಐಪಿಎಸ್ ಅಧಿಕಾರಗಳು ಅಲ್ಲಿಂದ ಇಲ್ಲಿಗೆ

ಎಷ್ಟು ಸಂಖ್ಯೆಯ ಐಎಎಸ್, ಐಪಿಎಸ್(ಪೊಲೀಸ್) ಹಾಗೂ ಐಎಫ್‌ಎಸ್ (ಅರಣ್ಯ) ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರವು ರಚಿಸಿದ ಪರಿಶೀಲನಾ ಸಮಿತಿಯು ಈಗಾಗಲೇ ನೂತನ ತೆಲಂಗಾಣ ರಾಜ್ಯಕ್ಕೆ163 ಐಎಎಸ್, 112 ಐಪಿಎಸ್ ಹಾಗೂ 62 ಐಎಫ್‌ಎಸ್‌ಗಳ ನೇಮಕಾತಿಗೆ ಶಿಫಾರಸು ಮಾಡಿದೆ. ಆಂಧ್ರಪ್ರದೇಶ(ಅವಿಭಜಿತ)ದಲ್ಲಿ ಈಗ ಹಾಲಿ 284 ಐಎಎಸ್, 209 ಐಪಿಎಸ್ ಹಾಗೂ 136 ಐಎಫ್‌ಎಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಸಿಆರ್ ಸಂಪುಟದಲ್ಲಿ ಯಾರಿಗೆ ಸ್ಥಾನ?

ಕೆಸಿಆರ್ ಸಂಪುಟದಲ್ಲಿ ಯಾರಿಗೆ ಸ್ಥಾನ?

ಆಂಧ್ರಪ್ರದೇಶದ ಗವರ್ನರ್ ಇ ನರಸಿಂಹನ್ ಅವರು ಸದ್ಯಕ್ಕೆ ತೆಲಂಗಾಣಕ್ಕೂ ರಾಜ್ಯಪಾಲರಾಗಿರುತ್ತಾರೆ. ಕೆಸಿಆರ್ ಸಂಪುಟಕ್ಕೆ ಈ ರಾಜೇಂದ್ರನ್, ಟಿ ಹರೀಶ್ ರಾವ್, ಎಂಎಲ್ಸಿ ಮಹಮ್ಮದ್ ಅಲಿ, ಕೆಸಿಆರ್ ಪುತ್ರ ಕೆಟಿ ರಾಮರಾವ್, ಹಿರಿಯ ಶಾಸಕ ಪೊಚರಮ್ ಶ್ರೀನಿವಾಸ ರೆಡ್ಡಿ, ಹಿರಿಯ ನಾಯಕ ನಯನಿ ನರಸಿಂಹ ರೆಡ್ಡಿ, ಕೊಂಡಾ ಸುರೇಖ, ಪದ್ಮ ದೇವೆಂದರ್ ರೆಡ್ಡಿ, ಕೊವಾ ಲಕ್ಷ್ಮಿ ಹೆಸರುಗಳು ಕೇಳಿ ಬಂದಿದೆ. ಹೈದರಾಬಾದ್ ಪೊಲೀಸ್ ಆಯುಕ್ತ ಅನುರಾಗ್ ಶರ್ಮ ಅವರು ತೆಲಂಗಾಣ ಡಿಜಿಪಿ ಹುದ್ದೆ ಪಡೆಯುವ ಸಾಧ್ಯತೆಯಿದೆ. ಮುಖ್ಯ ಕಾರ್ಯದರ್ಶಿ ಹುದ್ದೆಗೆ ರಾಜೀವ್ ಶರ್ಮ ಹೆಸರು ಬಹುತೇಕ ಖಚಿತವಾಗಿದೆ.

ಮುಖ್ಯಮಂತ್ರಿಯಾಗಿ ಚಂದ್ರಶೇಖರ್‌ರಾವ್

ಮುಖ್ಯಮಂತ್ರಿಯಾಗಿ ಚಂದ್ರಶೇಖರ್‌ರಾವ್

* ತೆಲಂಗಾಣ ರಾಜ್ಯ: ಜನಸಂಖ್ಯೆ 3,52,86,757, ವಿಸ್ತೀರ್ಣ 44,340 ಚ.ಕಿ.ಮೀ.,ಒಟ್ಟು
* ವಿಧಾನಸಭೆ ಸದಸ್ಯರ ಸಂಖ್ಯೆ:119, ಒಟ್ಟು ಲೋಕಸಭಾ ಕ್ಷೇತ್ರಗಳು-17
* ಜಿಲ್ಲೆಗಳು: ಹೈದರಾಬಾದ್ (ರಾಜಧಾನಿ), ಅದಿಲಾಬಾದ್, ಖಮ್ಮಮ್, ಕರೀಂನಗರ, ಮಹಬೂಬ್ ನಗರ, ಮೇಡಕ್, ನಾಲಗೊಂಡ, ನಿಜಾಮಾಬಾದ್, ರಂಗಾರೆಡ್ಡಿ ಹಾಗೂ ವಾರಂಗಲ್. ಸೀಮಾಂಧ್ರ ಹಾಗೂ ತೆಲಂಗಾಣಕ್ಕೆ 10 ವರ್ಷಕಾಲ ಹೈದರಾಬಾದ್ ಜಂಟಿ ರಾಜಧಾನಿಯಾಗಲಿದೆ.

ಪ್ರಮಾಣವಚನ ಸಮಾರಂಭಕ್ಕಾಗಿ ಪಟಾಕಿ

ಪ್ರಮಾಣವಚನ ಸಮಾರಂಭಕ್ಕಾಗಿ ಪಟಾಕಿ

ತೆಲಂಗಾಣ(ತೆಲುಗರ ನಾಡು) :ಜಾತಿವಾರು : ತೆಲಂಗಾಣದಲ್ಲಿ ಶೇ 86 ರಷ್ಟು ಹಿಂದುಗಳು, ಶೇ12 ರಷ್ಟು ಮುಸ್ಲಿಂ ಹಾಗೂ ಶೇ 1 ರಷ್ಟು ಕ್ರೈಸ್ತರಿದ್ದಾರೆ.

ಭಾಷೆ ಅಂಕಿ ಅಂಶ : ತೆಲಂಗಾಣದಲ್ಲಿ ಶೇ 77 ರಷ್ಟು ಜನ ತೆಲುಗು ಭಾಷೆ ಮಾತನಾಡುತ್ತಾರೆ. ಶೇ 12ರಷ್ಟು ಉರ್ದು ಹಾಗೂ ಶೇ 11 ರಷ್ಟು ಇತರೆ ಭಾಷಿಗರು ಇದ್ದಾರೆ.

ನೀರಾವರಿ ಸೌಲಭ್ಯ ಸಮಸ್ಯೆ ಏನಾಗಲಿದೆ?

ನೀರಾವರಿ ಸೌಲಭ್ಯ ಸಮಸ್ಯೆ ಏನಾಗಲಿದೆ?

ದಕ್ಷಿಣ ಭಾರತದ ಎರಡು ಅತಿದೊಡ್ಡ ನದಿಗಳಾದ ಕೃಷ್ಣ ಹಾಗೂ ಗೋದಾವರಿ ತೆಲಂಗಾಣದಲ್ಲೂ ಹರಿಯುತ್ತದೆ. ಆದರೂ ರಾಜ್ಯದ ಬಹುತೇಕ ಭಾಗ ಒಣ, ಬಂಜರು ಭೂಮಿಯನ್ನು ಹೊಂದಿದೆ. ವಾತಾವರಣ ಕೂಡಾ ಒಣ ಹಾಗೂ ಶುಷ್ಕ ಹವೆಯನ್ನು ಹೊಂದಿದೆ. ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಹಂಚಿಕೆ ಬಗ್ಗೆ ಕೇಂದ್ರದ ಸಮಿತಿ ನಿರ್ಧರಿಸಲಿದೆ. ಎಲ್ಲಕ್ಕೂ ಕೇಂದ್ರ ಸರ್ಕಾರ ನೀಡುವ ಅನುದಾನ ಹಾಗೂ ಯೋಜನೆಗಳನ್ನು ಅವಲಂಬಿಸಬೇಕಾಗುತ್ತದೆ.

ಭಾರತ ಗಣರಾಜ್ಯದ ತೆಲಂಗಾಣ(ತೆಲುಗರ ನಾಡು)

ಭಾರತ ಗಣರಾಜ್ಯದ ತೆಲಂಗಾಣ(ತೆಲುಗರ ನಾಡು)

ತೆಲಂಗಾಣ(ತೆಲುಗರ ನಾಡು) ಭಾರತ ಗಣರಾಜ್ಯದ ಮಂಗಳವಾರ ಅಧಿಕೃತವಾಗಿ 29ನೇ ರಾಜ್ಯವಾಗಲಿದೆ. 2000ರಲ್ಲಿ ಎನ್ ಡಿಎ ಸರ್ಕಾರ ಬಿಹಾರದಿಂದ ಜಾರ್ಖಂಡ್ ಹಾಗೂ ಮಧ್ಯಪ್ರದೇಶದಿಂದ ಚತ್ತೀಸ್ ಗಢ ಮತ್ತು ಉತ್ತರಪ್ರದೇಶದಿಂದ ಉತ್ತರಾಖಂಡ್ ರಾಜ್ಯ ರಚನೆ ಮಾಡಿತ್ತು.

ತೆಲಂಗಾಣ ಜನರ ಹಿತರಕ್ಷಣೆ ಬದ್ಧ

ತೆಲಂಗಾಣ ಜನರ ಹಿತರಕ್ಷಣೆ ಬದ್ಧ

ಯುಪಿಎ ಸರ್ಕಾರ ಸಾರ್ವತ್ರಿಕ ಚುನಾವಣೆಗೂ ಮುನ್ನ ಆಂಧ್ರಪ್ರದೇಶವನ್ನು ಇಬ್ಭಾಗ ಮಾಡಿ ಕೋಟಿಗಟ್ಟಲೇ ಪ್ಯಾಕೇಜ್ ಘೋಷಿಸಿತ್ತು. ತೆಲುಗರಿಗೆ ಈ ಸೌಲಭ್ಯಗಳು ಸಿಗುವ ಹೊತ್ತಿಗೆ ಹೈದರಾಬಾದ್ ತನ್ನ ರಾಜಧಾನಿ ಪಟ್ಟ ಕಳೆದುಕೊಳ್ಳಲಿದೆ. ಮೋದಿ ಸರ್ಕಾರ ತೆಲಂಗಾಣ ಜನರ ಹಿತರಕ್ಷಣೆ ಬದ್ಧ ಎಂದು ಹೇಳಿದೆ.

ತೆಲಂಗಾಣ ರಾಜ್ಯದ ಭೂಪಟ

ತೆಲಂಗಾಣ ರಾಜ್ಯದ ಭೂಪಟ

ತೆಲಂಗಾಣ ರಾಜ್ಯದ ಭೂಪಟ ಹಾಗೂ ಇನ್ನಿತರ ಮಾಹಿತಿ, ಪಿಟಿಐ ಗ್ರಾಫಿಕ್ಸ್

English summary
In a historic event marking culmination of the long-drawn-out process of the bifurcation of Andhra Pradesh, TRS president K Chandrasekhar Rao will assume the office as first Chief Minister of Telangana which becomes 29th state of the country on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X