ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದ್ದೆಯೊಳಗೆ ಬಿದ್ದ ತರಬೇತಿ ವಿಮಾನ: ಪೈಲಟ್ ಅಪಾಯದಿಂದ ಪಾರು

|
Google Oneindia Kannada News

ಹೈದರಾಬಾದ್, ನವೆಂಬರ್ 21: ತರಬೇತಿ ವಿಮಾನವೊಂದು ತಾಂತ್ರಿಕ ಕಾರಣಗಳಿಂದ ಅಪಘಾತಕ್ಕೆ ಒಳಗಾಗಿ ಭತ್ತದ ಗದ್ದೆಯೊಳಗೆ ಪತನಗೊಂಡ ಘಟನೆ ಬುಧವಾರ ಬೆಳಿಗ್ಗೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೋಕಿಲಾ ಗ್ರಾಮದಲ್ಲಿ ನಡೆದಿದೆ.

ತರಬೇತಿ ಪಡೆಯುತ್ತಿದ್ದ ಭಾಸ್ಕರ್ ಭೂಷಣ್ (25) ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 ಜೈಪುರ್ ನಲ್ಲಿ ತುರ್ತಾಗಿ ಇಳಿಯಿತು ಕರಾಚಿ ಮೂಲದ ಖಾಸಗಿ ವಿಮಾನ ಜೈಪುರ್ ನಲ್ಲಿ ತುರ್ತಾಗಿ ಇಳಿಯಿತು ಕರಾಚಿ ಮೂಲದ ಖಾಸಗಿ ವಿಮಾನ

ಹೈದರಾಬಾದ್‌ನ ರಾಜೀವ್ ಗಾಂಧಿ ವಿಮಾನಯಾನ ಅಕಾಡೆಮಿಗೆ ಸೇರಿದ ಸೆಸ್ಸೇನಾ ವಿಮಾನ ಅಪಘಾತಕ್ಕೆ ಒಳಗಾಗಿದೆ. ಸಮಸ್ಯೆಗೆ ಒಳಗಾದ ವಿಮಾನ ನಿಯಂತ್ರಣ ತಪ್ಪಿ ಗದ್ದೆಯೊಳಗೆ ಬಿದ್ದಿದೆ.

Trainer aircraft crashes in telangana pilot safe

ಪ್ರಾಥಮಿಕ ವರದಿಗಳ ಪ್ರಕಾರ ವಿಮಾನವು ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿದೆ. ತರಬೇತಿ ಪಡೆಯುತ್ತಿದ್ದ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಎನ್ ಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ.

Trainer aircraft crashes in telangana pilot safe

ಇಂಡಿಗೋ ವಿಮಾನದಲ್ಲೊಂದು ಭಾವನಾತ್ಮಕ ಕ್ಷಣ: ವಿಡಿಯೋ ವೈರಲ್ಇಂಡಿಗೋ ವಿಮಾನದಲ್ಲೊಂದು ಭಾವನಾತ್ಮಕ ಕ್ಷಣ: ವಿಡಿಯೋ ವೈರಲ್

ಅಕಾಡೆಮಿಯ ತಂಡವೊಂದು ಘಟನಾ ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದೆ.

English summary
A Trainer aircraft crashed in an agriculture field in Telangana, the pilot escapes with minor injuries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X