ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.9 ರಿಂದ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನವಿಲ್ಲ

By Gururaj
|
Google Oneindia Kannada News

ಹೈದರಾಬಾದ್, ಜುಲೈ 14 : ಆಗಸ್ಟ್ ತಿಂಗಳಿನಲ್ಲಿ 9 ದಿನ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸಾಧ್ಯವಿಲ್ಲ. ಟಿಟಿಡಿ ಆಡಳಿತ ಮಂಡಳಿ ಶನಿವಾರ ಈ ಕುರಿತು ಆದೇಶ ಹೊರಡಿಸಿದೆ.

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ ಶನಿವಾರ ತುರ್ತು ಸಭೆ ನಡೆಸಿತು. ಸಭೆಯ ಬಳಿಕ ಟಿಟಿಡಿ ಅಧ್ಯಕ್ಷ ಪುಟ್ಟಾ ಸುಧಾಕರ್ ಯಾದವ್ ಸಭೆಯ ವಿವರಗಳನ್ನು ನೀಡಿದರು. 9 ದಿನಗಳ ಕಾಲ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

4 ನಗರದಿಂದ ಕೆಎಸ್ಆರ್‌ಟಿಸಿ ತಿರುಪತಿ-ತಿರುಮಲ ಪ್ಯಾಕೇಜ್4 ನಗರದಿಂದ ಕೆಎಸ್ಆರ್‌ಟಿಸಿ ತಿರುಪತಿ-ತಿರುಮಲ ಪ್ಯಾಕೇಜ್

ಪ್ರತಿ 12 ವರ್ಷಕ್ಕೊಮ್ಮೆ ದೇವಾಲಯದಲ್ಲಿ 'ಅಷ್ಟಬಂಧ ಬಾಲಾಲಯ ಮಹಾಪ್ರೋಕ್ಷಣಂ' ಎಂಬ ಕಾರ್ಯಕ್ರಮ ನಡೆಯುತ್ತದೆ. ಆಗಸ್ಟ್ 9 ರಿಂದ 17ರ ತನಕ ಈ ಕಾರ್ಯಕ್ರಮ ನಡೆಯಲಿದೆ. ಈ ಸಮಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ.

Tirupati

ಆಗಸ್ಟ್ 11ರಂದು ದೇವಾಲಯದಲ್ಲಿ ಮಹಾಧಿವೇಶನ ನಡೆಯಲಿದೆ. ಆದರೆ, 9 ದಿನಗಳ ಕಾಲ ಭಕ್ತರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡುವುದಿಲ್ಲ ಎಂದು ಟಿಟಿಡಿ ಹೇಳಿದೆ. ಆಡಳಿತ ಮಂಡಳಿ ಈ ನಿರ್ಧಾರ ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ.

ಕರ್ನಾಟಕ ಪ್ರವಾಸಿಗರಿಗೆ ತಿರುಪತಿ ತ್ವರಿತ ದರ್ಶನ ಸಹಿತ ಹೊಸ ಪ್ಯಾಕೇಜ್‌ಕರ್ನಾಟಕ ಪ್ರವಾಸಿಗರಿಗೆ ತಿರುಪತಿ ತ್ವರಿತ ದರ್ಶನ ಸಹಿತ ಹೊಸ ಪ್ಯಾಕೇಜ್‌

ಮೊದಲು ತಿರುಪತಿ ದೇವಾಲಯ ದಿನಕ್ಕೆ 30 ರಿಂದ 35 ಸಾವಿರ ಭಕ್ತರಿಗೆ ಮಾತ್ರ ಪ್ರವೇಶ ನೀಡುವ ಕುರಿತು ಚಿಂತನೆ ನಡೆಸಿತ್ತು. ಆದರೆ, ಈಗ ಭಕ್ತರ ಭೇಟಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ತೀರ್ಮಾನ ಕೈಗೊಂಡಿದೆ.

'ಅಷ್ಟಬಂಧ ಬಾಲಾಲಯ ಮಹಾಪ್ರೋಕ್ಷಣಂ' ಕಾರ್ಯಕ್ರಮದಲ್ಲಿ ಸುಮಾರು 44 ಋತ್ವಿಕರು, 100 ಪ್ರಧಾನ ಪಂಡಿತರು ಪಾಲ್ಗೊಳ್ಳಲಿದ್ದಾರೆ. ಆಗಸ್ಟ್‌ 17 ರಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ಪ್ರತಿದಿನ ಮಹಾಮಸ್ತಕಾಭಿಷೇಕ ನಡೆಯಲಿದೆ.

English summary
Tirumala Tirupati Devasthanams (TTD) announced that, Temple will stop the visit of devotees from August 9th to 17th because of Ashta Bandhana Balalaya Maha Samprokshanam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X