• search
 • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಿರುಪತಿ ದೇವಾಲಯದಲ್ಲಿ ಕೆಲಸ ಕಳೆದುಕೊಂಡ 1,300 ಕಾರ್ಮಿಕರು

|

ಅಮರಾವತಿ, ಮೇ 2: ಲಾಕ್‌ಡೌನ್‌ನಿಂದ ಸಾಕಷ್ಟು ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಕಂಪನಿಗಳು ಮಾತ್ರವಲ್ಲದೆ, ತಿರುಪತಿ ದೇವಲಯದಲ್ಲಿಯೂ 1,300 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.

   2,500 ವರ್ಷದಲ್ಲಿ ಮೊದಲಬಾರಿಗೆ ತಿರುಪತಿಗೆ ಬೀಗ | Tirupathi Locked After 2500 Years

   ಕೆಲಸ ಕಳೆದುಕೊಂಡ 1,300 ಕಾರ್ಮಿಕರು ತಿರುಪತಿ ದೇವಾಲಯದಲ್ಲಿ ನೈರ್ಮಲ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಒಪ್ಪಂದದ (ಕಾಂಟ್ರಾಕ್ಟ್) ಆಧಾರದಲ್ಲಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಇವರ ಕಾಂಟ್ರಾಕ್ಟ್ ಏಪ್ರಿಲ್ 30ಕ್ಕೆ ಮುಗಿದಿದೆ. ಈಗ ಈ ಕಾರ್ಮಿಕರ ಕಾಂಟ್ರಾಕ್ಟ್ ರಿನಿವಲ್ ಮಾಡದೆ ಇರಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ.

   ಕೊರೊನಾ ಭೀತಿ; ತಿರುಪತಿ ದೇವಾಲಯ ಒಂದು ವಾರ ಬಂದ್

   ಏಪ್ರಿಲ್ 30ಕ್ಕೆ ಕಾಂಟ್ರಾಕ್ಟ್ ಮುಗಿದಿದ್ದು, ಮೇ 1 ರಿಂದ ಕೆಲಸಕ್ಕೆ ಬರದೆ ಇರಲು ತಿಳಿಸಲಾಗಿದೆ. ಖಾಯಂ ಕಾರ್ಮಿಕರು ಹಾಗೂ ಸಿಬ್ಬಂದಿಗಳ ಕೆಲಸ ಹಾಗೆ ಉಳಿದುಕೊಂಡಿದೆ. ಮಾರ್ಚ್ 20 ರಂದು ಲಾಕ್‌ಡೌನ್ ಘೋಷಣೆ ಆಗಿದ್ದು, ಆ ದಿನದಿಂದ ಎಲ್ಲ ಸಿಬ್ಬಂದಿಗಳಿಗೂ ರಜೆ ನೀಡಲಾಗಿದೆ.

   ಕಾರ್ಮಿಕರು ಈ ಕಠಿಣ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಕೆಲಸವನ್ನು ಮುಂದುವರಿಸಲು ಅವಕಾಶ ನೀಡುವಂತೆ ಕೇಳುಕೊಂಡಿದ್ದಾರೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿ ಕಾಂಟ್ರಾಕ್ಟ್ ಮುಂದುವರೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

   ವರದಿಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಟಿಟಿಡಿಯ ಬಜೆಟ್ 3,309 ಕೋಟಿ ರೂಪಾಯಿ ಆಗಿತ್ತು. ಇದು ಫೆಬ್ರವರಿಯಲ್ಲಿ ಅಂತಿಮಗೊಳಿಸಿತ್ತು. ಆದರೆ, COVID-19 ಪರಿಸ್ಥಿತಿಯ ಕಾರಣದಿಂದಾಗಿ ಇದನ್ನು ಬದಲು ಮಾಡುವ ಸಾಧ್ಯತೆ ಇದೆ.

   English summary
   India's richest Hindu shrine, Tirupati Balaji temple in Andhra Pradesh ends contract with 1,300 workers amid the coronavirus outbreak.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more