ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಪರ್ ಬಾಕ್ಸ್‌ನಲ್ಲಿ ಇನ್ನು ತಿರುಪತಿ ಲಡ್ಡು ವಿತರಣೆ ?

|
Google Oneindia Kannada News

Recommended Video

ತಿರುಪತಿ ಲಡ್ಡು ಸದ್ಯದಲ್ಲೇ ಪೇಪರ್ ಬಾಕ್ಸ್ ನಲ್ಲಿ ವಿತರಣೆ | Oneindia Kannada

ತಿರುಪತಿ, ಡಿಸೆಂಬರ್ 1: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವವರಿಗೆ ಇನ್ನುಮುಂದೆ ಪ್ರಸಾದವಾಗಿ ನೀಡುವ ಲಡ್ಡುಗಳನ್ನು ಪೇಪರ್ ಬಾಕ್ಸ್‌ಗಳಲ್ಲಿ ನೀಡಲು ಚಿಂತನೆ ನಡೆದಿದೆ.

ಸದ್ಯಕ್ಕೆ ತಿರುಪತಿಯಲ್ಲಿ ಲಡ್ಡು ಪ್ರಸಾದ ಪಾಲಿಥಿನ್ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ನೀಡಲಾಗುತ್ತಿದ್ದು, ಇದರ ಬದಲಿಗೆ ಬಯೋ-ಡಿಗ್ರೇಡಬಲ್ ಪ್ಲಾಸ್ಟಿಕ್ ಕವರ್‌ಗಳು, ಬಟ್ಟೆ ಬ್ಯಾಗುಗಳನ್ನು ಉಪಯೋಗಿಸಲು ಟಿಟಿಡಿ ಆಲೋಚಿಸಿತ್ತಾದರೂ, ಫುಡ್ ಗ್ರೇಡ್ ಕಾಗದದ ಬಾಕ್ಸ್‌ಗಳೇ ಉತ್ತಮ ಎಂಬ ನಿರ್ಧಾರಕ್ಕೆ ಬರಲಾಗಿದೆ.

tirupati laddus will be supplied through paper box

ಇದು ಒಂದೊಮ್ಮೆ ಜಾರಿಯಾದರೆ ಲಡ್ಡುಗಳ ಸಂಖ್ಯೆಗೆ ಅನುಗುಣವಾಗಿ ಮೂರು ಅಳತೆಯ ಬಾಕ್ಸ್‌ಗಳನ್ನು ತಯಾರಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವೆಂಕಟೇಶ್ವರ ಸನ್ನಿಧಾನದ ಕೌಂಟರ್‌ಗಳಲ್ಲಿ ವಿಶ್ವ ವಿಖ್ಯಾತ ಲಡ್ಡು ಪ್ರಸಾದವನ್ನು ಇನ್ನು ಕೆಲವೇ ದಿನಗಳಲ್ಲಿ ಫುಡ್ ಗ್ರೇಡ್ ಪೇಪರ್‌ಗಳಲ್ಲಿ ನೀಡಲಾಗುತ್ತದೆ.ಈ ಬಾಕ್ಸ್‌ಗಳು ಬೇಕರಿ, ಸಿಹಿ ತಿನಿಸುಗಳ ಅಂಗಡಿಗಳಲ್ಲಿ ನೀಡುವ ಪೇಪರ್ ಬಾಕ್ಸ್‌ಗಳಂತೆಯೇ ಇರಲಿದ್ದು, ಈಗಾಗಲೇ ಶ್ರೀಶೈಲ ದೇಗುಲದಲ್ಲಿ ಪ್ರಸಾದ ವಿನಿಯೋಗಕ್ಕೆ ಈ ಬಾಕ್ಸ್‌ಗಳನ್ನು ಬಳಸಲಾಗುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭ

ದೇವಾಲಯವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ದೇವಾಲಯ ಆಡಳಿತ ಮಂಡಳಿ ನಿರ್ಧರಿಸಿದೆ, ದಿನನಿತ್ಯ ಲಕ್ಷಾಂತರ ಮಂದಿ ತಿಮ್ಮಪ್ಪನ ದರ್ಶನಕ್ಕೆಂದು ಬರುತ್ತಾರೆ, ಹಾಗೆಯೇ ಲಕ್ಷಗಟ್ಟಲೆ ಪ್ಲಾಸ್ಟಿಕ್ ಕವರ್‌ಗಳ ಬಳಕೆಯೂ ಆಗುತ್ತುದೆ.

ಇದನ್ನು ತಪ್ಪಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು ಪೇಪರ್ ಬಾಕ್ಸ್‌ಗಳಲ್ಲಿ ಲಡ್ಡುಗಳನ್ನು ವಿತರಿಸಲು ಚಿಂತನೆ ನಡೆಸಿದೆ. ಶೀಘ್ರವೇ ಇದನ್ನು ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
To avoid plastic usage in the temple street, Tirupati temple has decided to distribute laddus through paper box.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X