ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 500 ದೇವಸ್ಥಾನಗಳನ್ನು ನಿರ್ಮಿಸಲಿದೆ ಎಚ್‌ಡಿಪಿಪಿ

|
Google Oneindia Kannada News

ತಿರುಪತಿ, ಆಗಸ್ಟ್‌ 28: ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 500 ದೇವಾಲಯಗಳನ್ನು ನಿರ್ಮಿಸಲು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ವಿಭಾಗವಾದ ಹಿಂದೂ ಧರ್ಮ ಪ್ರಚಾರ ಪರಿಷತ್ (ಎಚ್‌ಡಿಪಿಪಿ) ನಿರ್ಧರಿಸಿದೆ.

Recommended Video

BMRCL ಕಳೆದ ವರ್ಷ ₹598 ಕೋಟಿ ರೂ ನಷ್ಟ | Oneindia Kannada

ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ ಸಭೆಯಲ್ಲಿ 500 ದೇವಾಲಯಗಳನ್ನು ನಿರ್ಮಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ, ವಿಂಗ್‌ನ ಕಾರ್ಯಕಾರಿ ಸಮಿತಿಯು ದೇವಾಲಯಗಳ ನಿರ್ಮಾಣಕ್ಕಾಗಿ 'ಸಮರಸತ ಸೇವಾಸಂಸ್ಥೆ' (ಎಸ್‌ಎಸ್‌ಎಸ್) ನೊಂದಿಗೆ ಕೈಜೋಡಿಸಲು ನಿರ್ಧರಿಸಿದೆ.

ಕರ್ನಾಟಕದ ದೇವಾಲಯಗಳ ಆದಾಯ ಶೇ 72ರಷ್ಟು ಕುಸಿತಕರ್ನಾಟಕದ ದೇವಾಲಯಗಳ ಆದಾಯ ಶೇ 72ರಷ್ಟು ಕುಸಿತ

ಟಿಟಿಡಿಯ ಶ್ರೀವಾನಿ ಟ್ರಸ್ಟ್ ಈ ನಿರ್ಮಾಣಗಳಿಗೆ ಹಣವನ್ನು ಒದಗಿಸುತ್ತದೆ. ಈಗಾಗಲೇ ನಿರ್ಮಾಣ ಹಂತದಲ್ಲಿರುವ ದೇವಾಲಯಗಳ ಪೂರ್ಣಗೊಳಿಸಲು ಐದು ಲಕ್ಷ ಮತ್ತು ಹೊಸ ದೇವಾಲಯಗಳ ನಿರ್ಮಾಣಕ್ಕಾಗಿ 10 ಲಕ್ಷ ರೂಪಾಯಿ ಖರ್ಚು ಮಾಡಲು ಎಚ್‌ಡಿಪಿಪಿ ನಿರ್ಧರಿಸಿದೆ. ಎಸ್‌ಎಸ್‌ಎಸ್ ಈ ದೇವಾಲಯಗಳನ್ನು ಮೀನುಗಾರರ ಗ್ರಾಮಗಳು ಮತ್ತು ಎಸ್‌ಸಿ, ಎಸ್‌ಟಿ ಕಾಲೋನಿಗಳಲ್ಲಿ ನಿರ್ಮಿಸಲಿದೆ.

Tirumala Tirupati Devasthanams wing to construct 500 temples in Andhra Pradesh and Telangana

ಇನ್ನು ಗುರುವಾರ ನಡೆದ ಟಟಿಡಿ ಸಭೆಯಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಅನಿಲ್ ಕುಮಾರ್, ಟಿಟಿಡಿ ಟ್ರಸ್ಟ್ ಬೋರ್ಡ್ ಸದಸ್ಯರಾದ ಗೋವಿಂದ್ ಹರಿ, ಶಿವ ಕುಮಾರ್, ಜಂಟಿ ಕಾರ್ಯನಿರ್ವಾಹಕ ಅಧಿಕಾರಿ (ಜೆಇಒ) ಬಸಂತ್ ಕುಮಾರ್, ಎಚ್‌ಡಿಪಿಪಿ ಸದಸ್ಯರಾದ ಸುಬ್ಬರಾವ್, ಪೆಂಚಲಾಯ ಮತ್ತು ಎಚ್‌ಡಿಪಿಪಿ ಕಾರ್ಯದರ್ಶಿ ರಾಜಗೋಪಾಲನ್ ಭಾಗವಹಿಸಿದ್ದರು.

English summary
The Hindu Dharma Prachara Parishat (HDPP), a wing of Tirumala Tirupati Devasthanams (TTD), has decided to construct as many as 500 temples in Andhra Pradesh and Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X