ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ಹುಂಡಿ ಕಾಣಿಕೆ ಸಂಗ್ರಹ 3 ಕೋಟಿಯಿಂದ 73 ಲಕ್ಷಕ್ಕೆ ಇಳಿಕೆ!

By Gururaj
|
Google Oneindia Kannada News

ಹೈದರಾಬಾದ್, ಆಗಸ್ಟ್ 13 : ತಿರುಪತಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ಗಣನೀಯ ಇಳಿಕೆಯಾಗಿದೆ. ಮಹಾಸಂಪ್ರೋಕ್ಷಣಂ ಕಾರ್ಯಕ್ರಮ ನಡೆಯುತ್ತಿರುವುದರಿಂದ ಭಕ್ತರು ದೇವರ ದರ್ಶನ ಪಡೆಯಲು ನಿರ್ಬಂಧ ಹೇರಲಾಗಿದೆ.

ಚಿನ್ನದ ಹರಕೆ, ಕಾಣಿಕೆ ಹೊರತಾಗಿ ಎಲ್ಲಾ ಹುಂಡಿಗಳನ್ನು ಸೇರಿಸಿದರೆ ದಿನಕ್ಕೆ ಸುಮಾರು 3 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಆದರೆ, ಸೋಮವಾರ ಹುಂಡಿ ಏಣಿಕೆ ಮಾಡಿದಾಗ ಕೇವಲ 73 ಲಕ್ಷ ಮಾತ್ರ ಸಂಗ್ರಹವಾಗಿದೆ.

4 ನಗರದಿಂದ ಕೆಎಸ್ಆರ್‌ಟಿಸಿ ತಿರುಪತಿ-ತಿರುಮಲ ಪ್ಯಾಕೇಜ್4 ನಗರದಿಂದ ಕೆಎಸ್ಆರ್‌ಟಿಸಿ ತಿರುಪತಿ-ತಿರುಮಲ ಪ್ಯಾಕೇಜ್

ಪ್ರತಿ 12 ವರ್ಷಕ್ಕೊಮ್ಮೆ ತಿರುಪತಿಯಲ್ಲಿ ಮಹಾಸಂಪ್ರೋಕ್ಷಣಂ ಎಂಬ ಕಾರ್ಯಕ್ರಮ ನಡೆಯುತ್ತದೆ. ಐದು ದಿನಗಳ ಕಾಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ. ಶನಿವಾರ ಸಂಜೆಯಿಂದ ಮಹಾಸಂಪ್ರೋಕ್ಷಣಂ ಕಾರ್ಯಕ್ರಮ ಆರಂಭವಾಗಿದೆ. ಭಕ್ತಾದಿಗಳ ಭೇಟಿಗೆ ನಿರ್ಬಂಧ ಹಾಕಲಾಗಿದೆ.

ದಾವಣಗೆರೆ : ಕೆಎಸ್ಆರ್‌ಟಿಸಿ ತಿರುಪತಿ ಪ್ಯಾಕೇಜ್, ವಿವರಗಳುದಾವಣಗೆರೆ : ಕೆಎಸ್ಆರ್‌ಟಿಸಿ ತಿರುಪತಿ ಪ್ಯಾಕೇಜ್, ವಿವರಗಳು

Tirumala

ಭಕ್ತರ ಭೇಟಿಗೆ ಅವಕಾಶ ಇಲ್ಲದ ಹಿನ್ನಲೆಯಲ್ಲಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಗಿದೆ. ಆದ್ದರಿಂದ, ಹುಂಡಿಯಲ್ಲಿನ ಹಣದ ಸಂಗ್ರಹ ಕಡಿಮೆಯಾಗಿದೆ. ಇಷ್ಟೊಂದು ಹುಂಡಿ ಹಣ ಕಡಿಮೆ ಆಗಿರುವುದು ಹಲವು ವರ್ಷಗಳ ಬಳಿಕ ಇದೇ ಮೊದಲು.

ತಿರುಪತಿ ತಿಮ್ಮಪ್ಪನನ್ನೇ ಬಿಡದ ಕಳ್ಳರು ಕನಕ ದುರ್ಗೆಯನ್ನು ಬಿಟ್ಟಾರಾ?ತಿರುಪತಿ ತಿಮ್ಮಪ್ಪನನ್ನೇ ಬಿಡದ ಕಳ್ಳರು ಕನಕ ದುರ್ಗೆಯನ್ನು ಬಿಟ್ಟಾರಾ?

ಮಹಾಸಂಪ್ರೋಕ್ಷಣಂ ಕಾರ್ಯಕ್ರಮಕ್ಕಾಗಿ ಹಲವು ಅರ್ಚಕರ ತಂಡ ದೇವಾಲಯಕ್ಕೆ ಆಗಮಿಸಿದೆ. ಐದು ದಿನಗಳ ಕಾಲ ಅಷ್ಟಬಂಧ ಬಾಲಾಲಯ, ಬಿಂಬ ಪ್ರತಿಷ್ಠೆ, ಕಲಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

English summary
The Tirupathi temple hundi income registered a dip due to restrictions on entry of devotees. Hundi collection hit a record low of Rs 73 lakh against Rs 3 crore. Entry of devotees banned due to ongoing Astabandhana Balalaya Maha Samprokshanam a six-day vedic ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X