• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸತ್ಯಂ ಹಗರಣ: 2009ರಿಂದ 2015 ರ ತನಕ ಟೈಮ್ ಲೈನ್

By Mahesh
|

ಹೈದರಾಬಾದ್, ಏ.9: ದೇಶದ ಅತಿದೊಡ್ಡ ಕಾರ್ಪೊರೇಟ್ ವಂಚನೆ ಪ್ರಕರಣ ಸತ್ಯಂ ಕಂಪ್ಯೂಟರ್ಸ್ ಹಗರಣದ ತೀರ್ಪು ಗುರುವಾರ ಪ್ರಕಟವಾಗಿದೆ. ಸತ್ಯಂ ಸಂಸ್ಥೆ ಸ್ಥಾಪಕ ರಾಮಲಿಂಗ ರಾಜು ಸೇರಿ 10 ಜನ ಆರೋಪಿಗಳನ್ನು ಅಪರಾಧಿಗಳು ಎಂದು ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ.

ಪ್ರಮುಖ ಆರೋಪಿ ರಾಮಲಿಂಗ ರಾಜು ಹಾಗೂ ಇತರೆ 9 ಆರೋಪಿಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಎಲ್ಲರಿಗೂ 25 ಲಕ್ಷ ರು ದಂಡ ವಿಧಿಸಲಾಗಿದೆ. ಜನವರಿ 7, 2009ರಂದು ಒಂದು ಇಮೇಲ್ ಸೋರಿಕೆ ಮೂಲಕ ಬಹಿರಂಗಗೊಂಡ ಈ ಪ್ರಕರಣ ದೇಶದ ಐಟಿ ಕ್ಷೇತ್ರ, ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿತ್ತು. [ಸತ್ಯಂ ಹಗರಣ: ರಾಮಲಿಂಗ ರಾಜುಗೆ 7 ವರ್ಷ ಜೈಲು ಶಿಕ್ಷೆ]

ಸತ್ಯಂ ಕಂಪ್ಯೂಟರ್ಸ್ ಹಗರಣದ ಪ್ರಮುಖ ಘಟನಾವಳಿಗಳು ಇಲ್ಲಿದೆ

* ಸುಮಾರು 3,000 ದಾಖಲೆಗಳು ಹಾಗೂ 226 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಯಿತು. [ಸತ್ಯಂ ರಾಜುಗೂ ಗಾಲಿರೆಡ್ಡಿಗೂ ಎಲ್ಲಿಯ ಹೋಲಿಕೆ]

* ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸಲು ಸಿಬಿಐ ತಂಡ ಸುಮಾರು 6 ವರ್ಷಗಳ ತೆಗೆದುಕೊಂಡು, ವರದಿ ಸಲ್ಲಿಸಿತು.

* ಆಂಧ್ರಪ್ರದೇಶದ ಸಿಐಡಿ ತಂಡ ಮೊದಲಿಗೆ ರಾಮಲಿಂಗ ರಾಜು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿತು. ವಿಚಾರಣೆ ಸಂದರ್ಭದಲ್ಲಿ ರಾಜು ತಪ್ಪೊಪ್ಪಿಗೆ ನೀಡಿದ್ದರು. [ಸತ್ಯಂ ಸಿಇಒ ರಾಮಲಿಂಗರಾಜು ರಾಜೀನಾಮೆ]

* ಆಂಧ್ರಪ್ರದೇಶದ ಸಿಐಡಿ ತಂಡ ಮೊದಲಿಗೆ ರಾಮಲಿಂಗ ರಾಜು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿತು. ವಿಚಾರಣೆ ಸಂದರ್ಭದಲ್ಲಿ ರಾಜು ತಪ್ಪೊಪ್ಪಿಗೆ ನೀಡಿದ್ದರು.

* ಫೆಬ್ರವರಿ 2009ರಲ್ಲಿ ಸಿಬಿಐ ಕೈಗೆ ಪ್ರಕರಣದ ತನಿಖೆ ಸಂಪೂರ್ಣವಾಗಿ ವಹಿಸಲಾಯಿತು. ಮೂರು ಚಾರ್ಜ್ ಶೀಟ್ ಸಲ್ಲಿಸಲಾಯಿತು.

* ಏಪ್ರಿಲ್ 7, 2009, ನವೆಂಬರ್ 24, 2009 ಹಾಗೂ ಜನವರಿ 7,2010 ಸಲ್ಲಿಸಲಾದ ಚಾರ್ಜ್ ಶೀಟ್ ಎಲ್ಲವನ್ನು ಒಟ್ಟುಗೂಡಿಸಿ ಒಂದೇ ಚಾರ್ಜ್ ಶೀಟ್ ಸಿಬಿಐ ನ್ಯಾಯಲಯಕ್ಕೆ ಸಲ್ಲಿಸಲಾಯಿತು. [ಸತ್ಯಂ ಹೊಸ ಮಂಡಳಿ ಮೊದಲ ಸುದ್ದಿಗೋಷ್ಠಿ]

* ನವೆಂಬರ್ 2010ರಲ್ಲಿ ರಾಜು ಅವರಿಗೆ ಹೈದರಾಬಾದಿನ ಕೆಳಹಂತದ ನ್ಯಾಯಾಲಯದಿಂದ ಸಿಕ್ಕಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು. ರಾಜು ಅವರು ಪೊಲೀಸರಿಗೆ ಶರಣಾದರು. [ಸತ್ಯಂ ರಾಜು 'ದಿವಾಳಿ' ನ್ಯೂಯಾರ್ಕ್ ಕೋರ್ಟ್]

* ಜನವರಿ 2014 ರಲ್ಲಿ ರಾಮಲಿಂಗ ರಾಜು, ಪತ್ನಿ ನಂದಿನಿ ರಾಜು ಹಾಗೂ ಪುತ್ರರಾದ ತೇಜ ರಾಜು ಹಾಗೂ ರಾಮ ರಾಜು ಹಾಗೂ 21 ಸಂಬಂಧಿಕರ ಮೇಲಿನ ಆರೋಪ ಸಾಬೀತಾಯಿತು. ಆದಾಯ ತೆರಿಗೆ ವಂಚನೆ ಆರೋಪ ಹೊರೆಸಲಾಗಿತ್ತು.

* ಜುಲೈ, 16, 2014 ಸತ್ಯಂ ಕಂಪ್ಯೂಟರ್ಸ್ ಸಂಸ್ಥಾಪಕ ರಾಮಲಿಂಗರಾಜು ಹಾಗೂ ಇತರೆ 4 ಜನರಿಗೆ ಷೇರು ಮಾರುಕಟ್ಟೆಯಿಂದ 14 ವರ್ಷಗಳ ಕಾಲ ನಿಷೇಧ ಹೇರಲಾಯಿತು. ['ಸತ್ಯಂ' ರಾಜುಗೆ 14 ವರ್ಷ ನಿಷೇಧ]

* ರಾಜು ಅವರ ಸಹೋದರ ಬಿ.ರಾಮ ರಾಜು, ಮಾಜಿ ಸಿಎಫ್‌ಒ ವಡ್ಲಾಮನಿ ಶ್ರೀನಿವಾಸ್,ಮಾಜಿ ಉಪಾಧ್ಯಕ್ಷ ಜಿ.ರಾಮಕೃಷ್ಣ ಹಾಗೂ ಆಂತರಿಕ ಲೆಕ್ಕಪರಿಶೋಧನೆಯ ಮಾಜಿ ಮುಖ್ಯಸ್ಥ ವಿ.ಎಸ್.ಪ್ರಭಾಕರ ಷೇರು ಮಾರುಕಟ್ಟೆಯಿಂದ ನಿಷೇಧ.[ಸತ್ಯಂ ರಾಜು ಅವರ ಚಂದಮಾಮ ಕಥೆ]

* ಸುಮಾರು 12,318 ಕೋಟಿ ರು ಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಸೆಬಿಯಿಂದ ಪ್ರಕಟಣೆ.

* ಡಿಸೆಂಬರ್ 8, 2014 ರಾಮಲಿಂಗ ರಾಜು, ರಾಮ ರಾಜು, ವಡ್ಲಾಮನಿ ಶ್ರೀನಿವಾಸ್ ಹಾಗೂ ಮಾಜಿ ನಿರ್ದೇಶಕ ರಾಮ್ ಮೈನಂಪತಿ ಅವರಿಗೆ 6 ತಿಂಗಳುಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಯಿತು. ಎಸ್ ಎಫ್ ಐಒ ನೀಡಿದ್ದ ಆರ್ಥಿಕ ಅವ್ಯವಹಾರ ದೂರಿನ ಮೇರೆಗೆ ಕ್ರಮ ಜರುಗಿಸಲಾಗಿತ್ತು.

* ಏಪ್ರಿಲ್ 9, 2015: ಸತ್ಯಂ ಸಂಸ್ಥೆ ಸ್ಥಾಪಕ ರಾಮಲಿಂಗ ರಾಜು ಸೇರಿ 10 ಜನ ಆರೋಪಿಗಳನ್ನು ಅಪರಾಧಿಗಳು ಎಂದು ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಘೋಷಣೆ. [ರಾಜು 822 ಕೋಟಿ ಆಸ್ತಿ ಮುಟ್ಟುಗೋಲು]

* ಪ್ರಮುಖ ಆರೋಪಿ ರಾಮಲಿಂಗ ರಾಜು ಹಾಗೂ ಇತರೆ 9 ಆರೋಪಿಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ ಹಾಗೂ 25 ಲಕ್ಷ ರು ದಂಡ ವಿಧಿಸಲಾಗಿದೆ.

English summary
Satyam Scam Timeline: Touted as the country's biggest accounting fraud, the scam had come to light on January 7, 2009, after the erstwhile firm's founder and the then chairman B Ramalinga Raju allegedly confessed to manipulating his company's account books and inflating profits over many years to the tune of several crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X