• search
 • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೈಕ್ ಶೇರಿಂಗ್ ಸ್ಕೀಮ್ ಹೆಸರಿನಲ್ಲಿ ಲೂಟಿ ಮಾಡ್ತಿದ್ದವರು ಅಂದರ್

|

ಬೆಂಗಳೂರು, ಫೆಬ್ರವರಿ 09: ಹಣ ಎಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ! ಇನ್ನು ಬದುಕಿರುವ ಜನ ? ಹಣದಾಸೆಗೆ ಬಿದ್ದು ಇರುವ ದುಡ್ಡು ಕಳೆದುಕೊಂಡು ಹೆಣಗಳಾಗುತ್ತಿದ್ದಾರೆ . 300 ರೂಪಾಯಿ ಹೂಡಿಕೆ ಮಾಡಿದ್ರೆ, 1350 ರೂ. ಕೊಡ್ತೀವಿ ಎಂದು ನಂಬಿಸಿ ಬೈಕ್ ಶೇರಿಂಗ್ ಎಂಬ ಬೋಗಸ್ ಸ್ಕೀಮ್ ನಲ್ಲಿ ದೇಶದಲ್ಲೇ 20 ಸಾವಿರ ಮಂದಿಗೆ ಸುಮಾರು 50 ಕೋಟಿ ರೂಪಾಯಿ ವಂಚಿಸಿರುವ ಜಾಲ ಬೆಳಕಿಗೆ ಬಂದಿದೆ. ಜಾಲದ ಮೂವರನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಚೀನಾ ಮೂಲದ ಇಬ್ಬರು ಕಿಂಗ್ ಪಿನ್ ಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

 ಬಿಕೆ ಬ್ಲೇಡ್ ಸ್ಕೀಮ್ !

ಬಿಕೆ ಬ್ಲೇಡ್ ಸ್ಕೀಮ್ !

WWW.CICISEO.COM ಎಂಬ ಅಪ್ಲಿಕೇಷನ್ ಮೂಲಕ ಮೊಬೈಲ್ ಆಪ್ ಅಭಿವೃದ್ಧಿ ಪಡಿಸಿದ್ದ ವಂಚಕರು, ಬಿಕೆ ಶೇರಿಂಗ್ ಎಕಾನಮಿ ಹೆಸರಿನಲ್ಲಿ ಜನರಿಗೆ ಹೂಡಿಕೆ ಮಾಡುವ ಸ್ಕೀಮ್ ಪರಿಚಯಿಸಿದ್ದರು. ಕೇವಲ 300 ರೂಪಾಯಿ ಹಣ ಹೂಡಿಕೆ ಮಾಡಿದರೆ, 1350 ರೂ. ಬರುತ್ತದೆ ಎಂದು ನಂಬಿಸಿದ್ದರು. ಕೇವಲ ಮೂರು ತಿಂಗಳಿಗೆ ಅಸಲು ಮತ್ತು ಬಡ್ಡಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ ಎಂದು ನಂಬಿಸಿದ್ದರು. ಇದನ್ನು ನಂಬಿದ ಜನ, ಬಂದ್ರೆ ಸಾವಿರ ರೂಪಾಯಿ ಬರಲಿ, ಹೋದ್ರೆ 300 ರೂಪಾಯಿ ಅಲ್ಲವೇ ಎಂದು ಸಾವಿರಾರು ಜನ ಹೂಡಿಕೆ ಮಾಡಿದ್ದಾರೆ. ಬೆಂಗಳೂರು, ಸೈಬರಾಬಾದ್ , ಸೇರಿದಂತೆ ದೇಶದೆಲ್ಲಡೆ ಸುಮಾರು 20 ಸಾವಿರ ಮಂದಿ ಹೂಡಿಕೆ ಮಾಡಿದ್ದಾರೆ. ಹೀಗೆ ಬರೋಬ್ಬರಿ 50 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. ಬಿಕೆ ಆಪ್ ತಯಾರಿಸಿ ಜನರಿಗೆ ಪರಿಚಯಿಸುವ ಮೂಲಕ ಹಣ ಸಂಗ್ರಹಿಸಿದ್ದಾರೆ.

ಬೋಗಸ್ ಕಂಪನಿಗಳು

ಬೋಗಸ್ ಕಂಪನಿಗಳು

ಈ ಹಣದ ವಹಿವಾಟು ನಡೆಸಲೆಂದೇ ಹತ್ತಕ್ಕೂ ಹೆಚ್ಚು ಬೋಗಸ್ ಕಂಪನಿ ಹುಟ್ಟು ಹಾಕಿದ್ದ ಕಿರಾತಕರು, ಆನ್‌ಲೈನ್ ನಲ್ಲೇ ಹಣ ವರ್ಗಾವಣೆ ಮಾಡಲಿಕ್ಕೆ ಚೀನಾ ಮೂಲದ ಕಂಪನಿಗಳ ಜತೆ ಟೈಪ್ ಆಗಿದ್ದಾರೆ. 300 ರೂ. ಹೂಡಿಕೆ, 3, ಸಾವಿರ ಹೂಡಿಕೆ, ಹಾಗೂ 15 ಸಾವಿರ ಹೂಡಿಕೆ ಮಾಡಿದರೆ 90 ದಿನಕ್ಕೆ ಮೂರು ಪಟ್ಟು ಮಾಡಿಕೊಡುವುದಾಗಿ ನಂಬಿಸಿದ್ದರು. ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಪ್ರಚುರ ಪಡಿಸಿದ್ದರು. ಹೀಗಾಗಿ ಸಾವಿರಾರು ಮಂದಿ ಹೂಡಿಕೆ ಮಾಡಿದ್ದಾರೆ. ಅಲ್ಲದೇ ತಮ್ಮ ಬ್ಯಾಂಕ್ ವಿವರ, ಎಲ್ಲವನ್ನೂ ಸಿಸ್ಕೋ.ಕಾಂನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಂಪನಿ ನೋಂದಣಿ ಮಾಡಿಸಿ ಸುಮಾರು ಹತ್ತಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಈ ಹಣ ವರ್ಗಾವಣೆಯಾಗುತ್ತಿತ್ತು.

ಮೂವರು ಅಂದರ್

ಮೂವರು ಅಂದರ್

ಈ ರೀತಿ ಮೋಸದ ಜಾಲ ಸಕ್ರಿಯಗೊಳಸಿ ಐವತ್ತು ಕೋಟಿ ರೂಪಾಯಿಗೂ ಅಧಿಕ ಹಣ ವಸೂಲಿ ಮಾಡಿದ್ದ ಮೂವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ತೆಲಂಗಣಾದ ರಾಯದುರ್ಗದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಮೂರು ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹರಿಯಾಣ ಮೂಲದ ಉದಯ್ ಪ್ರತಾಪ್, ದೆಹಲಿ ಮೂಲದ ನಿತೇಶ್ ಕುಮಾರ್ ಕೊತಾರಿ, ಹರಿಯಾಣ ಮೂಲದ ರಾಜೇಶ್ ಶರ್ಮಾ ಬಂಧಿತರು. ಚೈನಾ ಮೂಲದ ಕಿಂಗ್ ಪಿನ್ ಜಿಯಾಂಗ್ ಹುವೈ, ಪೆಂಗ್ ಗುವಾಯ್, ತಲೆ ಮರೆಸಿಕೊಂಡಿದ್ದಾರೆ. ಇವರಿಗಾಗಿ ಶೋಧ ನಡೆಸಲಾಗುತ್ತಿದೆ. ಸಿಸ್ಕೋ.ಕಾಮ್ ಎಂಬ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿ ಜನರಿಗೆ ಬೈಕ್ ಶೇರಿಂಗ್ ಹೂಡಿಕೆ ಸ್ಕೀಮ್ ಬಗ್ಗೆ ವಿವರಿಸುತ್ತಿದ್ದರು. ಇದನ್ನು ನಂಬಿ ಹೂಡಿಕೆ ಮಾಡಿದರು, ಚೈನ್ ಲಿಂಕ್ ಮಾದರಿಯಲ್ಲಿ ಬೇರೆಯವರಿಗೆ ವರ್ಗಾವಣೆ ಮಾಡುತ್ತಿದ್ದರು. ದೇಶದಲ್ಲಿ ಹೀಗೆ ಸಾವಿರಾರು ಮಂದಿ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ.

ಸಜ್ಜನರ್ ಕಿವಿಮಾತು

ಸಜ್ಜನರ್ ಕಿವಿಮಾತು

ಈ ಕುರಿತು ಸಮಗ್ರ ವಿವರ ನೀಡಿರುವ ಸೈಬರಾಬಾದ್ ಪೊಲೀಸರು, ಬೋಗಸ್ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳದಂತೆ ಕಿವಿಮಾತು ಹೇಳಿದ್ದಾರೆ. ತ್ವರಿತವಾಗಿ ಹಣ ಸಂಪಾದಿಸುವ ಮಾರ್ಗಗಳಿಲ್ಲ. ಇಂತಹ ವಂಚನೆ ಸ್ಕೀಮ್ ಗಳಿಗೆ ಹಣ ಹೂಡಿಕೆ ಮಾಡಿ ಮೋಸ ಹೋಗಬೇಡಿ ಎಂದು ಸೈಬರಾಬಾದ್ ಪೊಲೀಸ್ ಕಮೀಷನರ್ ಸಜ್ಜನರ್ ತಿಳಿಸಿದ್ದಾರೆ.

  ಶಿಕ್ಷಣ ಸಚಿವರಿಂದ ಮಹತ್ವದ ನಿರ್ಧಾರ! | Oneindia Kannada
  ಯಲ್ಲೂ ಎಕ್ಸ್ ಪ್ರೆಸ್ ದೋಖಾ

  ಯಲ್ಲೂ ಎಕ್ಸ್ ಪ್ರೆಸ್ ದೋಖಾ

  ರಾಜ್ಯದಲ್ಲಿ ಒಲಾ, ಉಬರ್ ಕಾರ್ಯಾರಂಭ ಮಾಡಿದ ಕೂಡಲೇ ದೊಡ್ಡ ಆಫರ್ ನೀಡಿತ್ತು. ಬಾಡಿಗೆ ಜತೆಗೆ ಇನ್‌ಸೆಸೆನ್ಟೀವ್ ಕೊಡ್ತೀವಿ ಎಂಬ ಆಫರ್ ನೀಡಿದ್ದರು. ಇದನ್ನು ನಂಬಿ ಎಷ್ಟೋ ಮಂದಿ ಕಾರುಗಳನ್ನು ಖರೀದಿಸಿ ಕಂಪನಿಗೆ ಬಿಟ್ಟರು. ಇದನ್ನು ನೋಡಿದ್ದ ವಂಚಕ ಜಾಲವೊಂದು ಯಲ್ಲೋ ಎಕ್ಸ್‌ ಪ್ರೆಸ್ ಹೆಸರಿನ ಕಂಪನಿ ಹುಟ್ಟಿಹಾಕಿ ಜನರಿಗೆ ಉಬರ್ ಮಾದರಿಯ ಆಫರ್ ನೀಡಿತು. ರಾಜ್ಯದ ಸಾವಿರಾರು ಜನ, ಸಾಲ ಮಾಡಿ ಈತನ ಕಂಪನಿಯಲ್ಲಿ ಹೂಡಿಕೆ ಮಾಡಿದರು. ತಿಂಗಳಿಗೆ ಐವತ್ತು ಸಾವಿರ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ ಎಂದು ನಂಬಿಸಿದ. ಇದನ್ನೇ ನಂಬಿದ ಮುಗ್ಧರು ಎರಡೆರಡು ವಾಹನಕ್ಕೆ ತಗಲುವ ವೆಚ್ಚವನ್ನು ಕಂಪನಿ ಖಾತೆಗೆ ಹಾಕಿದರು. ನೂರಾರು ಕೋಟಿ ರೂಪಾಯಿ ಸಂಗ್ರಹಿಸಿದ ಯಲ್ಲೋ ಎಕ್ಸ್ ಪ್ರೆಸ್ ಸದ್ದಿಲ್ಲದೇ ಬಾಗಿಲು ಹಾಕಿಕೊಂಡಿತು ! ಜನರು ಬೀದಿಗೆ ಬಿದ್ದರು. ಬಳಿಕ ಪೊಲಿಸ್ ಸ್ಟೇಷನ್, ಕೇಸು, ಕೋರ್ಟ್ ಅಲೆದಾಟ. ಹಾಕಿದ ಹಣವಂತೂ ಬರಲಿಲ್ಲ !

  English summary
  An online racket involving two Chinese nationals was busted with the arrest of three Indians who allegedly duped around 20,000 people across the country to the tune of Rs 50 crores by offering huge returns on investment
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X