ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ನಂಬಿಕೆಗೆ ಧಕ್ಕೆ: ಮತ್ತೆ ಬಿಜೆಪಿ ಮೇಲೆ ಕೇಸು

|
Google Oneindia Kannada News

ಹೈದರಾಬಾದ್‌, ಜೂ. 8: ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತನಾಡಿದ ಆರೋಪದ ಮೇಲೆ ತೆಲಂಗಾಣ ರಾಜ್ಯದ ಬಿಜೆಪಿ ಶಾಸಕ ರಾಜಾ ಸಿಂಗ್‌ ಮೇಲೆ ಹೈದರಾಬಾದ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತೆಲಂಗಾಣ ರಾಜ್ಯದ ಗೋಶಾಮಹಲ್‌ನ ಶಾಸಕನಾಗಿರುವ ರಾಜಾ ಸಿಂಗ್‌ ಮೇಲೆ ಭಾರತೀಯ ದಂಡ ಸಂಹಿತೆ 295 ಎ ಅಡಿಯಲ್ಲಿ ಹೈದರಾಬಾದ್‌ನ ಕಾಂಚನ್‌ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಹೈದರಾಬಾದ್‌ನ ನಿವಾಸಿ ಮೊಹಮ್ಮದ್ ಅಲಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

ನೂಪುರ್ ಶರ್ಮಾ ಬೆಂಬಲಕ್ಕೆ ನಿಂತ ನೆದರ್‌ಲ್ಯಾಂಡ್‌ ಸಂಸದನೂಪುರ್ ಶರ್ಮಾ ಬೆಂಬಲಕ್ಕೆ ನಿಂತ ನೆದರ್‌ಲ್ಯಾಂಡ್‌ ಸಂಸದ

ಈ ಸಂಬಂಧ ಹೇಳಿಕೆ ನೀಡಿರುವ ಕಂಚನ್‌ಬಾಗ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಉಮಾ ಮಹೇಶ್ವರ್‌ ರಾವ್‌, ಕಂಚನ್‌ಬಾಗ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ ಉಮಾ ಮಹೇಶ್ವರ್ ರಾವ್, ಕಾಂಚನ್‌ಬಾಗ್‌ನ ನಿವಾಸಿ ಮೊಹಮ್ಮದ್ ಅಲಿ ಎಂಬ ವ್ಯಕ್ತಿ ಶಾಸಕ ರಾಜಾ ಸಿಂಗ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡಿದ ಮೇಲೆ ನಾವು ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ.

Threat to Religious Belief: Case Against Another BJP Leader

ಬಿಜೆಪಿ ಶಾಸಕ ರಾಜಾ ಸಿಂಗ್ ಅವರ ವಿಡಿಯೋ ವೈರಲ್ ಆಗುತ್ತಿದೆ ಎಂದು ಅಲಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಒಂದು ನಿರ್ದಿಷ್ಟ ಸಮುದಾಯದ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವ ಹೇಳಿಕೆಯನ್ನು ಶಾಸಕ ರಾಜಾ ಸಿಂಗ್ ನೀಡುತ್ತಿದ್ದಾರೆ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ. ನಾವು ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ವಿಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ವೀಡಿಯೊದ ದಿನಾಂಕ ಮತ್ತು ಸಮಯವನ್ನು ಸಹ ಖಚಿತಪಡಿಸಲಾಗಿಲ್ಲ. ಪ್ರಕರಣ ತನಿಖೆಯ ಹಂತದಲ್ಲಿದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದರು.

ಇತ್ತೀಚೆಗೆ ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಮೇಲೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರಿಯ ವಕ್ತಾರೆ ನೂಪುರ್ ಶರ್ಮಾ ಹಾಗೂ ದೆಹಲಿ ಬಿಜೆಪಿ ವಕ್ತಾರ ನವೀನ್‌ ಕುಮಾರ್‌ ಜಿಂದಾಲ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿ ವಿವಿಧಡೆ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ ಇವರ ಹೇಳಿಕೆಗಳು ದೇಶ ವಿದೇಶಗಳಲ್ಲಿ ಭಾರತವನ್ನು ಖಂಡಿಸುವ ಮಟ್ಟಕ್ಕೆ ಬೆಳೆದು ಭಾರತೀಯ ವಸ್ತುಗಳ ಬಹಿಷ್ಕಾರಕ್ಕೂ ಕಾರಣವಾಗಿತ್ತು.

Threat to Religious Belief: Case Against Another BJP Leader

ಕತಾರ್‌, ಕುವೈತ್‌ ಸೇರಿದಂತೆ 15 ಮುಸ್ಲಿಂ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಮುಖ್ಯವಾಗಿ ತಮ್ಮ ದೇಶದಲ್ಲಿರುವ ಭಾರತದ ರಾಯಭಾರಿಗಳನ್ನು ಕರೆಸಿಕೊಂಡು ಪ್ರತಿಭಟನಾ ಪತ್ರವನ್ನು ನೀಡಿದ್ದವು. ಬಳಿಕ ನುಪೂರ್‌ ಸರ್ಮಾ ಹಾಗು ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಪಕ್ಷದಿಂದ ತೆಗೆದು ಹಾಕಲಾಗಿತ್ತು.

(ಒನ್ಇಂಡಿಯಾ ಸುದ್ದಿ)

English summary
Telangana BJP MLA Raja Singh has been booked by the Hyderabad police for allegedly threatening the religious sentiments of a particular community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X