ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯವ್ವಿ ಯವ್ವಿ!ತೆಲಂಗಾಣ ಕಾಂಗ್ರೆಸ್ ಅಭ್ಯರ್ಥಿಯ ಆಸ್ತಿ 300 ಕೋಟಿ ರೂ!

|
Google Oneindia Kannada News

ಹೈದರಾಬಾದ್, ನವೆಂಬರ್ 23: ತೆಲಂಗಾಣದಲ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ತಮ್ಮ ಆಸ್ತಿ ಮೌಲ್ಯ ಘೋಷಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಗೋಪಾಲ್ ರೆಡ್ಡಿ ಎಂಬುವವರು ಅಫಿಡವಿಟ್ ನಲ್ಲಿ ಘೋಷಿಸಿರುವ ಪ್ರಕಾರ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 300 ಕೋಟಿ ರೂಪಾಯಿಯಂತೆ!

ಗೊತ್ತಾ? ಆಂಧ್ರ ಸಿಎಂ ಆಸ್ತಿಗಿಂತ ಮೂರು ವರ್ಷದ ಮೊಮ್ಮಗನ ಆಸ್ತಿಯೇ ಜಾಸ್ತಿ!ಗೊತ್ತಾ? ಆಂಧ್ರ ಸಿಎಂ ಆಸ್ತಿಗಿಂತ ಮೂರು ವರ್ಷದ ಮೊಮ್ಮಗನ ಆಸ್ತಿಯೇ ಜಾಸ್ತಿ!

ಈ ಮೂಲಕ ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂದೆನ್ನೆಸಿಕೊಂಡಿದ್ದಾರೆ ರೆಡ್ಡಿ. ಬುಧವಾರ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಆಸ್ತಿ ವಿವರ ಘೋಷಿಸಿದ್ದು, ಅದರ ಪ್ರಕಾರ ಅವರ ಕುಟುಂಬದ ಒಟ್ಟು ಆಸ್ತಿ 81.83 ಕೋಟಿ ರೂ.ಎಂಬ ಮಾಹಿತಿ ಲಭ್ಯವಾಗಿತ್ತು.

ಆಸ್ತಿ ಮೌಲ್ಯದಲ್ಲಿ ಶೇ.371 ರಷ್ಟು ಏರಿಕೆ!

ಆಸ್ತಿ ಮೌಲ್ಯದಲ್ಲಿ ಶೇ.371 ರಷ್ಟು ಏರಿಕೆ!

2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿ ಅವರು ಘೋಷಿಸಿದ್ದ ಒಟ್ಟು ಆಸ್ತಿ ಮೌಲ್ಯ 66 ಕೋಟಿ ರೂ. ಆದರೆ 2018 ರ ಹೊತ್ತಿಗೆ ಅಂದರೆ ಕಳೆದ ನಾಲ್ಕು ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯ ಶೇ.371 ರಷ್ಟು ಹೆಚ್ಚಾಗಿದೆ! ತಮ್ಮ ಒಟ್ಟು ಆಸ್ತಿ ಮೌಲ್ಯ 300 ಕೋಟಿ ರೂ. ಎಂದು ರೆಡ್ಡಿ ಅಫಿಡವಿಟ್ ನಲ್ಲಿ ನಮೂದಿಸಿದ್ದಾರೆ. ಈ ಮೂಲಕ ಭಾರತದ ಶ್ರೀಮಂತ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ. ನಲ್ಗೊಂಡ ಜಿಲ್ಲೆಯಿಂದ ಇವರು ಸ್ಪರ್ಧಿಸುತ್ತಿದ್ದಾರೆ.

ಇನ್ನೋರ್ವ ಶ್ರೀಮಂತ ಅಭ್ಯರ್ಥಿಗಳ

ಇನ್ನೋರ್ವ ಶ್ರೀಮಂತ ಅಭ್ಯರ್ಥಿಗಳ

ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್)ಯ ಸದಸ್ಯರಾದ ಮರ್ರಿ ಜನಾರ್ದನ ರೆಡ್ಡಿ 161 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಅವರ ಆಸ್ತಿ ಕಳೆದ ಚುನಾವಣೆಯಿಂದ ಇಲ್ಲಿಯವರಗೆ 161 ಕೋಟಿ ರೂ.ನಷ್ಟು ಹೆಚ್ಚಾಗಿದೆ!

ಈ ಮುಖ್ಯಮಂತ್ರಿಗಿಂತ ಅವರ ಪತ್ನಿಯೇ ಶ್ರೀಮಂತರು!ಈ ಮುಖ್ಯಮಂತ್ರಿಗಿಂತ ಅವರ ಪತ್ನಿಯೇ ಶ್ರೀಮಂತರು!

ಜಿ.ಯೋಗಾನಂದ

ಜಿ.ಯೋಗಾನಂದ

ತೆಲಂಗಾಣದ ಬಿಜೆಪಿಯ ಜಿ ಯೋಗಾನಂದ ಅವರು 146 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಹೊಂದಿ ಮೂರನೇ ಶ್ರೀಮಂತ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ. ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಡಿ.7 ರಂದು ಚುನಾವಣೆ ನಡೆಯಲಿದ್ದು, ಡಿ. 11 ರಂದು ಫಲಿತಾಂಶ ಹೊರಬೀಳಲಿದೆ.

ಕೆಟಿ ರಾಮರಾವ್

ಕೆಟಿ ರಾಮರಾವ್

ತೆಲಂಗಾಣ ಸಂಪುಟ ಸಚಿವರಲ್ಲಿ ಹಣಕಾಸು ಸಚಿವ ಎಟಲಾ ರಾಜೆಂದ್ರ ಅವರು 42 ಕೋಟಿ ರೂ. ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 41.82 ಕೋಟಿ ರೂ. ಆಸ್ತಿಯೊಂದಿಗೆ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿ ರಾಮ ರಾವ್ ಎರಡನೇ ಸ್ಥಾನದಲ್ಲಿದ್ದಾರೆ. ಚಂದ್ರಶೇಖರ್ ರಾವ್ ಅವರ ಒಟ್ಟು ಆಸ್ತಿ ಮೌಲ್ಯ 23.55 ಕೋಟಿ ರೂ.

ಶ್ರೀಮಂತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಸ್ತಿ ಎಷ್ಟು: ಚಿತ್ರ ವಿವರಶ್ರೀಮಂತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಸ್ತಿ ಎಷ್ಟು: ಚಿತ್ರ ವಿವರ

English summary
With assets worth over Rs. 300 crore, Congress' K Rajgopal Reddy is the richest candidate ahead of next month's assembly elections in Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X