• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆತ್ಮಹತ್ಯೆ ಮಾಡಿಕೊಂಡ ಟಾಲಿವುಡ್ ನಟಿ, ಕಾರಣ ನಿಗೂಢ

|

ಹೈದರಾಬಾದ್, ಫೆಬ್ರವರಿ 06: ಟಾಲಿವುಡ್ ನಟಿ ನಾಗ ಝಾನ್ಸಿ ಎಂಬುವವರು ತಮ್ಮ ಅಪಾರ್ಟ್ಮೆಂಟಿನಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

21 ವರ್ಷ ವಯಸ್ಸಿನ ನಾಗ ಝಾನ್ಸಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ವ್ಯಕ್ತಿಯೊಬ್ಬರೊಂದಿಗೆ ನಿರಂತರವಾಗಿ ಚಾಟ್ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಝಾನ್ಸಿ ಅವರ ಮೊಬೈಲ್ ಫೋನ್ ಮತ್ತು ಈಮೇಲ್ ಮಾಹಿತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚೆಂದುಳ್ಳಿ ಚೆಲುವೆ ರೂಪದರ್ಶಿಯ ಭೀಕರ ಕೊಲೆ, ನಡುಗಿತು ಮುಂಬೈ

ಮಾ ಟಿವಿ ಯಲ್ಲಿ ಪ್ರಸಾರವಾಗುತ್ತಿದ್ದ ಪವಿತ್ರ ಬಂಧನ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಝಾನ್ಸಿ, ಕಳೆದ ಆರು ತಿಂಗಳಿನಿಂದ ವ್ಯಕ್ತಿಯೊಬ್ಬರೊಂದಿಗೆ ಸಂಪರ್ಕದಲ್ಲಿದ್ದರು. ಇದು ಪ್ರೇಮ ಪ್ರಕರಣವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೈದರಾಬಾದಿನಲ್ಲಿ ಅಪಾರ್ಟ್ಮೆಂಟೊಂದರಲ್ಲಿ ಝಾನ್ಸಿ, ತಮ್ಮ ತಾಯಿ ಮತ್ತು ಸಹೋದರನೊಡನೆ ವಾಸವಾಗಿದ್ದರು. ಅವರಿಬ್ಬರೂ ಮನೆಯಲ್ಲಿಲ್ಲದ ಸಮಯ ನೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಆಕೆಯ ಮನೆಗೆ ಬಂದ ಅವರ ಸಹೋದರ ಕಾಲಿಂಗ್ ಬೆಲ್ ಮಾಡಿ ಎಷ್ಟು ಹೊತ್ತಾದರೂ, ಬಾಗಿಲು ತೆರೆಯದಿದ್ದಾಗ, ಫೋನ್ ಮಾಡಿದ್ದಾರೆ. ಫೋನ್ ಅನ್ನೂ ತೆಗೆದುಕೊಳ್ಳದಿದ್ದಾಗ ಗಾಬರಿಯಾಗಿ ಪೊಲಿಸರಿಗೆ ತಿಳಿಸಿದ್ದಾರೆ. ಪೊಲೀಸರು, ಮನೆಯ ಬಾಗಿಲು ಮುರಿದು ನೋಡಿದರೆ ಝಾನ್ಸಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸೋಶಿಯಲ್ ಮಿಡಿಯಾ ಐಕಾನ್, ರೂಪದರ್ಶಿ ತರಾ ಬರ್ಬರ ಹತ್ಯೆ

ಅವರ ಮರಣೋತ್ತರ ಪರೀಕ್ಷೆಯ ನಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ.

English summary
Naga Jhansi, a Telugu television actor, allegedly committed suicide on Tuesday at her house in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X