• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿರ್ದೇಶಕನಿಂದ ನಟಿ ಮೇಲೆ ಕಾರಿನಲ್ಲಿ ಅತ್ಯಾಚಾರಕ್ಕೆ ಯತ್ನ?

By Mahesh
|

ಹೈದರಾಬಾದ್, ಆಗಸ್ಟ್ 17: ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕ ಚಲಪತಿ ಹಾಗೂ ನಟ ಸೃಜನ್ ಮೇಲೆ ತೆಲುಗು ನಟಿಯೊಬ್ಬರು ಆತ್ಯಾಚಾರ ಯತ್ನ ಆರೋಪ ಹೊರೆಸಿದ್ದಾರೆ.

ಸಿನಿಮಾವೊಂದರಲ್ಲಿ ನಟಿಸಲು ಅವಕಾಶ ನೀಡುವುದಾಗಿ ಹೇಳಿ ಕರೆಸಿಕೊಂಡು, ಕಾರಿನಲ್ಲೇ ಅತ್ಯಾಚಾರ ಮಾಡಲು ಯತ್ನಿಸಿದರು. ಆಗಸ್ಟ್ 13ರಂದು ಈ ಘಟನೆ ನಡೆಯಿತು. ನಾನು ಆಘಾತಕ್ಕೊಳಗಾಗಿದ್ದೆ. ಈಗ ಈ ಬಗ್ಗೆ ಪೊಲೀಸರಿಗ್ ದೂರು ನೀಡುತ್ತಿದ್ದೇನೆ ಎಂದು ನಟಿ ಹೇಳಿದ್ದಾರೆ.

ಚಿತ್ರೀಕರಣ ನಡೆಸುತ್ತಿರುವ ಸ್ಥಳಕ್ಕೆ ಹೋಗೋಣ ಎಂದು ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾರಿನಲ್ಲೆ ತನ್ನನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ವಿಜಯವಾಡಕ್ಕೆ ತಲುಪಿದಾಗ ಅವರು ಕೆಟ್ಟದಾಗಿ ವರ್ತಿಸಲು ಆರಂಭಿಸಿದರು.

ಅತಿವೇಗದಿಂದ ಚಲಪತಿ ಅವರು ಕಾರು ಚಲಾಯಿಸಿದರು. ಕಾರು ಲಾರಿಗೆ ಢಿಕ್ಕಿ ಹೊಡೆಯಿತು. ಗಾಯಗೊಂಡಿದ್ದ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಎಲ್ಲವನ್ನು ವಿವರಿಸುತ್ತಿದ್ದೇನೆ ಎಂದು ನಟಿ ಹೇಳಿದ್ದಾರೆ.

ನಟಿ ನೀಡಿದ ದೂರಿನ ಆಧಾರದ ಮೇಲೆ ಚಲಪತಿ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ನಟ ಸೃಜನ್ ನಾಪತ್ತೆಯಾಗಿದ್ದಾರೆ.

English summary
A Telugu actress has filed a police complaint against director Chalapathi and actor Srujan for allegedly attempting to rape her in a car, The News Minute reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X