ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಪ್ರತಿಮೆ ನಿರ್ಮಿಸಿ ಪೂಜಿಸುತ್ತಿರುವ ತೆಲಂಗಾಣದ ಯುವಕ!

|
Google Oneindia Kannada News

ಜಂಗಮ್ (ತೆಲಂಗಾಣ), ಜೂನ್ 18: ತಮ್ಮ ಆರಾಧ್ಯ ದೈವ ಎಂದೇ ಭಾವಿಸಿದ ರಾಜಕಾರಣಿಗಳು, ನಟ ನಟಿಯರು, ಕ್ರೀಡಾಪಟುಗಳನ್ನು ಪೂಜಿಸುವ ಸಂಗತಿಗಳು ಭಾರತದಲ್ಲಿ ಹೊಸತೇನಲ್ಲ. ಮನುಷ್ಯರಿಗೂ ದೇವರ ಪಟ್ಟ ನೀಡಿ ಪೂಜೆ ಮಾಡುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ನಟಿಯರ ಹೆಸರಿನಲ್ಲಿ ದೇವಸ್ಥಾನವನ್ನೇ ಕಟ್ಟಿದ ಉದಾಹರಣೆಗಳಿವೆ.

ಆದರೆ, ತೆಲಂಗಾಣದ ಈ ಯುವಕ ತನ್ನ ವಿಚಿತ್ರ ನಡೆಯಿಂದ ಗಮನ ಸೆಳೆದಿದ್ದಾನೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಅಭಿಮಾನಿಯಾಗಿರುವ ಈತ, ಅವರನ್ನು ದೇವರಂತೆಯೇ ಪೂಜಿಸುತ್ತಿದ್ದಾನೆ.

ತೆಲಂಗಾಣದ ಜಂಗಮ್‌ನ ಕೊನ್ನೆ ಗ್ರಾಮದಲ್ಲಿನ ಬುಸ್ಸಾ ಕೃಷ್ಣ ಎಂಬ ಯುವಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರು ಅಡಿ ಎತ್ತರದ ಪ್ರತಿಮೆ ನಿರ್ಮಿಸಿದ್ದಾನೆ. ಅದನ್ನು ಜೂನ್ 14ರಂದು ತನ್ನ ಜನ್ಮದಿನದಂದು ಅನಾವರಣಗೊಳಿಸಿದ್ದಾನೆ.

ಹಸಿದವರಿಗೆ ಆಹಾರ ಕೊಡಲು ಕೆಲಸವನ್ನೇ ಬಿಟ್ಟ, ವಿಶ್ವದಾಖಲೆ ಬರೆದ: ಮಾನವೀಯ ವರದಿ ಹಸಿದವರಿಗೆ ಆಹಾರ ಕೊಡಲು ಕೆಲಸವನ್ನೇ ಬಿಟ್ಟ, ವಿಶ್ವದಾಖಲೆ ಬರೆದ: ಮಾನವೀಯ ವರದಿ

ಟ್ರಂಪ್ ಅವರ ಪ್ರತಿಮೆಗೆ ದಿನವೂ ಪೂಜೆ ಸಲ್ಲಿಸುತ್ತಿರುವುದಾಗಿ ಆತ ಹೇಳಿದ್ದಾನೆ. ಅಲ್ಲದೆ, ಪ್ರತಿನಿತ್ಯವೂ ಪ್ರತಿಮೆಗೆ ಹಾಲಿನ ಅಭಿಷೇಕವನ್ನೂ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.

ಡೊನಾಲ್ಡ್ ಟ್ರಂಪ್ ಅವರ ನೇರ ಹಾಗೂ ನಿಷ್ಠುರವಂತಿಕೆಯ ನಡೆಯಿಂದ ಪ್ರಭಾವಿತನಾಗಿರುವುದಾಗಿ ಆತ ಹೇಳುತ್ತಾನೆ. ಪ್ರತಿಮೆ ಅನಾವರಣ ಮಾಡುವುದಕ್ಕೂ ಮೂರು ವರ್ಷಗಳ ಹಿಂದಿನಿಂದ ಕೃಷ್ಣ, ಡೊನಾಲ್ಡ್ ಟ್ರಂಪ್ ಅವರ ಫೋಟೋಕ್ಕೆ ಪೂಜೆ ಸಲ್ಲಿಸುತ್ತಿದ್ದಾನೆ.

ಹಿಂದೆಯೇ ವೈರಲ್ ಆಗಿತ್ತು

ಹಿಂದೆಯೇ ವೈರಲ್ ಆಗಿತ್ತು

ಮೂಲತಃ ಕೃಷಿಕನಾದ ಕೃಷ್ಣ, ಡೊನಾಲ್ಡ್ ಟ್ರಂಪ್ ಅವರ ಅತಿ ದೊಡ್ಡ ಭಾರತೀಯ ಅಭಿಮಾನಿಯಂತೆ. ಡೊನಾಲ್ಡ್ ಟ್ರಂಪ್ ಅವರ ಫೋಟೊಕ್ಕೆ ಪೂಜೆ ಸಲ್ಲಿಸುವ ಕೃಷ್ಣನ ಫೋಟೊಗಳು ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಆತ ಪ್ರಸಿದ್ಧಿ ಪಡೆದಿದ್ದ.

ದೇವರ ಫೋಟೊ ಜತೆ ಟ್ರಂಪ್

ದೇವರ ಫೋಟೊ ಜತೆ ಟ್ರಂಪ್

ಟ್ರಂಪ್ ಭಕ್ತ ಎಂದೇ ಗುರುತಿಸಿಕೊಂಡಿರುವ ಕೃಷ್ಣನ ಮನೆಯ ದೇವರ ಕೋಣೆಯಲ್ಲಿ ಟ್ರಂಪ್ ಅವರ ಅನೇಕ ಭಾವಚಿತ್ರಗಳಿವೆ. ಅದರ ಜತೆಗೆ ಅನೇಕ ಹಿಂದೂ ದೇವ-ದೇವತೆಗಳ ವಿಗ್ರಹ ಹಾಗೂ ಚಿತ್ರಗಳು ಕೂಡ ಇವೆ. ಅಭಿಷೇಕದ ಜತೆಗೆ ಟ್ರಂಪ್ ಅವರ ಚಿತ್ರಕ್ಕೆ ಪ್ರಸಾದ ಇರಿಸಿ, ಕುಂಕುಮ, ಹೂವುಗಳಿಂದ ಅಲಂಕರಿಸಿ ಫೋಟೊಕ್ಕೆ ಆರತಿಯನ್ನೂ ಬೆಳಗುತ್ತಾನೆ.

ಕರೀಂನಗರದಲ್ಲಿ 1 ರುಪಾಯಿಗೆ ಅಂತ್ಯಸಂಸ್ಕಾರ, ಸಂಬಂಧಿಕರಿಗೆ ಐದು ರುಪಾಯಿಗೆ ಒಂದು ಊಟ ಕರೀಂನಗರದಲ್ಲಿ 1 ರುಪಾಯಿಗೆ ಅಂತ್ಯಸಂಸ್ಕಾರ, ಸಂಬಂಧಿಕರಿಗೆ ಐದು ರುಪಾಯಿಗೆ ಒಂದು ಊಟ

ಸಾಫ್ಟ್ ವೇರ್ ಉದ್ಯೋಗಿ ಹತ್ಯೆ ಕಾರಣ

ಸಾಫ್ಟ್ ವೇರ್ ಉದ್ಯೋಗಿ ಹತ್ಯೆ ಕಾರಣ

2017ರಲ್ಲಿ ಅಮೆರಿಕದ ಕನ್ಸಾಸ್ ಬಾರ್‌ನಲ್ಲಿ ಅಲ್ಲಿನ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬ ದ್ವೇಷದ ಕಾರಣದಿಂದ ತೆಲಂಗಾಣ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀನಿವಾಸ್ ಕುಚ್ಚಿಬೊಟ್ಲ ಅವರನ್ನು ಹತ್ಯೆ ಮಾಡಿದ ಘಟನೆ ನಂತರ ಟ್ರಂಪ್ ಅವರನ್ನು ಆರಾಧಿಸಲು ಆರಂಭಿಸಿದ್ದಾಗಿ ಆತ ತಿಳಿಸಿದ್ದಾನೆ.

ಇಂಟರ್‌ ಮೀಡಿಯೆಟ್: 99ರ ಬದಲು ಶೂನ್ಯ ಅಂಕ ನೀಡಿದ್ದ ಶಿಕ್ಷಕಿ ಅಮಾನತು ಇಂಟರ್‌ ಮೀಡಿಯೆಟ್: 99ರ ಬದಲು ಶೂನ್ಯ ಅಂಕ ನೀಡಿದ್ದ ಶಿಕ್ಷಕಿ ಅಮಾನತು

ಭಾರತೀಯರ ಶ್ರೇಷ್ಠತೆ ತಿಳಿಯಬೇಕು

ಭಾರತೀಯರ ಶ್ರೇಷ್ಠತೆ ತಿಳಿಯಬೇಕು

'ಆ ಘಟನೆ ನನಗೆ ತೀವ್ರ ನೋವುಂಟು ಮಾಡಿತು. ನಾವು ಅವರೆಡೆಗೆ ಪ್ರೀತಿ ಮತ್ತು ಅನುಭೂತಿ ತೋರಿಸಿದಾಗ ಮಾತ್ರ ಅಮೆರಿಕದ ಅಧ್ಯಕ್ಷ ಮತ್ತು ಅವರ ಜನರು ಭಾರತೀಯರ ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎನಿಸಿತು. ಈ ಕಾರಣದಿಂದ ಟ್ರಂಪ್ ಅವರಿಗೆ ಒಂದು ದಿನ ಈ ಪ್ರಾರ್ಥನೆ ತಲುಪುತ್ತದೆ ಎಂಬ ಭರವಸೆಯೊಂದಿಗೆ ನಾನು ಅವರನ್ನು ಪೂಜಿಸಲು ಆರಂಭಿಸಿದೆ' ಎಂದು ವಿವರಿಸಿದ್ದಾನೆ.

English summary
Bussa Krishna a young man in Telangana unveils the 6 feet statue of America President Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X