ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತೆ ಅಧಿಕಾರಕ್ಕೆ! ಎನ್ ಡಿಟಿವಿ ವಿಶ್ಲೇಷಣೆ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 04: ತೆಲಂಗಾಣದಲ್ಲಿ ಕೆ.ಚಂದ್ರಶೇರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎನ್ ಡಿಟಿವಿ ವಿಶ್ಲೇಷಿಸಿದೆ.

ಕೆಸಿಆರ್ ಅವರನ್ನು ಸೋಲಿಸಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ. ಟಿಡಿಪಿಯ ಚಂದ್ರಬಾಬು ನಾಯ್ಡು ಅವರಿಗೆ ತೆಲಂಗಾಣದಲ್ಲೂ ಸಾಕಷ್ಟು ಅಭಿಮಾನಿಗಳಿರುವ ಕಾರಣ ಕಾಂಗ್ರೆಸ್, ಟಿಡಿಪಿ ನೆರವಿನ ಮೊರೆಹೋಗಿದೆ.

ವಿಶ್ಲೇಷಣೆ : ರಾಹುಲ್ ಮತ್ತು ನಾಯ್ಡು ಮೈತ್ರಿಕೂಟ ಬಾರಿಸುವುದೇ ಜಯಭೇರಿ?ವಿಶ್ಲೇಷಣೆ : ರಾಹುಲ್ ಮತ್ತು ನಾಯ್ಡು ಮೈತ್ರಿಕೂಟ ಬಾರಿಸುವುದೇ ಜಯಭೇರಿ?

ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಈ ಚುನಾವಣೆ ದಕ್ಷಿಣ ಭಾರತದ ರಾಜ್ಯಗಳ ಜನಾದೇಶ ಯಾವರೀತಿ ಇದೆ ಎಂಬುದನ್ನು ಅಳೆಯಲು ಮಾನದಂಡವಾಗುವುದರಿಂದ ಈ ಚುನಾವಣೆಯ ಮೇಲೆ ಕೇಂದ್ರ ನಾಯಕರ ಕಣ್ಣೂ ನೆಟ್ಟಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವರು ತೆಲಂಗಾಣದಲ್ಲಿ ಪ್ರಚಾರ ನಡೆಸಿದ್ದಾರೆ. ಇಷ್ಟೆಲ್ಲ ಆದರೂ ಈ ರಾಜ್ಯದಲ್ಲಿ ಕೆಸಿಆರ್ ಅವರೇ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ಎನ್ ಡಿಟಿವಿ ವಿಶ್ಲೇಷಣೆ.

ಟಿಆರ್ ಎಸ್ ಗೆ 66 ಸೀಟು!

ಟಿಆರ್ ಎಸ್ ಗೆ 66 ಸೀಟು!

ತೆಲಂಗಾಣ ರಾಷ್ಟ್ರ ಸಮಿತಿ - 66
ಕಾಂಗ್ರೆಸ್, ಟಿಡಿಪಿ ಮೈತ್ರಿಕೂಟ -39
ಎಐಎಂಐಎಂ - 7
ಬಿಜೆಪಿ - 4
ಇತರರು - 3

ತೆಲಂಗಾಣ ರಾಷ್ಟ್ರ ಸಮಿತಿ

ತೆಲಂಗಾಣ ರಾಷ್ಟ್ರ ಸಮಿತಿ

ತೆಲಂಗಾಣದಲ್ಲಿ ಒಟ್ಟು 119 ಕ್ಷೇತ್ರಗಳಿದ್ದು, ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 60. ಎನ್ ಡಿಟಿವಿ ವಿಶ್ಲೇಷಣೆಯ ಪ್ರಕಾರ ಟಿಆರ್ ಎಸ್ 66 ಕ್ಷೇತ್ರಗಳನ್ನು ಗೆದ್ದು ಬಹುಮತ ಪಡೆಯಲಿದೆ. ಬಿಜೆಪಿ 4 ಸ್ಥಾನ ಗೆದ್ದರೆ, ಇತರರು 3 ಸ್ಥಾನ ಗೆಲ್ಲಲಿದ್ದಾರೆ. ಟಿಆರ್ ಎಸ್ ಬಗ್ಗೆ ಬಿಜೆಪಿ ಮೃಧು ಧೋರಣೆಯನ್ನೇ ತಳೆದಿದ್ದು, ಚುನಾವಣೆಗೂ ಮೊದಲು ಈ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿಲ್ಲ. ಚುನಾವಣೋತ್ತರ ಮೈತ್ರಿಯ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಕಸ್ಮಾತ್ ಬಿಜೆಪಿ ಮೈತ್ರಿ ಮಾಡಿಕೊಳ್ಳದಿದ್ದರೂ ಇಷ್ಟು ಸೀಟುಗಳನ್ನು ಗೆದ್ದರೆ ಟಿಆರ್ ಎಸ್ ಅಂತು ಸುಭದ್ರ ಸರ್ಕಾರ ನೀಡುವುದಕ್ಕೆ ಸಾಧ್ಯ.

ಹೈದರಾಬಾದ್.. ಅಲ್ಲಲ್ಲ, ಭಾಗ್ಯನಗರ! ಬಿಜೆಪಿಗೆ ಅಧಿಕಾರಕ್ಕೆ ಬಂದ್ರೆ ಮಾತ್ರ!ಹೈದರಾಬಾದ್.. ಅಲ್ಲಲ್ಲ, ಭಾಗ್ಯನಗರ! ಬಿಜೆಪಿಗೆ ಅಧಿಕಾರಕ್ಕೆ ಬಂದ್ರೆ ಮಾತ್ರ!

ಕಾಂಗ್ರೆಸ್-ಟಿಡಿಪಿ ಜುಗಲ್ ಬಂಧಿಗೆ ಎಷ್ಟು ಅಂಕ?

ಕಾಂಗ್ರೆಸ್-ಟಿಡಿಪಿ ಜುಗಲ್ ಬಂಧಿಗೆ ಎಷ್ಟು ಅಂಕ?

ತೆಲುಗು ದೇಶಂ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟ 39 ಸ್ಥಾನಗಳನ್ನು ಪಡೆಯಲಿದೆ. ಬಹುಮತಕ್ಕೆ ಅಗತ್ಯವಿರುವ ಇನ್ನೂ 21 ಸ್ಥಾನಗಳನ್ನು ಪಡೆಯಲು ಈ ಮೈತ್ರಿಕೂಟಕ್ಕೆ ಸಾಧ್ಯವೇ ಇಲ್ಲ. ಅಸಾದುದ್ದಿನ್ ಓವೈಸಿಯ ಎಐಎಂಐಎಂನ 7 ಮತ್ತು ಇತರ 3 ಶಾಸಕರ ಬೆಂಬಲಸಿಕ್ಕಿಬಿಟ್ಟರೂ ಬಹುಮತ ಪಡೆಯುವುದಕ್ಕೆ ಸಾಧ್ಯವಿಲ್ಲ. ಈ ಕಾರಣದಿಂದ ಟಿಆರ್ ಎಸ್ ಸೇಫ್ ಆಗಿ ಉಳಿಯಲಿದೆ.

ಡಿ.11 ರಂದು ತಿಳಿಯಲಿದೆ ಹಣಬರಹ!

ಡಿ.11 ರಂದು ತಿಳಿಯಲಿದೆ ಹಣಬರಹ!

ಹಾಲಿ ಮುಖ್ಯಮಂತ್ರಿ ಟಿಆರ್ ಎಸ್ ನ ಕೆ ಚಂದ್ರಶೇಖರ್ ರಾವ್ ಅವರು ವಿಧಾನಸಭೆಯನ್ನು ಅವಧಿಗೂ ಮುನ್ನವೇ ವಿಸರ್ಜಿಸಿದ್ದರಿಂದ ತೆಲಂಗಾಣದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಯುತ್ತಿದೆ. ಡಿ.7 ರಂದು ಮತದಾನ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ.

ತೆಲಂಗಾಣದಲ್ಲಿ ರಣಕಹಳೆ ಮೊಳಗಿಸಿದ ಯೋಗಿ-ಓವೈಸಿ ಮಾತಿನ ಚಕಮಕಿ!ತೆಲಂಗಾಣದಲ್ಲಿ ರಣಕಹಳೆ ಮೊಳಗಿಸಿದ ಯೋಗಿ-ಓವೈಸಿ ಮಾತಿನ ಚಕಮಕಿ!

English summary
Will TRS win again in Telangana? According to NDTV analysis in Telangana TRS will get clear majority again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X