ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್‌ ಮೀಡಿಯೆಟ್: 99ರ ಬದಲು ಶೂನ್ಯ ಅಂಕ ನೀಡಿದ್ದ ಶಿಕ್ಷಕಿ ಅಮಾನತು

|
Google Oneindia Kannada News

ಹೈದರಾಬಾದ್, ಏ.29: ತೆಲಂಗಾಣದಲ್ಲಿ ಇಂಟರ್‌ಮೀಡಿಯೆಟ್ ಪರೀಕ್ಷೆಯಲ್ಲಿ 3 ಲಕ್ಷ ವಿದ್ಯಾರ್ಥಿಗಳು ಫೇಲು ಎನ್ನುವ ಫಲಿತಾಂಶ ಬಂದ ಬಳಿಕ ಇದುವರೆಗೆ 19 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾಗಾದರೆ ನಿಜವಾಗಿಯೂ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಫೇಲಾಗಿದ್ದಾರಾ ಎಂದರೆ ಖಂಡಿತವಾಗಿಯೂ ಇಲ್ಲ, ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದವರಿಂದಲೇ ತಪ್ಪಾಗಿದೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಇಂಟರ್‌ಮೀಡಿಯೆಟ್ : ತೆಲಂಗಾಣದಲ್ಲಿ ಬರೋಬ್ಬರಿ 3 ಲಕ್ಷ ವಿದ್ಯಾರ್ಥಿಗಳು ಫೇಲ್ ಇಂಟರ್‌ಮೀಡಿಯೆಟ್ : ತೆಲಂಗಾಣದಲ್ಲಿ ಬರೋಬ್ಬರಿ 3 ಲಕ್ಷ ವಿದ್ಯಾರ್ಥಿಗಳು ಫೇಲ್

ಉಮಾದೇವಿ ಎನ್ನುವ ಶಿಕ್ಷಕಿ ನವ್ಯ ಅವರ ತೆಲುಗು ಪೇಪರ್‌ಗೆ 99ರ ಬದಲು ಶೂನ್ಯ ಅಂಕ ನೀಡಿದ್ದರು. ಇದೀಗ ಅವರನ್ನು ಕೆಲಸದಿಂದ ಅಮಾನತು ಗೊಳಿಸಲಾಗಿದೆ.

Telangana Teacher Gives Student 0 Marks Instead Of 99 Suspended

ವಿದ್ಯಾರ್ಥಿನಿಯೊಬ್ಬಳಿಗೆ ಮೌಲ್ಯಮಾಪಕಿ 99 ಅಂಕಗಳ ಬದಲು ಶೂನ್ಯ ಅಂಕ ನೀಡಿದ್ದ ಮಾಹಿತಿ ಇದೀಗ ಬಹಿರಂಗಗೊಂಡಿದೆ. ಮೂರು ಸದಸ್ಯರುಳ್ಳ ಕಮಿಟಿ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಇದು ಉಲ್ಲೇಖವಾಗಿದೆ. ಇಂಟರ್‌ಮೀಡಿಯೆಟ್ ಮಂಡಳಿಯು ಅಂತಹ ಉಪನ್ಯಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.

ಬಿಐಎಯು ಟ್ರೈಬಲ್ ವೆಲ್‌ಫೇಟ್‌ ಶಾಲೆಯ ಶಿಕ್ಷಕ ವಿಜಯ್ ಕುಮಾರ್ ಅವರನ್ನು ವಜಾಗೊಳಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂಟರ್ ಮೀಡಿಯೇಟ್ ಫಲಿತಾಂಶದ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ನಿವಾಸ ಕಚೇರಿಯಲ್ಲಿ ವಿಶೇಷ ಸಭೆ ನಡೆಸಿದರು.

ಉತ್ತರ ಪತ್ರಿಕೆಗಳ ಉಚಿತ ಮೌಲ್ಯಮಾಪನ ಮತ್ತು ಅಂಕಗಳ ಮರುಎಣಿಕೆಗೆ ಆದೇಶಿಸಿದ್ದಾರೆ.
ಮೂರು ಲಕ್ಷ ವಿದ್ಯಾರ್ಥಿಗಳ ಉತ್ತರಪತ್ರಿಕೆಯನ್ನು ಮರು ಮೌಲ್ಯಮಾಪನ ಮಾಡಬೇಕು ಎಂದು ತೆಲಂಗಾಣ ಹೈಕೋರ್ಟ್ ಮಂಗಳವಾರ ಆದೇಶಿಸಿತ್ತು. ಏ.29ಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಶಿಕ್ಷಣ ಮಂಡಳಿಗೆ ಸೂಚನೆ ನೀಡಿದೆ.

English summary
Telangana Board of Intermediate, which is at the centre of a row over goof-up in declaring results of Intermediate examination, suspended a teacher and imposed fine on another for giving a student '0' marks instead of '99' on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X