ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಟಿಗಾಗಿ ಬಹುಕೃತ ವೇಷ, ತೆಲಂಗಾಣದಲ್ಲಿ ಇದು ಮಾಮೂಲು

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 31: ತೆಲಂಗಾಣದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಭರದಿಂದ ಸಾಗಿದೆ. ಸ್ಟಾರ್ ಪ್ರಚಾರಕರ ನಡುವೆ ಕಣದಲ್ಲಿರುವ ಅಭ್ಯರ್ಥಿಗಳು ವಿವಿಧ ರೀತಿ ವೇಷ ತೊಟ್ಟು, ಆಮಿಷವೊಡ್ಡಿ ಮತಯಾಚನೆ ಮಾಡುತ್ತಿದ್ದಾರೆ

ತೆಲಂಗಾಣ ಚುನಾವಣೆ: 24 ಸ್ಥಾನಗಳ ಮೇಲೆ ನಿಂತಿದೆ ಬಿಜೆಪಿ ಭವಿಷ್ಯತೆಲಂಗಾಣ ಚುನಾವಣೆ: 24 ಸ್ಥಾನಗಳ ಮೇಲೆ ನಿಂತಿದೆ ಬಿಜೆಪಿ ಭವಿಷ್ಯ

ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರ ನಿರತ ಅಭ್ಯರ್ಥಿಗಳು ಸುಮ್ಮನೆ ಮತಯಾಚಿಸುತ್ತಿಲ್ಲ, ಮತದಾರರ ದೈನಂದಿನ ಬದುಕಿನ ಕೆಲಸದಲ್ಲಿ ತಾವು ಪಾಲ್ಗೊಳ್ಳುತ್ತಿದ್ದಾರೆ. ಕ್ಷೌರಿಕನ ಅಂಗಡಿಗೆ ತೆರಳಿ ಗ್ರಾಹಕರಿಗೆ ಶೇವ್ ಮಾಡುತ್ತಿದ್ದಾರೆ. ರಸ್ತೆ ಬದಿ ಸ್ನಾನ ಮಾಡಿಸುವುದು, ದೋಸೆ ಮಾಡಿಕೊಡುವುದು, ಬಟ್ಟೆ ಸರಿಪಡಿಸಿಕೊಡುವುದು ಎಲ್ಲವೂ ಟಿಆರ್ ಎಸ್ ಪಕ್ಷದ ಅಭ್ಯರ್ಥಿಗಳ ಕಾಯಕವಾಗಿದೆ.

ತೆಲಂಗಾಣ: ಸೀಟು ಹಂಚಿಕೆ ರಾಜಕೀಯ, ಕಾಂಗ್ರೆಸ್ 90ರಲ್ಲಿ ಸ್ಪರ್ಧೆ ತೆಲಂಗಾಣ: ಸೀಟು ಹಂಚಿಕೆ ರಾಜಕೀಯ, ಕಾಂಗ್ರೆಸ್ 90ರಲ್ಲಿ ಸ್ಪರ್ಧೆ

ತೆಲಂಗಾಣ ಅಸೆಂಬ್ಲಿಯ ಮಾಜಿ ಸ್ಪೀಕರ್ ಎಸ್ ಮಧುಸೂದನ್ ಚಾರಿ ಅವರು ಈ ರೀತಿ ವೇಷತೊಡುವುದರಲ್ಲಿ ಎಲ್ಲರನ್ನು ಮೀರಿಸುತ್ತಿದ್ದಾರೆ. ಭುಪಲ್ ಪಲ್ಲೆಯಲ್ಲಿನಲ್ಲಿ ಕ್ಷೌರಿಕನಾಗಿ ಕಾಣಿಸಿಕೊಂಡಿದ್ದರು. ಇನ್ನೊಂದೆಡೆ ಮೆಹಬೂಬ್ ನಗರದಲ್ಲಿ ಟಿಆರ್ ಎಸ್ ಅಭ್ಯರ್ಥಿ ಶ್ರೀನಿವಾಸ ಗೌಡ ಅವರು ಬಟ್ಟೆ ಇಸ್ತ್ರಿ ಮಾಡುವುದು, ದರ್ಜಿ ಕೆಲಸ ಮಾಡಿಕೊಡುವುದರಲ್ಲಿ ನಿರತರಾಗಿದ್ದರು.

ವಿಧಾನಸಭೆ ಚುನಾವಣೆ: 3 ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಧಾನಸಭೆ ಚುನಾವಣೆ: 3 ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Telangana polls: They will bathe you and then shave you for your votes

ತೆಲಂಗಾನ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಯಾದವ್ ಅವರು ಮುಷೀರಾಬಾದ್ ನ ರಸ್ತೆ ಬದಿಯಲ್ಲಿ ತಮ್ಮ ಪಾಕಪ್ರಾವೀಣ್ಯ ತೋರಿದರು. ಯೆಲ್ಲಾಂಡುವಿನ ಕೋರಂ ಕನಕಯ್ಯ ಅವರು ಸಮುದಾಯ ಭವನಗಳ ಬಳಿ ಸಾರ್ವಜನಿಕವಾಗಿ ಸ್ನಾನ ಮಾಡಿಸುತ್ತಿರುವ ದೃಶ್ಯ ಕಂಡು ಬಂದಿದೆ. ಅಭ್ಯರ್ಥಿಗಳ ಈ ರೀತಿ ಪಾಲ್ಗೊಳ್ಳುವಿಕೆ ಈ ಬಾರಿ ಹೆಚ್ಚಾಗಿದ್ದು, ಮತದಾರರು ಮಜಾ ತೆಗೆದುಕೊಳ್ಳುತ್ತಿದ್ದಾರೆ.

English summary
While the battle in Telangana is a hard fought one, there is some comic relief as well, thanks to the manner in which some of the candidates are campaigning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X