ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ: ಜನವರಿ ಮಧ್ಯದಿಂದ 80 ಲಕ್ಷ ಮಂದಿಗೆ ಕೊರೊನಾ ಲಸಿಕೆ ವಿತರಣೆ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 16:ತೆಲಂಗಾಣದಲ್ಲಿ ಜನವರಿ ಮಧ್ಯದಿಂದ 80 ಲಕ್ಷ ಮಂದಿಗೆ ಕೊರೊನಾ ಲಸಿಕೆ ವಿತರಿಸಲಾಗುವುದು ಎಂದು ಆರೋಗ್ಯಾಧಿಕಾರಿ ಜಿ ಶ್ರೀನಿವಾಸ್ ತಿಳಿಸಿದ್ದಾರೆ.

ಮೊದಲ ಡೋಸ್ ಮುಂದಿನ 8-10 ದಿನಗಳೊಳಗಾಗಿ ನೀಡಲಾಗುತ್ತದೆ, ಎರಡನೇ ಡೋಸ್ ಮೂರ್ನಾಲ್ಕು ವಾರಗಳಲ್ಲಿ ಲಭ್ಯವಾಗಲಿದೆ.

ಭಾರತದಲ್ಲಿ ಕೊರೊನಾ ಲಸಿಕೆ ತುರ್ತು ಅನುಮತಿಗೆ ಇರುವ ತೊಡಕುಗಳೇನು?ಭಾರತದಲ್ಲಿ ಕೊರೊನಾ ಲಸಿಕೆ ತುರ್ತು ಅನುಮತಿಗೆ ಇರುವ ತೊಡಕುಗಳೇನು?

ಯಾವುದೇ ಲಸಿಕೆಗೆ ತುರ್ತು ಬಳಕೆಗೆ ಅನುಮತಿ ನೀಡಿಲ್ಲ, ಭಾರತದ ಪರಿಸ್ಥಿತಿಯನ್ನು ಗಮನಿಸಿದರೆ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್, ಹಾಗೂ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ತಮವಾಗಿದೆ ಎಂದೆನಿಸುತ್ತದೆ.

Telangana Plans To Vaccinate 80 Lakh People From Mid-January

ಇನ್ನು ಫೈಜರ್ ಲಸಿಕೆ ಅಗತ್ಯವಿದ್ದರೂ ಅದನ್ನು -70 ಡಿಗ್ರಿಯಲ್ಲಿ ಇರಿಸುವುದು ಕಷ್ಟವಾಗಲಿದೆ. ಇದು ತಾಂತ್ರಿಕವಾಗಿ ಹಾಗೂ ವ್ಯವಸ್ಥಿತವಾಗಿ ಕಠಿಣವಾಗಿದೆ, ಇದಲ್ಲದೆ ಇದು ತುಲನಾತ್ಮಕವಾಗಿ ದುಬಾರಿಯೂ ಕೂಡ ಆಗಿದೆ.

ರಾಜ್ಯದ ಎಲ್ಲಾ ಉದ್ದೇಶಿತ ಮತ್ತು ದುರ್ಬಲ ಗುಂಪುಗಳಿಗೆ ಲಸಿಕೆ ಹಾಕುವ ದೊಡ್ಡ ಕಾರ್ಯಾಚರಣೆಗೆ ತಯಾರಾಗಲು ಸಿದ್ಧತೆಗಳು ಭರದಿಂದ ಸಾಗಿದೆ.
ಜನವರಿ ಮಧ್ಯದಿಂದ 80 ಲಕ್ಷ ಲಸಿಕೆ ನೀಡಲು ಯೋಜನೆ, ತರಬೇತಿ ಮತ್ತು ಕಾರ್ಯತಂತ್ರವನ್ನು ಅಂತಿಮಗೊಳಿಸಲಾಗುತ್ತಿದೆ.

80 ಲಕ್ಷ ಜನರಿಗೆ ರಾಜ್ಯಕ್ಕೆ 1.6 ಕೋಟಿ ಡೋಸ್ ಲಸಿಕೆ ನೀಡುವ ನಿರೀಕ್ಷೆ ಇದೆ. ಇದನ್ನು ಎರಡು ಶಾಟ್‌ಗಳಲ್ಲಿ ನೀಡಲಾಗುವುದು, ಉದ್ದೇಶಿತಫಲಾನುಭವಿಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಮೂರು ಲಕ್ಷ ವೈದ್ಯರು, ದಾದಿಯರಿಗೆ ನೀಡಲಾಗುತ್ತದೆ.

Recommended Video

ಕಸ ಸಂಗ್ರಹಕ್ಕೆ ಮಾಸಿಕ ಶುಲ್ಕ ಹೆಚ್ಚಿಸಿದ ಬಿಬಿಎಂಪಿ-ಪಾಲಿಕೆ ನಿರ್ಧಾರ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ | Oneindia Kannada

ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮೂಲಸೌಕರ್ಯವನ್ನು ಹೆಚ್ಚಿಸಲಾಗುತ್ತದೆ. 10 ಹೊಸ ಪ್ರಾದೇಶಿಕ ಲಸಿಕೆ ಮೂಲ ಕೇಂದ್ರಗಳೊಂದಿಗೆ ಒಂದು ಕೋಟಿ ಡೋಸ್ ಸಾಮರ್ಥ್ಯದೊಂದಿಗೆ ಕೊವಿಡ್ 19 ಲಸಿಕೆಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತದೆ. ಕೇಂದ್ರ ಶೇಖರಣಾ ಸೌಲಭ್ಯವು ಎರಡು ಕೋಟಿ ಪ್ರಮಾಣದಲ್ಲಿ ಸಾಮರ್ಥ್ಯವನ್ನು ಹೊಂದಿದೆ.

English summary
Come Sankranti and Pongal, COVID-19 vaccine immunisation should start in Telangana, with the first dose for 80 lakh people in targeted groups, given in eight-10 days and second dose in another four weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X