ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಸಮುದಾಯಕ್ಕೆ ಹರಡಿತಾ ಕೊರೊನಾವೈರಸ್?

|
Google Oneindia Kannada News

ಹೈದ್ರಾಬಾದ್, ಜುಲೈ.24: ಕೊರೊನಾವೈರಸ್ ಸೋಂಕು ತೆಲಂಗಾಣದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಸಮುದಾಯದ ಹಂತದಲ್ಲಿ ಕೊವಿಡ್-19 ಸೋಂಕು ಹಬ್ಬುತ್ತಿರುವ ಬಗ್ಗೆ ರಾಜ್ಯ ಸರ್ಕಾರವೇ ಸುಳಿವು ನೀಡಿದೆ.

Recommended Video

China launches Mars probe during Pandemic | Oneindia Kannada

ಕೊರೊನಾವೈರಸ್ ಸೋಂಕು ಸಮುದಾಯದಲ್ಲಿ ಹರಡುತ್ತಿರುವ ಹಿನ್ನೆಲೆ ಸೋಂಕಿನ ಲಕ್ಷಣಗಳ ಬಗ್ಗೆ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಬಾರದು ಎಂದು ಸರ್ಕಾರ ತಿಳಿಸಿದೆ. ಆದರೆ ಆರೋಗ್ಯ ಸಚಿವರು ಮಾತ್ರ ಸಮುದಾಯಕ್ಕೆ ಸೋಂಕು ಹರಡಿಲ್ಲ ಎಂದು ಹೇಳುತ್ತಿದ್ದಾರೆ.

ಹುತಾತ್ಮ ಯೋಧನ ಪತ್ನಿಗೆ ಕೊಟ್ಟು ಮಾತು ಉಳಿಸಿಕೊಂಡ ತೆಲಂಗಾಣ ಸರ್ಕಾರಹುತಾತ್ಮ ಯೋಧನ ಪತ್ನಿಗೆ ಕೊಟ್ಟು ಮಾತು ಉಳಿಸಿಕೊಂಡ ತೆಲಂಗಾಣ ಸರ್ಕಾರ

ತೆಲಂಗಾಣದ ಪಾಲಿಗೆ ಮುಂದಿನ ನಾಲ್ಕೈದು ವಾರಗಳು ತುಂಬಾ ಅಪಾಯಕಾರಿಯಾಗಿರಲಿದೆ. ಕೊವಿಡ್-19 ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೇ ವಿನಃ ನಿರ್ಲಕ್ಷ್ಯ ತೋರಬಾರದು ಎಂದು ಸಾರ್ವಜನಿಕರ ಆರೋಗ್ಯ ಇಲಾಖೆಯ ನಿರ್ದೇಶಕ ಡಾ.ಜಿ.ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.

Telangana: Official Hints At Coronavirus Community Spread, Minister Denies


ಸಮುದಾಯದಲ್ಲಿ ಹರಡುತ್ತಿರುವ ಕೊವಿಡ್-19:

ಕೊರೊನೊವೈರಸ್ ಸೋಂಕು ಸಮುದಾಯವನ್ನು ಹೊಕ್ಕಿದೆ. ಸೋಂಕಿತರನ್ನು ಪತ್ತೆ ಮಾಡುವುದು ಮುಂದಿನ ದಿನಗಳಲ್ಲಿ ಸಾಕಷ್ಟು ಕಷ್ಟಕರವಾಗಲಿದೆ ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸೋಂಕಿನ ಹರಡುವಿಕೆ ಸಮುದಾಯದ ಮಟ್ಟ ಅಥವಾ ಮೂರನೇ ಹಂತಕ್ಕೆ ತಲುಪಿದೆ ಎಂದು ಹೇಳಬಹುದು. ಈ ಹಂತದಲ್ಲಿ ಯಾರಿಗೆ ಯಾವ ಮೂಲದಿಂದ ಸೋಂಕು ಅಂಟಿಕೊಳ್ಳುತ್ತದೆ ಎನ್ನುವುದನ್ನು ಪತ್ತೆ ಮಾಡುವುದೇ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ತೆಲಂಗಾಣ ಆರೋಗ್ಯ ಸಚಿವರು ಹೇಳುವುದೇ ಬೇರೆ:

ತೆಲಂಗಾಣದಲ್ಲಿ ನೊವೆಲ್ ಕೊರೊನಾವೈರಸ್ ಸೋಂಕು ಸಮುದಾಯದ ಮಟ್ಟದಲ್ಲಿ ಹರಡುತ್ತಿದೆ ಎನ್ನುವ ಆರೋಗ್ಯ ಇಲಾಖೆಯ ಎಚ್ಚರಿಕೆಗೆ ತದ್ವಿರುದ್ಧವಾಗಿ ಆರೋಗ್ಯ ಸಚಿವ ಇಟಾಲ ರಾಜೇಂದರ್ ಹೇಳಿಕೆ ನೀಡಿದ್ದಾರೆ. ಪ್ರತಿನಿತ್ಯ 1500 ಪ್ರಕರಣಗಳು ಪತ್ತೆಯಾದವು ಎಂದ ಮಾತ್ರಕ್ಕೆ ಸೋಂಕು ಸಮುದಾಯದ ಹಂತವನ್ನು ತಲುಪಿದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

English summary
Telangana: Official Hints At Coronavirus Community Spread, Minister Denies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X