ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸಿಆರ್ ಆಸ್ತಿ 7 ಕೋಟಿ ರು ಹೆಚ್ಚಳ, ಕಾರು ಹೊಂದಿಲ್ಲ

|
Google Oneindia Kannada News

ಹೈದರಾಬಾದ್, ನವೆಂಬರ್ 15: ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಅಧ್ಯಕ್ಷ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಆಸ್ತಿ ವಿವರ ಬಹಿರಂಗಗೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೆಸಿಆರ್ ಅವರ ಆಸ್ತಿ 7 ಕೋಟಿ ರು ಅಧಿಕವಾಗಿದೆ, ಸ್ಥಿರಾಸ್ತಿ, ಆಭರಣಗಳ ಮೌಲ್ಯ 3.55 ಕೋಟಿ ರು ಹೆಚ್ಚಳವಾಗಿದೆ.

2017-18ರ ಅವಧಿಗೆ ಸಲ್ಲಿಸುವ ಅಫಿಡವಿಟ್ ಪ್ರಕಾರ ರಾವ್ ಅವರು ನಿವ್ವಳ ಆದಾಯ 91.52 ಲಕ್ಷರು ಬಂದಿದೆ. ಎಲ್ಲವೂ ಕೃಷಿ ಭೂಮಿಯಿಂದ ಪಡೆದ ಆದಾಯವಾಗಿದೆ. ಉಳಿದ ಆದಾಯ ವ್ಯಯ ಲೆಕ್ಕ ಸೇರಿದಂತೆ ಈ ಅವಧಿಯಲ್ಲಿ 1.10 ಕೋಟಿ ರು ತೆರಿಗೆ ಮೊತ್ತವನ್ನು ಪಾವತಿಸಿದ್ದಾರೆ.

ತೆಲಂಗಾಣದಲ್ಲಿ ಮತ್ತೆ ಕೆಸಿಆರ್ ಹವಾ : ಸಮೀಕ್ಷೆ ಫಲಿತಾಂಶತೆಲಂಗಾಣದಲ್ಲಿ ಮತ್ತೆ ಕೆಸಿಆರ್ ಹವಾ : ಸಮೀಕ್ಷೆ ಫಲಿತಾಂಶ

ಗಜ್ವೇಲ್ ವಿಧಾನಸಭಾ ಕ್ಷೇತ್ರದಿಂದ ಕೆಸಿಆರ್ ಅವರು ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.2014ರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯ ಅಭ್ಯರ್ಥಿ ವಾಂಟೆರು ಪ್ರತಾಪ್ ರೆಡ್ಡಿ ಅವರನ್ನು 19,391 ಮತಗಳ ಅಂತರದಿಂದ ಸೋಲಿಸಿದ್ದರು.

ಸಮೀಕ್ಷೆ: ತೆಲಂಗಾಣದಲ್ಲಿ ಮತ್ತೆ ಟಿಆರ್ ಎಸ್ ಅಧಿಕಾರಕ್ಕೆಸಮೀಕ್ಷೆ: ತೆಲಂಗಾಣದಲ್ಲಿ ಮತ್ತೆ ಟಿಆರ್ ಎಸ್ ಅಧಿಕಾರಕ್ಕೆ

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ಡಿಸೆಂಬರ್ 07ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 11ರಂದು ಮತ ಎಣಿಕೆ ನಡೆದು, ಫಲಿತಾಂಶ ಹೊರಬರಲಿದೆ. ಸೆಪ್ಟೆಂಬರ್ 06ರಂದು ವಿಧಾನಸಭೆಯನ್ನು ವಿಸರ್ಜನೆ ಮಾಡಿದ್ದರಿಂದ ಅವಧಿಗೂ ಮುನ್ನ ಚುನಾವಣೆ ಎದುರಾಗಿದೆ.

1.10 ಕೋಟಿ ರು ತೆರಿಗೆ ಪಾವತಿ

1.10 ಕೋಟಿ ರು ತೆರಿಗೆ ಪಾವತಿ

ತೆಲಂಗಾಣ ಪಬ್ಲಿಕೇಷನ್ಸ್ ಪ್ರೈ ಲಿಮಿಟೆಡ್ ನಿಂದ 4.16 ಕೋಟಿ ರು ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. 91.52 ಲಕ್ಷ ರು ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದು, 1.10 ಕೋಟಿ ರು ತೆರಿಗೆ ಪಾವತಿ ಪಾವತಿಸಿದ್ದಾರೆ.

ಬ್ಯಾಂಕ್ ಠೇವಣಿ 5.53 ಕೋಟಿ ರು

ಬ್ಯಾಂಕ್ ಠೇವಣಿ 5.53 ಕೋಟಿ ರು

ತೆಲಂಗಾಣ ಬ್ರಾಡ್ ಕಾಸ್ಟಿಂಗ್ ಪ್ರೈ ಲಿಮಿಟೆಡ್ ನ ಒಡೆತನದ ಸುದ್ದಿವಾಹಿನಿ ಹೊಂದಿದ್ದು, 55 ಲಕ್ಷ ರು ಷೇರುಗಳನ್ನು ಹೊಂದಿದ್ದಾರೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಬರೋಡಾದಲ್ಲಿ 5.53 ಕೋಟಿ ರು ಠೇವಣಿ ಹೊಂದಿದ್ದಾರೆ.

2014ರಲ್ಲಿ 15.15 ಕೋಟಿ ರು ನಷ್ಟಿತ್ತು

2014ರಲ್ಲಿ 15.15 ಕೋಟಿ ರು ನಷ್ಟಿತ್ತು

2014ರಲ್ಲಿ 15.15 ಕೋಟಿ ರು ನಷ್ಟಿದ್ದ ಒಟ್ಟಾರೆ ಆಸ್ತಿ ಮೌಲ್ಯ 22.60 ಕೋಟಿ ರುಗೇರಿದೆ. ಗಜ್ವೇಲ್ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಕೂಡಾ ಅಸೆಂಬ್ಲಿಗೆ ಪ್ರವೇಶ ಬಯಸಿದ್ದು, ಗಜ್ವೇಲ್ ನಲ್ಲಿ 3.19 ಕೋಟಿರು ಮೌಲ್ಯದ ತೋಟದ ಮನೆ ಹೊಂದಿದ್ದಾರೆ.

3 ಕೋಟಿ ರು ಸಾಲ ಹೊಂದಿದ್ದಾರೆ

3 ಕೋಟಿ ರು ಸಾಲ ಹೊಂದಿದ್ದಾರೆ

ಬಿ ಶ್ರೀನಿವಾಸ್ ರಾವ್ ಅವರಿಂದ 3 ಕೋಟಿ ರು ಹಾಗೂ ಪ್ಯಾಕ್ಟ್ ಸೆಕ್ಯುರಿಟೀಸ್ ಹಾಗೂ ಫೈನಾಶಿಯಲ್ಸ್ ನಿಂದ 3.75 ಕೋಟಿ ರು ಸಾಲ ಪಡೆದಿದ್ದಾರೆ. ಪುತ್ರ ಕೆ.ಟಿ ರಾಮರಾವ್ ಅವರಿಂದ 88.82 ಲಕ್ಷ ಸಾಲ ಸೇರಿದಂತೆ ಒಟ್ಟಾರೆ, 8.88 ಕೋಟಿ ರು ಸಾಲ ಹೊಂದಿದ್ದಾರೆ.

English summary
Since he became the Chief Minister of Telangana, the assets of K Chandrashekar Rao has grown by around Rs 7 crore. While his assets grew by Rs 3.89 crore between 2014 and 2018, his immovable properties including jewellery saw an increase by Rs 3.55 crore during the same period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X