ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ಮರ್ಯಾದಾ ಹತ್ಯೆ: ದಲಿತ ನಾಗರಾಜು ಪತ್ನಿಗೆ ಬಿಜೆಪಿ ಟಿಕೆಟ್?

|
Google Oneindia Kannada News

ಹೈದರಾಬಾದ್ ಮೇ 9: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಸಾವನ್ನಪ್ಪಿದ ದಲಿತ ನಾಗರಾಜು ಅವರ ಪತ್ನಿ ಪಲ್ಲವಿ ಅಲಿಯಾಸ್ ಸೈಯದ್ ಅಶ್ರಿನ್ ಸುಲ್ತಾನಾ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪಲ್ಲವಿ ಅಲಿಯಾಸ್ ಸೈಯದ್ ಅಶ್ರಿನ್ ಸುಲ್ತಾನಾ ಅವರನ್ನು ಗೆಲ್ಲಿಸಲು ಪಕ್ಷದ ರಾಜ್ಯ ನಾಯಕತ್ವ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ಅವರಿಗೆ ಸೂಕ್ತ ಸಮಯದಲ್ಲಿ ತೆಲಂಗಾಣದಲ್ಲಿ ಎಲ್ಲಿಂದಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಹುದು. ಆಕೆಯ ಪತಿ ನಾಗರಾಜು ಅವರನ್ನು ಪಲ್ಲವಿಯ ಸಹೋದರ ಮತ್ತು ಇತರರು ಅಂತರ್ಜಾತಿ ವಿವಾಹ ವಿರೋಧಿಸಿ ಕಳೆದ ವಾರ ಸಾರ್ವಜನಿಕರ ಮುಂದೆ ಕೊಚ್ಚಿ ಕೊಲೆ ಮಾಡಿದ್ದರು. ಕ್ಷೇತ್ರದಲ್ಲಿ ಸಾಕಷ್ಟು ದಲಿತ ಮತದಾರರನ್ನು ಸೆಳೆಯಲು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬಹುದು ಎನ್ನಲಾಗುತ್ತಿದೆ.

ಹೈದರಾಬಾದ್ ಮರ್ಯಾದಾ ಹತ್ಯೆಯ ಬಗ್ಗೆ ಮೌನ ಮುರಿದ ಅಸಾದುದ್ದೀನ್ ಓವೈಸಿಹೈದರಾಬಾದ್ ಮರ್ಯಾದಾ ಹತ್ಯೆಯ ಬಗ್ಗೆ ಮೌನ ಮುರಿದ ಅಸಾದುದ್ದೀನ್ ಓವೈಸಿ

ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಮಾರ್ಪಲ್ಲಿ ಗ್ರಾಮದ ದಲಿತ ವ್ಯಕ್ತಿ ನಾಗರಾಜು (ಸಯ್ಯದ್ ಅಶ್ರಿನ್ ಸುಲ್ತಾನಾ ಅಲಿಯಾಸ್ ಪಲ್ಲವಿಯನ್ನು ಮದುವೆಯಾದ) ಹತ್ಯೆಯು ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ಸೇಡಿನ ನೇರ ಪ್ರಕರಣವೆಂದು ತೋರುತ್ತದೆಯಾದರೂ, ಭಾರತೀಯ ಜನತಾ ಪಕ್ಷ (ಬಿಜೆಪಿ) ಇದರಲ್ಲಿ ರಾಜಕೀಯ ಲಾಭಪಡೆದುಕೊಳ್ಳಲು ಶ್ರಮಿಸುತ್ತಿದೆ.

Telangana honour killing: BJP ticket for Dalit Nagaraju wife?

ಹತ್ಯೆಯ ನಂತರ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾರ್ಯಾಚರಣೆಗೆ ಇಳಿದಿದೆ. ಜೊತೆಗೆ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇಬ್ಬರು ವ್ಯಕ್ತಿಗಳ ನಡುವಿನ ಸಮಸ್ಯೆಯ ನಡುವೆಯೂ ಕೆಲವು ನಾಯಕರು ಅದಕ್ಕೆ ಕೋಮು ಬಣ್ಣ ನೀಡಿ ಧಾರ್ಮಿಕ ದ್ವೇಷ ಸೃಷ್ಟಿಸುವ ಮಟ್ಟಕ್ಕೆ ಹೋದರು.

ಅದೇನೇ ಇದ್ದರೂ, ಕೊಲೆಯನ್ನು ಎಲ್ಲಾ ಜಾತಿ, ಧರ್ಮ ಮತ್ತು ಧರ್ಮದ ಜನರು ಖಂಡಿಸಿದರು. ಆಲ್ ಇಂಡಿಯಾ ಮಜಿಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಇದು "ಇಸ್ಲಾಮಿಕ್ ಬೋಧನೆಗಳಿಗೆ" ವಿರುದ್ಧವಾದ ಕೃತ್ಯ ಎಂದು ಬಣ್ಣಿಸಿದ್ದಾರೆ. ಮುಸ್ಲಿಂ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳೂ ಇದನ್ನು ತೀವ್ರವಾಗಿ ಖಂಡಿಸಿವೆ.

ಆದರೆ, ಬಿಜೆಪಿ ನಾಯಕರು ತಮ್ಮ ತಮ್ಮಲ್ಲೇ ಪೈಪೋಟಿಗಿಳಿದು ದೂರದರ್ಶನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಧವೆ ಸೈಯದ್ ಅಶ್ರಿನ್ ಸುಲ್ತಾನ (ಅಲಿಯಾಸ್ ಪಲ್ಲವಿ) ಮನೆಗೆ ಭೇಟಿ ನೀಡುತ್ತಿದ್ದಾರೆ ಮತ್ತು ಪಲ್ಲವಿಯ ಸಹೋದರ ಮೊಬಿನ್ ಅಹಮದ್‌ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕೊಲೆಯಾದ ಸ್ಥಳದಲ್ಲಿ ಸಂದರ್ಶನಗಳನ್ನು ನೀಡುತ್ತಿದ್ದಾರೆ.

ಆಕೆಯ ಸೋದರ ಮಾವ ಮಸೂದ್ ಬಂಧಿತ ಇನ್ನೊಬ್ಬ ಆರೋಪಿ. ಅಶ್ರಿನ್ ಸುಲ್ತಾನಾ ನಾಗರಾಜು ಅವರನ್ನು ಮದುವೆಯಾದ ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಅವರ ಪ್ರಕಾರ ಇಸ್ಲಾಂಗೆ ನಾಗರಾಜು ಮತಾಂತರಗೊಳ್ಳಲು ಮುಂದಾಗಿದ್ದರು. ಆದರೆ ವಿಧವೆಯ ಕುಟುಂಬದಿಂದ ಇದನ್ನು ತಿರಸ್ಕರಿಸಲಾಯಿತು. ಹೀಗಾಗಿ ಸುಲ್ತಾನಾ ಅವರೇ ಹಿಂದೂ ಧರ್ಮಕ್ಕೆ ಮತಾಂತರವಾದರು.

ಬಿಜೆಪಿ ತೆಲಂಗಾಣ ಅಧ್ಯಕ್ಷ ಬಂಡಿ ಸಂಜಯ್ ಹೇಳಿಕೆಯಲ್ಲಿ, "ಇದು ಸಂಪೂರ್ಣವಾಗಿ ಕೋಮು ಘಟನೆಯಾಗಿದೆ ಮತ್ತು ಹತ್ಯೆಯ ಹಿಂದಿನ ಕೋಮುವಾದಿ ಅಂಶಗಳನ್ನು ಸರ್ಕಾರವು ಬಹಿರಂಗಪಡಿಸಬೇಕೆಂದು ನಾವು ಬಯಸುತ್ತೇವೆ" ಎಂದಿದ್ದಾರೆ.

ನಾಗರಾಜು ಮತ್ತು ಆಶ್ರಿನ್ ಸುಲ್ತಾನಾ ಅಲಿಯಾಸ್ ಪಲ್ಲವಿ ಜನವರಿಯಲ್ಲಿ ಕುಟುಂಬ ಸದಸ್ಯರ ಅಪೇಕ್ಷೆಗೆ ವಿರುದ್ಧವಾಗಿ ವಿವಾಹವಾದರು. ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಬಹಳ ದಿನಗಳಿಂದ ಸ್ನೇಹಿತರು. ಆದಾಗ್ಯೂ, ಆಶ್ರಿನ್ ಸುಲ್ತಾನ ಕುಟುಂಬ ಮದುವೆಗೆ ಒಪ್ಪಲಿಲ್ಲ.

ಮೂಲಗಳ ಪ್ರಕಾರ, ಮದುವೆಗೂ ಮುನ್ನ ಮೊಬಿನ್ ಅಹ್ಮದ್ ತನ್ನ ಸಹೋದರಿ ಅಶ್ರಿನ್ ಸುಲ್ತಾನಾಗೆ ನಾಗರಾಜು ಅವರನ್ನು ಭೇಟಿಯಾಗುವುದು ಅಥವಾ ಮಾತನಾಡುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೂ ಅವಳು ನಾಗರಾಜು ಭೇಟಿ ಮಾಡಿದಳು. ಆರ್ಯ ಸಮಾಜದಲ್ಲಿ ನಾಗರಾಜು ಅವರನ್ನು ವಿವಾಹವಾದರು. ತನ್ನ ಸಹೋದರಿ ನಾಗರಾಜು ಜೊತೆ ಮದುವೆಯಾದ ನಂತರ ಮೋಬಿನ್ ಅವಮಾನ ಅನುಭವಿಸಿದ. ನಂತರ ಸಂಬಂಧಿಕರು ಮತ್ತು ಅವನ ಸ್ನೇಹಿತರು ಅವನನ್ನು ನಿಂದಿಸಿದ್ದರಿಂದ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

English summary
Sources say that Dalit Nagaraju's wife Pallavi alias Syed Ashirin Sultana, who was killed in the Telangana massacre case, has been given a ticket to contest from the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X