ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಚ್ಚಿಬಿದ್ದ ತೆಲಂಗಾಣ: ನಡುರಸ್ತೆಯಲ್ಲೇ ವಕೀಲ ದಂಪತಿಯ ಬರ್ಬರ ಕೊಲೆ

|
Google Oneindia Kannada News

ಹೈದರಾಬಾದ್, ಫೆಬ್ರವರಿ 18: ಆಘಾತಕಾರಿ ಘಟನೆಯೊಂದರಲ್ಲಿ ತೆಲಂಗಾಣ ಹೈಕೋರ್ಟ್‌ನ ವಕೀಲ ದಂಪತಿಯನ್ನು ನಡು ರಸ್ತೆಯಲ್ಲಿಯೇ ಬುಧವಾರ ಮಧ್ಯಾಹ್ನ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಘಟನೆಯ ವಿಡಿಯೋ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ತೆಲಂಗಾಣವನ್ನು ಬೆಚ್ಚಿಬೀಳಿಸಿದೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್‌) ಮುಖಂಡನೇ ಈ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ವಕೀಲರಾದ ಗಟ್ಟು ವಾಮನ್ ರಾವ್ ಮತ್ತು ಅವರ ಪತ್ನಿ ಪಿವಿ ನಾಗಮಣಿ ಅವರು ನ್ಯಾಯಾಲಯದ ಕಲಾಪವೊಂದನ್ನು ಮುಗಿಸಿ ಕಾರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮಂತಾನಿ ಮತ್ತು ಪೆದ್ದಪಲ್ಲಿ ಪಟ್ಟಣಗಳ ನಡುವಿನ ರಸ್ತೆಯಲ್ಲಿ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿ ಅವರನ್ನು ಹತ್ಯೆ ಮಾಡಿದ್ದಾನೆ. ಈ ಕೊಲೆಯ ಘಟನೆಯನ್ನು ರಸ್ತೆಯಲ್ಲಿ ಓಡಾಡುತ್ತಿದ್ದವರು ಸೆಲ್‌ಫೋನ್‌ಗಳಲ್ಲಿ ಚಿತ್ರಿಸಿದ್ದಾರೆ. ದುಷ್ಕರ್ಮಿಯು ಅವರನ್ನು ಹಿಂಬಾಲಿಸುವ ಮತ್ತು ಕೊಚ್ಚುವ ದೃಶ್ಯಗಳು ಎದೆನಡುಗಿಸುವಂತಿವೆ.

 ತಂದೆಯನ್ನು ಹತ್ಯೆ ಮಾಡಿಸಿದ ಕಿರಾತಕ ಮಗ ಒಂದು ವರ್ಷದ ಬಳಿಕ ಸೆರೆ ತಂದೆಯನ್ನು ಹತ್ಯೆ ಮಾಡಿಸಿದ ಕಿರಾತಕ ಮಗ ಒಂದು ವರ್ಷದ ಬಳಿಕ ಸೆರೆ

ರಸ್ತೆಯಲ್ಲಿ ಬಿದ್ದಿದ್ದ ವಾಮನ್ ರಾವ್ ಅವರನ್ನು ಕೊಲೆಗಡುಕ ಪದೇ ಪದೇ ಇರಿಯುತ್ತಿರುವುದನ್ನು ಒಂದು ವಿಡಿಯೋ ತೋರಿಸಿದೆ. ಅಲ್ಲಿ ಬಂದ ಬಸ್ ನಿಧಾನವಾಗಿ ಚಲಿಸುತ್ತಾ ಹಾರ್ನ್ ಮಾಡುತ್ತದೆ. ವಾಮನ್ ರಾವ್ ಅವರ ದೇಹ ಚಲಿಸುವುದನ್ನು ನಿಂತ ಬಳಿಕ ಕೊಲೆಗಾರ ಕಾರ್‌ನಲ್ಲಿ ಕುಳಿತು ಅಲ್ಲಿಂದ ಸಾಗುತ್ತಾನೆ. ಬಸ್ ಅಲ್ಲಿಂದ ಹೊರಡುತ್ತದೆ. ಘಟನೆ ನೋಡುತ್ತಿದ್ದವರು ಕೂಡ ತಮ್ಮ ಪಾಡಿಗೆ ಹೊರಡುತ್ತಾರೆ.

ಕೊಲೆಗಡುಕನ ಹೆಸರು ಹೇಳಿದ ವಾಮನ್ ರಾವ್

ಕೊಲೆಗಡುಕನ ಹೆಸರು ಹೇಳಿದ ವಾಮನ್ ರಾವ್

ವಕೀಲೆ ನಾಗಮಣಿ ಅವರು ಕಾರ್‌ನ ಸೀಟಿನ ನಡುವೆ ಕುಳಿತಂತೆಯೇ ರಕ್ತದ ಮಡುವಿನಲ್ಲಿ ಸಿಲುಕಿಕೊಂಡಿರುವುದನ್ನು ಇನ್ನೊಂದು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ರಸ್ತೆಯ ಮೇಲೆ ರಕ್ತಸಿಕ್ತರಾಗಿ ಬಿದ್ದಿದ್ದ ವಾಮನ್ ರಾವ್ ಅವರು ಯಾರೋ ಕೇಳಿದ ಪ್ರಶ್ನೆಗಳಿಗೆ ಕಷ್ಟಪಟ್ಟು ಉತ್ತರಿಸಿದ್ದಾರೆ. ಕೊಲೆ ಮಾಡಿದ್ದು ಯಾರು ಎಂದು ಕೇಳಿದ ಪ್ರಶ್ನೆಗೆ ಟಿಆರ್ಎಸ್ ಸದಸ್ಯ ಕುಂಟ ಶ್ರೀನಿವಾಸ್ ಎಂದು ತಿಳಿಸಿದ್ದಾರೆ.

ಲಿವ್ ಇನ್‌ ಅಲ್ಲಿದ್ದ ಮಹಿಳೆ ಹಾಗೂ ಅಪ್ರಾಪ್ತ ಮಗಳನ್ನು ಹತ್ಯೆಗೈದು ಚರಂಡಿಗೆ ಎಸೆದ ವ್ಯಕ್ತಿಲಿವ್ ಇನ್‌ ಅಲ್ಲಿದ್ದ ಮಹಿಳೆ ಹಾಗೂ ಅಪ್ರಾಪ್ತ ಮಗಳನ್ನು ಹತ್ಯೆಗೈದು ಚರಂಡಿಗೆ ಎಸೆದ ವ್ಯಕ್ತಿ

ವೃತ್ತಪರ ಕೊಲೆಗಡುಕರು

ವೃತ್ತಪರ ಕೊಲೆಗಡುಕರು

ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ದಂಪತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಈ ಘಟನೆ ನಡೆದಿದೆ. ಸಹಚರರೊಂದಿಗೆ ಬಂದಿದ್ದ ಕುಂಟ ಶ್ರೀನಿವಾಸ್ ಈ ಕೃತ್ಯ ಎಸಗಿದ್ದಾನೆ. ಅವರು ವೃತ್ತಿಪರ ಕೊಲೆಗಡುಕರಂತೆ ಕಾಣಿಸುತ್ತದೆ. ಕುಂಟ ಶ್ರೀನಿವಾಸ್‌ಗೆ ಹುಡುಕಾಟ ನಡೆಸುತ್ತಿದ್ದು, ಆತನ 10 ಸಹಚರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರು ತಂಡಗಳ ರಚನೆ

ಆರು ತಂಡಗಳ ರಚನೆ

ವಾಮನ್ ರಾವ್ ಅವರ ತಂದೆ ಕಿಶನ್ ರಾವ್ ಅವರು ಕುಂಟ ಶ್ರೀನಿವಾಸ್, ಕುಮಾರ್ ಮತ್ತು ವಸಂತ ರಾವ್ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣದ ತನಿಖೆಗೆ ಆರು ತಂಡಗಳನ್ನು ರಚಿಸಲಾಗಿದೆ. ಮೂವರು ಡಿಸಿಪಿಗಳು, ಮೂವರು ಎಸಿಪಿ, ಟಾಸ್ಕ್ ಫೋರ್ಸ್ ಮತ್ತು ಸೈಬರ್ ಕ್ರೈಮ್ ವಿಭಾಗಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಕ್ಕನ ಜತೆ ಜಗಳ ಮಾಡುತ್ತಿದ್ದ ಮಾವನ ಹತ್ಯೆ ಮಾಡಿದ ಬಾಮೈದ !ಅಕ್ಕನ ಜತೆ ಜಗಳ ಮಾಡುತ್ತಿದ್ದ ಮಾವನ ಹತ್ಯೆ ಮಾಡಿದ ಬಾಮೈದ !

Recommended Video

ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಿಂದ ಬಂದ ನಾಲ್ವರಲ್ಲಿ ರೂಪಾಂತರಿ ವೈರಸ್ ಪತ್ತೆ | Oneindia Kannada
ಜೀವ ಬೆದರಿಕೆ ಎಂದಿದ್ದರು

ಜೀವ ಬೆದರಿಕೆ ಎಂದಿದ್ದರು

ಈ ದಂಪತಿ ಸಾರ್ವಜನಿಕರ ಒಳಿತಿಗಾಗಿ ಪಿಐಎಲ್‌ಗಳನ್ನು ಸಲ್ಲಿಸುವುದರಿಂದಲೇ ಪ್ರಸಿದ್ಧರಾಗಿದ್ದರು. ತಮಗೆ ಜೀವ ಬೆದರಿಕೆ ಇದೆ ಎಂದು ಅವರು ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ದೂರು ಸಹ ನೀಡಿದ್ದರು. ಆದರೆ ಪೊಲೀಸರು ಸೂಕ್ತ ರಕ್ಷಣೆ ಒದಗಿಸಿರಲಿಲ್ಲ. ಜನಪರ ಕೆಲಸಗಳನ್ನು ಮಾಡುತ್ತಿದ್ದ ಅವರು, ಅನೇಕ ವ್ಯಕ್ತಿಗಳ ವಿರೋಧ ಕಟ್ಟಿಕೊಂಡಿದ್ದರು ಎನ್ನಲಾಗಿದೆ.

English summary
Well-known advocate couple of Telangana High Court were brutally murdered on Wednesday afternoon in a busy road. The videos of the murder goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X