ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ಎನ್‌ಕೌಂಟರ್; ಮತ್ತೊಮ್ಮೆ ಮರಣೋತ್ತರ ಪರೀಕ್ಷೆಗೆ ಆದೇಶ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 21: ಹೈದರಾಬಾದ್ ದಿಶಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ ನಾಲ್ವರು ಆರೋಪಿಗಳ ಮೃತದೇಹಗಳನ್ನು ಮತ್ತೊಮ್ಮೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೈದರಾಬಾದ್ ಪೊಲೀಸರಿಗೆ ತೆಲಂಗಾಣ ಹೈಕೋರ್ಟ್‌ ಶನಿವಾರ ಆದೇಶ ಮಾಡಿದೆ.

ಮರಣೋತ್ತರ ಪರೀಕ್ಷೆಯನ್ನು ಡಿ 23 ರ ಸೋಮವಾರ ಸಂಜೆ 5 ಗಂಟೆಯ ಒಳಗೆ ಮುಗಿಸಿ, ವರದಿ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಇದಕ್ಕೆ ದೆಹಲಿ ಏಮ್ಸ್‌ ಆಸ್ಪತ್ರೆಯ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಸಹಾಯ ಪಡೆಯಲು ನಿರ್ದೇಶಿಸಿದೆ. ಇದೊಂದು ನಕಲಿ ಎನ್‌ಕೌಂಟರ್ ಎಂದು ಮಾನವ ಹಕ್ಕು ಸಂಘಟನೆಗಳು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದವು.

50 ಲಕ್ಷ ರೂ ಪರಿಹಾರ ಕೊಡಿ: ತೆಲಂಗಾಣ ಅತ್ಯಾಚಾರ ಆರೋಪಿಗಳ ಸಂಬಂಧಿಕರಿಂದ ಒತ್ತಾಯ50 ಲಕ್ಷ ರೂ ಪರಿಹಾರ ಕೊಡಿ: ತೆಲಂಗಾಣ ಅತ್ಯಾಚಾರ ಆರೋಪಿಗಳ ಸಂಬಂಧಿಕರಿಂದ ಒತ್ತಾಯ

Telangana HC Order; Re Post Mortem Of Rape Accused

ನವೆಂಬರ್ 26 ರಂದು ಸೈಬರಾಬಾದ್ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಪಶುವೈದ್ಯೆಯೊಬ್ಬಳನ್ನು ಮಹಮ್ಮದ್, ನವೀನ, ಶಿವಾ ಹಾಗೂ ಕೇಶವ ಎನ್ನುವರು ಸಾಮೂಹಿಕ ಅತ್ಯಾಚಾರ ಎಸಗಿ, ಭೀಕರವಾಗಿ ಕೊಂದು ಹಾಕಿದ್ದರು. ಒಂದೇ ದಿನದಲ್ಲಿ ನಾಲ್ವರೂ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಡಿ.6 ರಂದು ಸ್ಥಳ ಮಹಜರು ಮಾಡಲು ಹೋದಾಗ ಪೊಲೀಸರಿಂದ ಎನ್‌ಕೌಂಟರ್‌ಗೆ ಒಳಗಾಗಿ ಮೃತಪಟ್ಟಿದ್ದರು. ಡಿಸೆಂಬರ್ 6 ರಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ಪೊಲೀಸರು ಕೋರ್ಟ್ ಆದೇಶದ ಮೆರೆಗೆ ಶವಗಳನ್ನು ಹೈದರಾಬಾದ್‌ನ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಸಂರಕ್ಷಿಸಿ ಇಟ್ಟಿದ್ದಾರೆ.

English summary
Telangana High Court Orders on Saturday, Re Post Mortem Of Disha Rape Accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X