ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಬ್ಲ್ಯಾಕ್ ಫಂಗಸ್ ಕುರಿತು ಹೊಸ ಅಧಿಸೂಚನೆ

|
Google Oneindia Kannada News

ಹೈದ್ರಾಬಾದ್, ಮೇ 20: ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ಜನರಲ್ಲಿ ಕಾಣಿಸಿಕೊಳ್ಳುವ ಬ್ಲ್ಯಾಕ್ ಫಂಗಸ್ ಅಥವಾ ಕಪ್ಪು ಶಿಲೀಂದ್ರ ರೋಗವನ್ನು ಸಾಂಕ್ರಾಮಿಕ ಪಿಡುಗು ಕಾಯ್ದೆ 1897ರ ವ್ಯಾಪ್ತಿಗೆ ಸೇರಿದೆ ತೆಲಂಗಾಣ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ದೇಶದ ಎಲ್ಲ ಸರ್ಕಾರಗಳು ಬ್ಲ್ಯಾಕ್ ಫಂಗಸ್ ರೋಗಿಗಳ ಪರೀಕ್ಷೆ, ತಪಾಸಣೆ ಮತ್ತು ರೋಗ ನಿರ್ಣಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು ಸಲಹೆ ನೀಡಿದೆ.

ಬ್ಲ್ಯಾಕ್ ಫಂಗಸ್ ಭೀತಿ: ಕರ್ನಾಟಕದಲ್ಲಿ 97 ಮಂದಿಗೆ ಅಂಟಿದ ಮಹಾಮಾರಿ!ಬ್ಲ್ಯಾಕ್ ಫಂಗಸ್ ಭೀತಿ: ಕರ್ನಾಟಕದಲ್ಲಿ 97 ಮಂದಿಗೆ ಅಂಟಿದ ಮಹಾಮಾರಿ!

ಬ್ಲ್ಯಾಕ್ ಫಂಗಸ್ ರೋಗದ ಲಕ್ಷಣಗಳನ್ನು ಹೊಂದಿರುವವರ ಪರೀಕ್ಷೆಗೆ ಹಾಗೂ ಚಿಕಿತ್ಸೆಗೆ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರಗಳಿಗೆ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದರ ಜೊತೆ ಬ್ಲ್ಯಾಕ್ ಫಂಗಸ್ ರೋಗಿಗಳ ಅಂಕಿ-ಸಂಖ್ಯೆಗಳ ಬಗ್ಗೆ ಮಾಹಿತಿ ನೀಡುವಂತೆ ಎಲ್ಲ ಆರೋಗ್ಯ ಇಲಾಖೆಗಳಿಗೆ ಸೂಚಿಸಲಾಗಿದೆ.

Telangana Govt Declares Black Fungus As Notifiable Disease Under Epidemic Act 1897

ಪ್ರತಿನಿತ್ಯ ಸೋಂಕಿತರ ವರದಿ ಬಗ್ಗೆ ಮಾಹಿತಿ:

ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ವರಿಷ್ಠಾಧಿಕಾರಿಗಳು ಪ್ರತಿನಿತ್ಯ ಬ್ಲ್ಯಾಕ್ ಫಂಗಸ್ ಲಕ್ಷಣಗಳನ್ನು ಹೊಂದಿರುವವರ ಪರೀಕ್ಷೆ ಮತ್ತು ವರದಿಗಳ ಬಗ್ಗೆ ಪ್ರತಿನಿತ್ಯ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ತೆಲಂಗಾಣದಲ್ಲಿ ಸದ್ಯಕ್ಕೆ 80 ಮಂದಿಗೆ ಬ್ಲ್ಯಾಕ್ ಫಂಗಸ್ ರೋಗ ಅಂಟಿಕೊಂಡಿದ್ದು, ಎಲ್ಲ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದರ ಜೊತೆಗೆ ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗಾಗಿ ಗಾಂಧಿ ಜನರಲ್ ಆಸ್ಪತ್ರೆ ಮತ್ತು ಸರ್ಕಾರದ ಇಎನ್ ಟಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಸಿದ್ಧಪಡಿಸಲಾಗುತ್ತಿದೆ.

ಬ್ಲ್ಯಾಕ್ ಫಂಗಸ್ ರೋಗದ ಲಕ್ಷಣಗಳೇನು?

* ಕಣ್ಣು ಮತ್ತು ಮೂಗಿನ ಸುತ್ತ ಕೆಂಪಾಗುವಿಕೆ ಮತ್ತು ನೋವು

* ಜ್ವರ

* ತಲೆನೋವು

* ಕೆಮ್ಮು

* ಉಸಿರಾಟದ ಸಮಸ್ಯೆ

* ರಕ್ತಸಿಕ್ತ ವಾಂತಿ

* ಮಾನಸಿಕ ಸ್ಥಿತಿ ಬದಲು

English summary
Telangana Govt Declares Black Fungus As Notifiable Disease Under Epidemic Act 1897.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X