ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ

|
Google Oneindia Kannada News

ಹೈದರಾಬಾದ್, ಮೇ 12: ಕಳೆದ ತಿಂಗಳು ನಿಜಾಮಾಬಾದ್‌ನಲ್ಲಿ ವಿದ್ಯುತ್ ಚಾಲಿತ ಸ್ಕೂಟರ್‌ನ ಚಾರ್ಜಿಂಗ್ ಬ್ಯಾಟರಿ ಪ್ಯಾಕ್‌ನಲ್ಲಿ ಸ್ಫೋಟ ಸಂಭವಿಸಿ 80 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು.
ಈ ಘಟನೆಯ ನಂತರ Pure EV ಎನ್ನುವ ಹಲವಾರು ಸ್ಕೂಟರ್‌ಗಳನ್ನು ಹಿಂಪಡೆಯಲಾಗಿತ್ತು.

ಆ ಘಟನೆಯ ಘಟಿಸಿದ ಮೂರೇ ದಿನಗಳ ನಂತರ ವಿಜಯವಾಡದಲ್ಲಿ ಮತ್ತೊಂದು ಘಟನೆ ಸಂಭವಿಸಿ ಸ್ಕೂಟರ್‍‌ನ ಬ್ಯಾಟರಿ ಪ್ಯಾಕ್ ಸ್ಫೋಟಗೊಂಡು 40 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು.

ಹೀಗೆ ಸಾಲು-ಸಾಲು ಸ್ಕೂಟರುಗಳು ಸ್ಫೋಟಗೊಳ್ಳುತ್ತಿರುವ ಘಟನೆಗಳು ದೇಶದಲ್ಲಿ ಬೆಳಕಿಗೆ ಬರುತ್ತಿದ್ದು, ಮತ್ತೊಂದು ಸ್ಕೂಟರ್ ಸ್ಪೋಟಗೊಂಡಿರುವ ಘಟನೆ ತೆಲಂಗಾಣ ರಾಜ್ಯದ ಕರೀಂನಗರದ ರಾಮಚಂದ್ರಾಪುರ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ಚಾಲಿತ ಸ್ಕೂಟರ್ ಬಳಕೆ ಮಾಡುತ್ತಿದ್ದ ವ್ಯಕ್ತಿಯು ತನ್ನ ಮನೆಯ ಹೊರಗೆ ಚಾರ್ಜ್ ಮಾಡಲು ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮನೆಯ ಹೊರಗಡೆ ಸ್ಕೂಟರ್ ನಿಲ್ಲಿಸಿದ್ದನು. ಆದರೆ ತಡರಾತ್ರಿ ಚಾರ್ಜಿಂಗ್‌ನಲ್ಲಿ ಮೂಡ್‌ನಲ್ಲಿದ್ದ ಸ್ಕೂಟರ್‌ನ ಬ್ಯಾಟರಿ ಇದ್ದಕ್ಕಿದ್ದಂತೆ ಸ್ಫೋಟಗೊಂಡು ಸ್ಕೂಟರ್ ಹೊತ್ತಿ ಉರಿದು ಸ್ಪೋಟಗೋಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ವಾಹನ ಮಾಲೀಕರಿಂದ ಪೊಲೀಸರಿಗೆ ಯಾವುದೇ ದೂರು ದಾಖಲಾಗಿಲ್ಲ, ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಆದರೆ ಸ್ಕೂಟರ್ ಹಾನಿಯಾಗಿದೆ.

Telangana: EV battery explodes in Karimnagar, no one injured

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಸ್ಪೋಟಗೊಳ್ಳುತ್ತಿರುವ ಅನೇಕ ಘಟನೆಗಳು ದೇಶಾದ್ಯಂತ ವರದಿಯಾಗಿದ್ದು, ಇವಿ ಈ ಸ್ಕೂಟರ್‌ಗಳ ಬಗ್ಗೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಾಳಜಿಯಿಂದಾಗಿ ಕೇಂದ್ರ ಸರ್ಕಾರವು ವಾಹನ ತಯಾರಕರಿಗೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿತ್ತು. ಇದಲ್ಲದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎಲೆಕ್ಟ್ರಿಕ್ ಸ್ಕೂಟರ್ ತಯಾರಕರಿಗೆ ಎಚ್ಚರಿಕೆ ನೀಡಿದ್ದು, "ನಾವು ತಜ್ಞರ ಸಮಿತಿಯನ್ನು ರಚಿಸಿದ್ದೇವೆ" ಈ ಸಮಸ್ಯೆಯನ್ನು ತನಿಖೆ ಮಾಡುತ್ತದೆ ಮತ್ತು ಅದರಲ್ಲಿ ಸುಧಾರಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಮಗೆ ತಿಳಿಸಲಾಗುತ್ತದೆ".

Telangana: EV battery explodes in Karimnagar, no one injured

ಒಂದು ವೇಳೆ ತನಿಖೆಯಲ್ಲಿ ಯಾವುದೇ ಕಂಪನಿಯು ತಪ್ಪಿತಸ್ಥರೆಂದು ಕಂಡುಬಂದರೆ, ಅದು ಭಾರೀ ದಂಡವನ್ನು ಎದುರಿಸಬೇಕಾಗುತ್ತದೆ ಮತ್ತು ತಕ್ಷಣವೇ ಜಾರಿಗೆ ಬರುವಂತೆ ಅವರ ವಾಹನಗಳನ್ನು ಹಿಂಪಡೆಯಲು ನಿರ್ದೇಶಿಸಲಾಗುವುದು" ಎಂದು ಅವರು ಹೇಳಿದ್ದಾರೆ. ಇವಿ ಮತ್ತು ಒಕಿನಾವಾ ಕಂಪನಿಗಳು ತಮ್ಮ ವಾಹನಗಳನ್ನು ಹಿಂಪಡೆದಿವೆ. ಆದರೆ ಇದೀಗ ವಿಚಾರಣಾ ಸಮಿತಿಯ ವರದಿಯೂ ಮುನ್ನೆಲೆಗೆ ಬಂದಿದ್ದು, ಪ್ರಾಥಮಿಕ ತನಿಖೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬಳಸುವ ಬ್ಯಾಟರಿ ಸೆಲ್‌ಗಳಲ್ಲಿ ಕೆಲವು ದೋಷಗಳಿಂದ ಬೆಂಕಿ ಅವಘಡಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ.

English summary
Telangana: The battery of an electric two-wheeler exploded while it was being charged in Ramadugu mandal in Karimnagar district, no one was injured,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X