ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ: ಸೀಟು ಹಂಚಿಕೆ ರಾಜಕೀಯ, ಕಾಂಗ್ರೆಸ್ 90ರಲ್ಲಿ ಸ್ಪರ್ಧೆ

By ವಿಕಾಸ್ ನಂಜಪ್ಪ
|
Google Oneindia Kannada News

ಹೈದರಾಬಾದ್, ಅಕ್ಟೋಬರ್ 28: ತೆಲಂಗಾಣದಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಕೊನೆಗೂ ಮುಕ್ತಾಯ ಕಂಡಿದೆ. ಕಾಂಗ್ರೆಸ್ 90 ಕ್ಷೇತಗಳಲ್ಲಿ ಸ್ಪರ್ಧೆಗಿಳಿಯಲಿದೆ.

ಮೈತ್ರಿಕೂಟದ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದರ ಜತೆಗೆ, ಅಧಿಕಾರಕ್ಕೆ ಬಂದರೆ ಕ್ಯಾಬಿನೆಟ್, ಎಂಎಲ್ಸಿ ಸ್ಥಾನಗಳ ಹಂಚಿಕೆ ಬಗ್ಗೆ ಕೂಡಾ ವಿಸ್ತಾರವಾಗಿ ಚರ್ಚಿಸಲಾಗಿದೆ.

ತೆಲಂಗಾಣದಲ್ಲಿ ಕಮಲ 'ಕೈ' ಹಿಡಿದ ಹಿರಿಯ ಕಾಂಗ್ರೆಸ್ಸಿಗನ ಪತ್ನಿತೆಲಂಗಾಣದಲ್ಲಿ ಕಮಲ 'ಕೈ' ಹಿಡಿದ ಹಿರಿಯ ಕಾಂಗ್ರೆಸ್ಸಿಗನ ಪತ್ನಿ

119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷವು 90 ಕ್ಷೇತ್ರ ಹಾಗೂ ತೆಲುಗು ದೇಶಂ ಪಾರ್ಟಿ 16, ಟಿಜೆಎಸ್ 10 ಹಾಗೂ ಸಿಪಿಐ 3 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

Telangana elections: Seat sharing deal done, Cong to contest 90

ಮೈತ್ರಿಕೂಟಕ್ಕೆ ಗೆಲುವು ಲಭಿಸಿ, ಅಧಿಕಾರಕ್ಕೆ ಬಂದರೆ ಟಿಡಿಪಿ, ಟಿಜೆಎಸ್, ಸಿಪಿಐನ ಸದಸ್ಯರಿಗೆ ಕ್ಯಾಬಿನೆಟ್ ದರ್ಜೆ ಹಾಗೂ ಎಂಎಲ್ಸಿ ಸ್ಥಾನಗಳನ್ನು ನೀಡಲು ಕಾಂಗ್ರೆಸ್ ಮುಂದಾಗಿದೆ.

ಸಮೀಕ್ಷೆಗಳ ಸಮೀಕ್ಷೆ: ಕಾಂಗ್ರೆಸ್ ಪಾಲಾಗಲಿವೆ ಬಿಜೆಪಿ ಆಡಳಿತದ ಎರಡು ರಾಜ್ಯಗಳುಸಮೀಕ್ಷೆಗಳ ಸಮೀಕ್ಷೆ: ಕಾಂಗ್ರೆಸ್ ಪಾಲಾಗಲಿವೆ ಬಿಜೆಪಿ ಆಡಳಿತದ ಎರಡು ರಾಜ್ಯಗಳು

ಟಿಪಿಸಿಸಿ ಮುಖ್ಯಸ್ಥ ಉತ್ತಮ್ ಕುಮಾರ್ ರೆಡ್ಡಿ ಅವರು ದಿಢೀರ್ ಆಗಿ ದೆಹಲಿಗೆ ತೆರಳಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ. ನವೆಂಬರ್ 01ಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಲು ಕಾಂಗ್ರೆಸ್ ಮುಂದಾಗಿದೆ.

ವಿಧಾನಸಭೆ ಚುನಾವಣೆ: 3 ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆವಿಧಾನಸಭೆ ಚುನಾವಣೆ: 3 ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ತೆಲಂಗಾಣದಲ್ಲಿ ಡಿಸೆಂಬರ್ 07ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 11ರಂದು ಫಲಿತಾಂಶ ಹೊರಬರಲಿದೆ.

English summary
The grand alliance in Telangana appears to have sorted out the seat sharing issue.Out of the 119 seats, it has been decided that the Congress would contest 90 and the Telugu Desam Party will fight in 16 seats, which includes 3 in the Old City of Hyderabad. The TJS has been offered 10 seats and the CPI, 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X