ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬದಲಾಗುವುದೇ ತೆಲಂಗಾಣ ರಾಜ್ಯ ರಾಜಕೀಯ ಇತಿಹಾಸ?

|
Google Oneindia Kannada News

Recommended Video

Telangana Election 2018: ಮತ್ತೆ ಬದಲಾಗುವುದೇ ತೆಲಂಗಾಣ ರಾಜ್ಯ ರಾಜಕೀಯ ಇತಿಹಾಸ? | Oneindia Kannada

ಹೈದರಾಬಾದ್, ಡಿಸೆಂಬರ್ 7: ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ಬಳಿಕ ತೆಲಂಗಾಣ ತನ್ನ ಎರಡನೆಯ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿದೆ.

ತೆಲಂಗಾಣ ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ಸಂಸ್ಥಾನದ ಭಾಗವಾಗಿತ್ತು. ಹೈದರಾಬಾದ್ ಸಂಸ್ಥಾನವು 1948ರಲ್ಲಿ ಭಾರತದ ಒಕ್ಕೂಟದೊಂದಿಗೆ ವಿಲೀನಗೊಂಡಿತು, ಆದರೆ, 1956ರವರೆಗೂ ತೆಲಂಗಾಣ ಸ್ವತಂತ್ರ ರಾಜ್ಯವಾಗಿಯೇ ಉಳಿದಿತ್ತು. ಬಳಿಕ ಆಂಧ್ರ ರಾಜ್ಯದೊಂದಿಗೆ ವಿಲೀನಗೊಂಡಿತು.

 ಮತ್ತೊಮ್ಮೆ ಕೆಸಿಆರ್ ಕೈ ಹಿಡಿಯುವರೇ ತೆಲಂಗಾಣ ಮತದಾರರು? ಮತ್ತೊಮ್ಮೆ ಕೆಸಿಆರ್ ಕೈ ಹಿಡಿಯುವರೇ ತೆಲಂಗಾಣ ಮತದಾರರು?

ಅವಿಭಜಿತ ಆಂಧ್ರಪ್ರದೇಶದ ವಾಯವ್ಯ ಭಾಗವನ್ನು ಪ್ರತ್ಯೇಕ ರಾಜ್ಯವನ್ನಾಗಿಸುವ ಹೋರಾಟ 1969ರಲ್ಲಿಯೇ ಶುರುವಾಗಿತ್ತು. ಕೊನೆಗೂ 2014ರ ಜೂನ್ 2ರಂದು ಪ್ರತ್ಯೇಕಗೊಂಡು ತೆಲಂಗಾಣ ಎಂಬ 29ನೇ ರಾಜ್ಯ ಉದಯವಾಯಿತು.

Telangana elections history state formation politicians trs chandrashekhar rao

ತೆಲಂಗಾಣ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರಲು ಕಾರಣ ಅಲ್ಲಿನ ಜಮೀನ್ದಾರಿ ವ್ಯವಸ್ಥೆ. ರೈತರು ಮತ್ತು ಕಾರ್ಮಿಕರು ಜಮೀನ್ದಾರಿ ಪದ್ಧತಿ ವಿರುದ್ಧ ಸಿಡಿದೆದ್ದರು. ಅಲ್ಲಿಂದ ನಿರಂತರ ಹೋರಾಟಗಳು ಆರಂಭವಾದವು.

2009ರ ಡಿಸೆಂಬರ್ 9ರಂದು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಬಗ್ಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿತು. ಅದರ ಬೆನ್ನಲ್ಲೇ ಪ್ರತಿಭಟನೆಗಳು, ಹಿಂಸಾಚಾರಗಳು ನಡೆದವು.

ತೆಲಂಗಾಣ ಚುನಾವಣೆ: ರಾಜಕಾರಣಿಗಳದ್ದು ಒಂದು ಚಿಂತೆ, ನಿರ್ಮಾಪಕರದ್ದು ಇನ್ನೊಂದು ತೆಲಂಗಾಣ ಚುನಾವಣೆ: ರಾಜಕಾರಣಿಗಳದ್ದು ಒಂದು ಚಿಂತೆ, ನಿರ್ಮಾಪಕರದ್ದು ಇನ್ನೊಂದು

ತೆಲಂಗಾಣ ರಾಷ್ಟ್ರೀಯ ಸಮಿತಿ ನಾಯಕ ಕೆ. ಚಂದ್ರಶೇಖರ ರಾವ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹಗಳು ನಡೆದವು.

ತೆಲಂಗಾಣ ಮೊದಲ ಮುಖ್ಯಮಂತ್ರಿ

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಚಂದ್ರಶೇಖರ ರಾವ್ ನೇತೃತ್ವದ ಟಿಆರ್ಎಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಕೆಸಿಆರ್ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

Telangana elections history state formation politicians trs chandrashekhar rao

ಇದಕ್ಕೂ ಮೊದಲು ಕಾಂಗ್ರೆಸ್‌ನ ಡಾ. ಚೆನ್ನಾರೆಡ್ಡಿ ತೆಲಂಗಾಣ ರಾಜ್ಯಕ್ಕೆ ಹೋರಾಟ ನಡೆಸಿದ್ದರು. ಪಿವಿ ನರಸಿಂಹರಾವ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಅವರು ಆಂಧ್ರ ಮುಖ್ಯಮಂತ್ರಿಯಾದ ಬಳಿಕ ಹೋರಾಟ ನಿಂತುಹೋಗಿತ್ತು.

'ಮೂಲ ಮರೆಯಬೇಡಿ, ಟಿಡಿಪಿ ಇಲ್ಲದಿದ್ದರೆ, ಕೆಸಿಆರ್ ಎಲ್ಲಿರುತ್ತಿದ್ದರು?' ನಾಯ್ಡು ಪ್ರಶ್ನೆ!'ಮೂಲ ಮರೆಯಬೇಡಿ, ಟಿಡಿಪಿ ಇಲ್ಲದಿದ್ದರೆ, ಕೆಸಿಆರ್ ಎಲ್ಲಿರುತ್ತಿದ್ದರು?' ನಾಯ್ಡು ಪ್ರಶ್ನೆ!

ಪ್ರಮುಖ ರಾಜಕಾರಣಿಗಳು

ಕೆ. ಚಂದ್ರಶೇಖರ್ ರಾವ್, ವಿನೋದ್ ಕುಮಾರ್ ಬೋಯಿನಪಳ್ಳಿ, ಕೊಂಡ ಸುರೇಖ, ಕುಂಡೂರು ಜನ ರೆಡ್ಡಿ, ಕಡಿಯಾಮ್ ಶ್ರೀಹರಿ, ಅಜ್ಮೀರಾ ಸೀತಾರಾಮ್ ನಾಯಕ್, ತಣ್ಣೀರು ಹರೀಶ್ ರಾವ್, ನಲಮಡಾ ಉತ್ತಮ್ ಕುಮಾರ್ ರೆಡ್ಡಿ, ಕಲ್ವಕುಂಟ ಕವಿತಾ, ಅನುಮುಲಾ ರೇವಂತ್ ರೆಡ್ಡಿ, ಅಕ್ಬರುದ್ದೀನ್ ಓವೈಸಿ ಇಲ್ಲಿನ ಜನಪ್ರಿಯ ರಾಜಕೀಯ ಮುಖಂಡರಾಗಿದ್ದಾರೆ.

ಕೆಸಿಆರ್ ಯೋಜನೆಗಳು

ಸುವರ್ಣ ತೆಲಂಗಾಣ ರಾಜ್ಯದ ಗುರಿ ಘೋಷಿಸಿದ್ದ ಕೆಸಿಆರ್ ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನು ತಂದಿದ್ದರು. ಆರೋಗ್ಯ ಲಕ್ಷ್ಮಿ ಯೋಜನೆ, ಆಸರ ಪೆನ್ಷನ್, ಅಮ್ಮಾ ಓದಿ ಮತ್ತು ಕೆಸಿಆರ್ ಕಿಟ್, ಕಲ್ಯಾಣ ಲಕ್ಷ್ಮಿ, ಮಿಷನ್ ಭಗೀರಥ, ರೈತ ಬಂಧು ಯೋಜನೆ, ಕಾಳೇಶ್ವರಂ ಯೋಜನೆ ಮುಂತಾದವು ಟಿಆರ್ ಎಸ್ ಸರ್ಕಾರ ಜಾರಿಗೆ ತಂದ ಜನಪ್ರಿಯ ಕಾರ್ಯಕ್ರಮಗಳಾಗಿವೆ.

ವಿಶ್ಲೇಷಣೆ : ರಾಹುಲ್ ಮತ್ತು ನಾಯ್ಡು ಮೈತ್ರಿಕೂಟ ಬಾರಿಸುವುದೇ ಜಯಭೇರಿ?ವಿಶ್ಲೇಷಣೆ : ರಾಹುಲ್ ಮತ್ತು ನಾಯ್ಡು ಮೈತ್ರಿಕೂಟ ಬಾರಿಸುವುದೇ ಜಯಭೇರಿ?

ಜನಪ್ರಿಯ ಅಭ್ಯರ್ಥಿಗಳು

ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಅವರ ಮಗ ಕೆ.ಟಿ. ರಾಮರಾವ್, ಸೋದರಳಿಯ ಟಿ. ಹರೀಶ್ ರಾವ್, ಎಐಎಂಐಎಂ ಮುಖಂಡ ಅಕ್ಬರುದ್ದೀನ್ ಓವೈಸಿ, ಕಾಂಗ್ರೆಸ್ ರಾಜ್ಯ ಕಾರ್ಯಾಧ್ಯಕ್ಷ ಎ. ರೇವಂತ್ ರೆಡ್ಡಿ, ಟಿಡಿಪಿ ಸಂಸ್ಥಾಪಕ ಎನ್.ಟಿ. ರಾಮ ರಾವ್ ಅವರ ಮೊಮ್ಮಗಳು ಎನ್. ಸುಹಾಸಿನಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಲಕ್ಷ್ಮಣ್, ತೆಲಂಗಾಣ ಕಾಂಗ್ರೆಸ್ ಘಟಕದ ಮುಖ್ಯಸ್ಥ ಎನ್. ಉತ್ತಮ್ ಕುಮಾರ್ ರೆಡ್ಡಿ ಕಣದಲ್ಲಿರುವ ಜನಪ್ರಿಯ ಅಭ್ಯರ್ಥಿಗಳು.

ಯುವ ಐಕಾನ್‌ಗಳಿವರು

ಟಿಆರ್‌ಎಸ್‌ನ ಕಲ್ವಕುಂಟ್ಲ ಕವಿತಾ, ಬಾಲ್ಕಾ ಸುಮನ್, ಬಿಜೆಪಿಯ ಗಂಗಾಪುರಂ ಕಿಶನ್ ರೆಡ್ಡಿ, ರೇಷ್ಮಾ ಭಾಯ್ ಬುಕ್ಯ, ಲಕಾವತ್ ನಾಗೇಶ್ವರ ರಾವ್ ಈ ಬಾರಿಯ ವಿಧಾನಸಭೆ ಚುನಾವಣೆಯ ಯುವ ಐಕಾನ್ ರಾಜಕಾರಣಿಗಳಾಗಿದ್ದಾರೆ.

ಈ ಬಾರಿ ಇದೆ ಪೈಪೋಟಿ

ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಟಿಆರ್ ಎಸ್ ಪ್ರಾಬಲ್ಯವಿದೆ. ಮೊದಲ ಚುನಾವಣೆಯಲ್ಲಿ ಪ್ರತ್ಯೇಕ ರಾಜ್ಯ ಹೋರಾಟದ ಮುಂಚೂಣಿಯಲ್ಲಿದ್ದ ಟಿಆರ್ ಎಸ್ ಪರ ಜನರ ಒಲವು ಸಹಜವಾಗಿಯೇ ಇತ್ತು.

ಅವಧಿಗೆ ಮುನ್ನವೇ ಕೆಸಿಆರ್ ಅವರು ಚುನಾವಣೆಗೆ ಬಂದಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಿರೋಧ ಪಕ್ಷಗಳು ಈ ಬಾರಿ ಹೆಚ್ಚು ಪೈಪೋಟಿ ನೀಡುವ ಸಾಧ್ಯತೆ ಇವೆ. 119 ಸೀಟುಗಳ ಪೈಕಿ ಕಾಂಗ್ರೆಸ್-ಟಿಡಿಪಿ ಮುಖ್ಯವಾಗಿ ಸ್ಥಾನಗಳನ್ನು ಹಂಚಿಕೊಂಡಿವೆ. ಬಿಜೆಪಿ ಇಲ್ಲಿ ಪ್ರಾಬಲ್ಯ ಇಲ್ಲದಿದ್ದರೂ, ಹಿಂದಿನ ಐದು ಸೀಟುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

English summary
Telangana is facing its 2nd assembly election after the formation of the state in 2014. Here is the some details of the Telangana seperate state movement, reasons, its politican situations etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X