ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪ್ರಣಾಳಿಕೆ ಸೋರಿಕೆ : ಮದ್ಯಕ್ಕೆ ನಿರ್ಬಂಧ, 20 ರು ಪೆಟ್ರೋಲ್!

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಬಿಜೆಪಿ ಪ್ರಣಾಳಿಕೆ ಸೋರಿಕೆ : ಮದ್ಯಕ್ಕೆ ನಿರ್ಬಂಧ, 20 ರು ಪೆಟ್ರೋಲ್! | Oneindia kannada

ಹೈದರಾಬಾದ್, ಅಕ್ಟೋಬರ್ 15: ತೆಲಂಗಾಣದಲ್ಲಿ ಮತದಾರರಿಗೆ ಭರಪೂರ ಆಶ್ವಾಸನೆಯುಳ್ಳ ಪ್ರಣಾಳಿಕೆಯನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ) ಸಿದ್ಧಪಡಿಸುತ್ತಿದೆ. ಈ ನಡುವೆ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು ಸೋರಿಕೆಯಾಗಿವೆ. ತೆಲಂಗಾಣದಲ್ಲಿ ಮದ್ಯ ಮಾರಾಟ ನಿಯಂತ್ರಣ ಪಡಿಸುವುದೇ ಮುಖ್ಯ ಅಂಶವಾಗಲಿದೆ.

ತೆಲಂಗಾಣದಲ್ಲಿ ಅನಿಯಂತ್ರಿತ ಮದ್ಯ ಮಾರಾಟದಿಂದಾಗಿ ಹಲವಾರು ಸಾಮಾಜಿಕ ಸಮಸ್ಯೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದ್ದು, ಇದರ ಮೇಲೆ ನಿಯಂತ್ರಣ ಸಾಧಿಸಲು ಬಿಜೆಪಿ ಕಾರ್ಯಸೂಚಿಯನ್ನು ರೂಪಿಸಿದೆ ಎಂದು ತಿಳಿದು ಬಂದಿದೆ.

ತೆಲಂಗಾಣ ವಿಧಾನಸಭೆ ಚುನಾವಣೆ : ಅಂಕಿ-ಅಂಶಗಳುತೆಲಂಗಾಣ ವಿಧಾನಸಭೆ ಚುನಾವಣೆ : ಅಂಕಿ-ಅಂಶಗಳು

ವಾರಕ್ಕೆ ಐದು ದಿನ ಮಾರಾಟ: ಮದ್ಯ ಮಾರಾಟವನ್ನು ವಾರಕ್ಕೆ ಐದು ದಿನಗಳಿಗೆ ಮಾತ್ರ ಸೀಮಿತಗೊಳಿಸುವುದು ಬಿಜೆಪಿ ಮುಂದಾಗಿದೆ.

Telangana elections 2018: Here is what the BJP’s manifesto looks like

ಸಂಜೆ ವೇಳೆ ಮದ್ಯ ಮಾರಾಟಕ್ಕೆ ನಿಷೇಧ ಹೇರುವುದು ಮುಖ್ಯ, 6 ಗಂಟೆ ನಂತರ ವೈನ್ ಹಾಗೂ ಬಾರ್ ಗಳು ಬಂದ್ ಆಗಲಿವೆ ಎಂದು ಬಿಜೆಪಿ ಪ್ರಣಾಳಿಕಾ ಸಮಿತಿ ಮುಖ್ಯಸ್ಥ ಎನ್ ವಿಎಸ್ಎಸ್ ಪ್ರಭಾಕರ್ ಹೇಳಿದ್ದಾರೆ.

ಅವಿಭಜಿತ ಆಂಧ್ರಪ್ರದೇಶದಲ್ಲಿ ಮದ್ಯ ಸೇವನೆ ದೊಡ್ಡ ಸಮಸ್ಯೆಯಾಗಿದ್ದು, ಮಹಿಳೆಯರ ವಿರುದ್ಧ ದೌರ್ಜನ್ಯ, ಅತ್ಯಾಚಾರ, ಕೊಲೆ ಸೇರಿದಂತೆ ಅನೇಕ ಕುಕೃತ್ಯಗಳಿಗೆ ಮೂಲವಾಗುತ್ತಿವೆ.

ಸಮೀಕ್ಷೆಗಳ ಸಮೀಕ್ಷೆ: ಕಾಂಗ್ರೆಸ್ ಪಾಲಾಗಲಿವೆ ಬಿಜೆಪಿ ಆಡಳಿತದ ಎರಡು ರಾಜ್ಯಗಳುಸಮೀಕ್ಷೆಗಳ ಸಮೀಕ್ಷೆ: ಕಾಂಗ್ರೆಸ್ ಪಾಲಾಗಲಿವೆ ಬಿಜೆಪಿ ಆಡಳಿತದ ಎರಡು ರಾಜ್ಯಗಳು

ಮಿಕ್ಕಂತೆ, ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ಮೇಲಿನ ಸರ್ ಚಾರ್ಜ್ ಕಡಿತಗೊಳಿಸುವುದು, ಈ ಮೂಲಕ ಯಾತ್ರಾರ್ಥಿಗಳಿಗೆ ಉಚಿತ ಪ್ರಯಾಣ ಒದಗಿಸುವುದು ಬಿಜೆಪಿ ಗುರಿಯಾಗಿದೆ.

Telangana elections 2018: Here is what the BJP’s manifesto looks like

ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ತಗ್ಗಿಸುವುದು ಕೂಡಾ ಮುಖ್ಯ ಅಂಶವಾಗಿದೆ. ಮಹಾರಾಷ್ಟ್ರದಂತೆ ತೆಲಂಗಾಣದಲ್ಲೂ ಇಂಧನದ ಮೇಲೆ ಸೆಸ್, ವ್ಯಾಟ್ ಅಧಿಕವಾಗಿ ಹೇರಲಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ, ವ್ಯಾಟ್ ತಗ್ಗಿಸಿ 20 ರುಗಳಿಗೆ ಪೆಟ್ರೋಲ್ ದೊರಕುವಂತೆ ಮಾಡುವುದಾಗಿ ಬಿಜೆಪಿ ಆಶ್ವಾಸನೆ ನೀಡಿದೆ.

ಬಿಜೆಪಿಗೆ ಬಿಗ್ ಶಾಕ್! NDA ಜೊತೆ ಖಂಡಿತ ಕೈಜೋಡಿಸೋಲ್ಲ ಎಂದ TRS!ಬಿಜೆಪಿಗೆ ಬಿಗ್ ಶಾಕ್! NDA ಜೊತೆ ಖಂಡಿತ ಕೈಜೋಡಿಸೋಲ್ಲ ಎಂದ TRS!

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಉಚಿತವಾಗಿ ಆನ್ ಲೈನ್ ಹಾಗೂ ಆಫ್ ಲೈನ್ ಕೋಚಿಂಗ್ ನೀಡುವುದು. ಪ್ರತಿ ಮನೆಗಳಿಗೆ 6ರು ಪ್ರತಿ ಲೀಟರ್ ನಂತೆ ಶುದ್ಧ ಕುಡಿಯುವ ನೀರು ಒದಗಿಸುವುದು ಇವೆ ಮುಂತಾದ ಪ್ರಮುಖ ಅಂಶಗಳು ಪ್ರಣಾಳಿಕೆಯಲ್ಲಿವೆ.

English summary
The BJP in its manifesto for the December 7 assembly elections in Telangana, has proposed to regulate the sale of liquor, claiming that its unrestricted availability and consumption was leading to several social and law and order problems in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X