• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

VIDEO: ಡ್ರೈವರ್ ಬರಲಿಲ್ಲ, ವೈದ್ಯನೇ ಟ್ರ್ಯಾಕ್ಟರ್ ಚಾಲನೆ ಮಾಡಿ ಶವ ಸಾಗಣೆ

|

ಹೈದರಾಬಾದ್, ಜುಲೈ 13: ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ವಿಚಾರದಲ್ಲಿ ಅಧಿಕಾರಿಗಳು, ಸಿಬ್ಬಂದಿ ಅವರು ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಘಟನೆಗಳು ಹಲವು ಕಡೆ ವರದಿಯಾಗಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಆದರೆ, ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲೊಂದು ಮಾನವೀಯ ಘಟನೆ ನಡೆದಿದೆ. ಕೊವಿಡ್‌ನಿಂದ ಮೃತಪಟ್ಟ ವ್ಯಕ್ತಿಯನ್ನು ಸಾಗಿಸಲು ಯಾರೂ ಮುಂದೆ ಬರದಿದ್ದಾಗ ಖುದ್ದು ವೈದ್ಯರೇ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿರುವ ಘಟನೆ ವರದಿಯಾಗಿದೆ.

ಮನ ಕಲಕುವ ದೃಶ್ಯ: ಜೆಸಿಬಿಯಲ್ಲಿ ಕೊರೊನಾ ರೋಗಿಯ ಶವ ಸಾಗಣೆ

ಕೊವಿಡ್ ಬಿಕ್ಕಟ್ಟಿನ ಕಾರಣ ಪೆದ್ದಪಲ್ಲಿ ಜಿಲ್ಲೆಯ ಆರೋಗ್ಯ ಉಸ್ತುವಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ ಶ್ರೀರಾಮ್ ಅವರು, ಶವ ಸಾಗಿಸಲು ಟ್ರ್ಯಾಕ್ಟರ್ ಚಾಲಕ ನಿರಾಕರಿಸಿದ ಕಾರಣ, ತಾವೇ ಟ್ರ್ಯಾಕ್ಟರ್ ಡ್ರೈವ್ ಮಾಡಿರುವ ಘಟನೆ ವರದಿಯಾಗಿದೆ.

ಈ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡಿದ್ದು, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾನವೀಯತೆ ಸತ್ತಿದೆ ಎನ್ನುವಂತಾಗಿರುವ ಈ ಸಂದರ್ಭದಲ್ಲಿ ಡಾ ಶ್ರೀರಾಮ್ ಅವರು, ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ನಮ್ಮ ಧನ್ಯವಾದ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

ಮತ್ತೊಂದೆಡೆ ಕೊವಿಡ್ ರೋಗಿಯ ಶವ ಸಾಗಿಸಲು ಆಂಬುಲೆನ್ಸ್ ಸಿಕ್ಕಿಲ್ವಾ? ಇದು ರಾಜ್ಯ ಸರ್ಕಾರದ ವೈಫಲ್ಯ ಎಂದು ಟೀಕಿಸುತ್ತಿದ್ದಾರೆ.

English summary
Body of a man who had COVID19 was driven to the burial ground in a tractor by Dr Sriram, working as Peddapalli District Surveillance Officer for prevention of spread of COVID.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X