ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ; 20 ದಿನದಲ್ಲಿ 1,500 ಹಾಸಿಗೆಯ ಆಸ್ಪತ್ರೆ ಸಿದ್ಧ

|
Google Oneindia Kannada News

ಹೈದರಾಬಾದ್, ಏಪ್ರಿಲ್ 22 : ಕೋವಿಡ್ - 19 ವಿರುದ್ಧ ಹೋರಾಟ ಮಾಡುತ್ತಿರುವ ತೆಲಂಗಾಣ ಸರ್ಕಾರ 14 ಅಂತಸ್ತಿನ ಕಟ್ಟಡವನ್ನು ಆಸ್ಪತ್ರೆಯಾಗಿ ಪರಿವರ್ತಿಸಿದೆ. 1500 ಹಾಸಿಗೆಗಳು ಇಲ್ಲಿದ್ದು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಿಕೊಳ್ಳಲಾಗುತ್ತದೆ.

ಹೈದರಾಬಾದ್‌ನ ಗಚ್ಚಿ ಬೌಲಿ ಒಳಾಂಗಣ ಕ್ರೀಡಾಂಗಣದ 14 ಅಂತಸ್ತಿನ ಕಟ್ಟಡವನ್ನು 20 ದಿನಗಳಲ್ಲಿ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. 2002ರಲ್ಲಿ ನಿರ್ಮಾಣವಾಗಿ ಈ ಕಟ್ಟಡ ಈಗ ತಾತ್ಕಾಲಿಕ ಆಸ್ಪತ್ರೆಯಾಗಿ ಬದಲಾಗಿದೆ.

Fake News: ಗರ್ಭಿಣಿ ಸಾವು, ESI ಆಸ್ಪತ್ರೆ ಸಂಪೂರ್ಣ ಬಂದ್? Fake News: ಗರ್ಭಿಣಿ ಸಾವು, ESI ಆಸ್ಪತ್ರೆ ಸಂಪೂರ್ಣ ಬಂದ್?

1500 ಹಾಸಿಗೆಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ 50 ಐಸಿಯುಗಳ ವ್ಯವಸ್ಥೆ ಮಾಡಲಾಗಿದೆ. ಚೀನಾದ ವುಹಾನ್‌ನಲ್ಲಿ 10 ದಿನದಲ್ಲಿ 1000 ಹಾಸಿಗೆಯ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗಿತ್ತು. ನಾವು 20 ದಿನದಲ್ಲಿ ಪರಿವರ್ತನೆ ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ? ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ?

Telangana Converts 14 Storey Tower As Hospital In 20 Days

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಈ ಆಸ್ಪತ್ರೆಯನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಕಟ್ಟಡ ಸುಸ್ಥಿತಿಯಲ್ಲಿದ್ದರು. ನೀರು, ಶೌಚಾಲಯ, ಒಳಚರಂಡಿ ವ್ಯವಸ್ಥೆ ಸರಿಯಾಗಿ ಇರಲಿಲ್ಲ. ಮೂರು ವಾರಗಳಲ್ಲಿ ಎಲ್ಲವನ್ನೂ ಸಿದ್ಧಗೊಳಿಸಲಾಗಿದೆ.

ಕೊರೊನಾ ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಕ್ರಿಯೆಗೂ ಅಡ್ಡಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಕ್ರಿಯೆಗೂ ಅಡ್ಡಿ

ಆಮ್ಲಜನಕ ಪೂರೈಕೆ ಮಾಡುವ ಪೈಪ್, ನಿರಂತರ ವಿದ್ಯುತ್ ಸರಬರಾಜಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ಕಟ್ಟಡಕ್ಕೆ ನಾಲ್ಕು ಲಿಫ್ಟ್ ಇದ್ದು, ಇನ್ನೂ ಎರಡು ಲಿಫ್ಟ್‌ಗಳನ್ನು ಹೆಚ್ಚುವರಿಯಾಗಿ ಅಳವಡಿಕೆ ಮಾಡಲಾಗುತ್ತಿದೆ.

ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಿದ ಬಳಿಕ ಇದನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವ ಉದ್ದೇಶವನ್ನು ತೆಲಂಗಾಣ ಸರ್ಕಾರ ಹೊಂದಿದೆ.

ತೆಲಂಗಾಣದಲ್ಲಿ ಇದುವರೆಗೂ 928 ಕೊರೊನಾ ಪ್ರಕರಣಗಳು ದಾಖಲಾಗಿವೆ. 23 ಜನರು ಮೃತಪಟ್ಟಿದ್ದಾರೆ. ಸರ್ಕಾರ ಮೇ 7ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

English summary
Telangana government convert 14 storey tower into a 1,500 bedded COVID-19 special hospital in just 20 days. Hyderabad Gachibowli sports complex now hospital for COVID - 19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X