ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೇರಲು ಮುಂದಾದ ತೆಲಂಗಾಣ ಕಾಂಗ್ರೆಸ್ ಶಾಸಕ

|
Google Oneindia Kannada News

ಹೈದರಾಬಾದ್, ಜೂನ್ 17: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ತೆಲಂಗಾಣದಲ್ಲಿ ಕಾಂಗ್ರೆಸ್ ಪತನ ಆರಂಭವಾಗಿದೆ. ಒಂದು ಕಡೆ ಪಕ್ಷವನ್ನು ಪುನಃ ಕಟ್ಟಿ ಬೆಳೆಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದರೆ, ಮತ್ತೊಂದೆಡೆ ಬೇರೆ ಪಕ್ಷಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ.

ತೆಲಂಗಾಣ ಕಾಂಗ್ರೆಸ್ಸಿನ 12 ಶಾಸಕರು ಗುಂಪು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ ಎಸ್ ) ಜತೆ ವಿಲೀನಗೊಂಡಿದ್ದು ನೆನಪಿರಬಹುದು. ಉಳಿದಿರುವ 6 ಮಂದಿ ಶಾಸಕರ ಪೈಕಿ ಮುನುಗೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ ರೆಡ್ಡಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವ ಸುದ್ದಿ ಬಂದಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಭಾರೀ ಶಾಕ್: 12 ಶಾಸಕರು ಟಿಆರ್ ಎಸ್ ಗೆ!ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಭಾರೀ ಶಾಕ್: 12 ಶಾಸಕರು ಟಿಆರ್ ಎಸ್ ಗೆ!

ತೆಲಂಗಾಣ ವಿಧಾನಸಭೆಯಲ್ಲಿ 19 ಮಂದಿ ಪೈಕಿ ಪಕ್ಷದ ಮುಖ್ಯಸ್ಥ ಎನ್ ಉತ್ತಮ್ ಕುಮಾರ್ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. 18 ಮಂದಿ ಶಾಸಕರ ಪೈಕಿ 12 ಮಂದಿ ಆಡಳಿತ ಪಕ್ಷ ಟಿಆರ್ ಎಸ್ ಸೇರಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷ( ಸಿಎಲ್ ಪಿ) ಕೂಡಾ ಟಿಆರ್ ಎಸ್ ಜೊತೆ ವಿಲೀನಗೊಳಿಸಲಾಗಿದೆ. ಪಕ್ಷಾಂತರ ಕಾಯ್ದೆ, ಜನಪ್ರತಿನಿಧಿಗಳ ಕಾಯ್ದೆ ಪರಿಶೀಲಿಸಿ, ಈ ವಿಲೀನಕ್ಕೆ ಸ್ಪೀಕರ್ ಪೊಚರಂ ಶ್ರೀನಿವಾಸ್ ರೆಡ್ಡಿ ಅವರು ಅನುಮತಿ ನೀಡಿದ್ದರು.

Telangana: Congress MLA Rajgopal Reddy likely to join BJP

ಟಿ.ಆರ್.ಎಸ್. ವಿರುದ್ಧ ಕಾಂಗ್ರೆಸ್ ಪರಿಣಾಮಕಾರಿಯಾಗಿ ಹೋರಾಟ ನಡೆಸುವ ಶಕ್ತಿ ಹೊಂದಿಲ್ಲ ಎಂದಿರುವ ರಾಜಗೋಪಾಲ ರೆಡ್ಡಿ ಅವರು ಶೀಘ್ರವೆ ಪಕ್ಷ ತೊರೆಯುವ ಸಾಧ್ಯತೆಯಿದೆ. ರಾಜಗೋಪಾಲ ರೆಡ್ಡಿ ಬಿಜೆಪಿ ಸೇರಲು ಮುಂದಾಗಿದ್ದು, ಕಾಂಗ್ರೆಸ್ ಸದಸ್ಯರ ಸಂಖ್ಯೆ 5 ಕ್ಕೆ ಕುಸಿಯಲಿದೆ.

ರಾಜಗೋಪಲ ರೆಡ್ಡಿ ಸೇರಿದಂತೆ ತೆಲುಗು ದೇಶಂ ಪಕ್ಷದ ಮುಖಂಡರು ಕೂಡಾ ಬಿಜೆಪಿ ಸೇರಲು ಉತ್ಸುಕರಾಗಿದ್ದು, ಈ ಬಗ್ಗೆ ಶೀಘ್ರವೇ ಅಪ್ಡೇಟ್ ಸಿಗಲಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಮಾಜಿ ಗೃಹ ಸಚಿವೆ ಡಿ.ಕೆ ಅರುಣಾ ಹಾಗೂ ಎಂಎಲ್ಸಿ ಪೊಂಗುಲೇಟಿ ಸುಧಾಕರ್ ರೆಡ್ಡಿ ಅವರು ಬಿಜೆಪಿ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The crisis for Congress party in Telangana worsened with one of its remaining six MLAs, Komatreddy Rajgopal Reddy, hinting at crossing over to the Bharatiya Janata Party (BJP), which has gotten stronger in the state ever since it managed to win four of 18 Lok Sabha seats in the recently concluded general elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X