ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಸಮ್ಮುಖದಲ್ಲೇ ಮೋದಿಯನ್ನು 'ಉಗ್ರ' ಎಂದ ವಿಜಯಶಾಂತಿ

|
Google Oneindia Kannada News

ಹೈದರಾಬಾದ್, ಮಾರ್ಚ್ 10: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲೇ ತೆಲಂಗಾಣ ಕಾಂಗ್ರೆಸ್ ನಾಯಕಿ, ಹೆಸರಾಂತ ನಟಿ ವಿಜಯಶಾಂತಿ, ಪ್ರಧಾನಿ ಮೋದಿಯವರನ್ನು ಭಯೋತ್ಪಾದಕರಂತೆ ಕಾಣುತ್ತಿದ್ದಾರೆಂದು ಹೇಳಿದ್ದಾರೆ. ಷಂಶಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಿಜಯಶಾಂತಿ ಈ ಹೇಳಿಕೆಯನ್ನು ನೀಡಿದ್ದಾರೆ.

ಪ್ರಧಾನಮಂತ್ರಿ ಹುದ್ದೆಗೆ ಕನಿಷ್ಠ ಮರ್ಯಾದೆ ಕೊಡಬೇಕೆನ್ನುವ ಜ್ಞಾನವಿಲ್ಲದ ಕಾಂಗ್ರೆಸ್ ನಾಯಕಿಯೊಬ್ಬರು, ತೀರಾ ಅಸಂವಿಧಾನಿಕ ಪದವನ್ನು ಬಳಸಿ ಮೋದಿಯವರನ್ನು ಟೀಕಿಸಿರುವುದನ್ನು ಬಿಜೆಪಿ ಖಂಡಿಸಿದೆ.

Telangana Congress leader likens PM Modi to terrorist

ಮೋದಿಗೂ ದೇಶಭ್ರಷ್ಟ ನೀರವ್ ಗೂ ಹೋಲಿಸಿ ರಾಹುಲ್ ಟ್ವೀಟ್ಮೋದಿಗೂ ದೇಶಭ್ರಷ್ಟ ನೀರವ್ ಗೂ ಹೋಲಿಸಿ ರಾಹುಲ್ ಟ್ವೀಟ್

ಮೋದಿ ಅವರು ಈಗ ಯಾರ ಮೇಲೆ ಯಾವ ಬಾಂಬ್ ಹಾಕುತ್ತರೋ ಎಂಬ ಭಯ ಎಲ್ಲರಲ್ಲೂ ಆವರಿಸಿದೆ. ಅವರು ಭಯೋತ್ಪಾದಕರಂತೆ ಕಾಣಿಸುತ್ತಾರೆ. ಜನರನ್ನು ಪ್ರೀತಿಸುವ ಬದಲು, ಜನರನ್ನು ಭಯಪಡಿಸುತ್ತಿದ್ದಾರೆ. ಇದು ಪ್ರಧಾನಿಯ ಲಕ್ಷಣವಲ್ಲ ಎಂದು ವಿಜಯಶಾಂತಿ ಹೇಳಿದರು.

ಮೋದಿ ಸರಕಾರಕ್ಕೆ ಹೊಸ ಟ್ಯಾಗ್ ಲೈನ್ ನೀಡಿದ ರಾಹುಲ್ ಗಾಂಧಿಮೋದಿ ಸರಕಾರಕ್ಕೆ ಹೊಸ ಟ್ಯಾಗ್ ಲೈನ್ ನೀಡಿದ ರಾಹುಲ್ ಗಾಂಧಿ

2014ರಲ್ಲಿ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ವಿಜಯಶಾಂತಿ ಅವರು ಇದಕ್ಕೂ ಮುನ್ನ ಟಿಆರ್ ಎಸ್ ನ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರ ಬೆಂಬಲವಾಗಿ ನಿಂತಿದ್ದರು. ಮೇದಕ್ ನಿಂದ ವಿಧಾನಸಭೆಗೆ ಸ್ಪರ್ಧಿಸಿ, ಸೋಲು ಕಂಡಿದ್ದರು. 2018ರಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿಜಯ್ ಶಾಂತಿ ಅವರನ್ನು ಸ್ಟಾರ್ ಪ್ರಚಾರಕಿಯಾಗಿ ನೇಮಕ ಮಾಡಿದರು ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಚುನಾವಣಾ ಪ್ರಚಾರದ ಸಲಹಾಗಾರ್ತಿಯಾಗಿದ್ದರು.

English summary
In a derogatory remark, Congress leader Vijaya Shanti likened Prime Minister Narendra Modi to terrorists while speaking at public rally in Shamshabad, Telangana, on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X