• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೆಲಂಗಾಣ ವಿಧಾನಸಭೆ ವಿಸರ್ಜನೆ: ಕೆಸಿಆರ್ ಮಹತ್ವದ ರಾಜಕೀಯ ನಡೆ

|

ಹೈದರಾಬಾದ್, ಸೆಪ್ಟೆಂಬರ್ 6: ನಿರೀಕ್ಷೆಯಂತೇ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಧಾರ ಕೈಗೊಂಡಿದ್ದಾರೆ.

ಈ ಸಂಬಂಧ ತೆಲಂಗಾಣದ ರಾಜ್ಯಪಾಲ ಇಎಸ್ ಎಲ್ ನರಸಿಂಹ ಅವರಿಗೆ ಪತ್ರ ಬರೆದು ತಿಳಿಸಿರುವ ಕೆ ಚಂದ್ರಶೇಖರ್ ರಾವ್, ಇಂದು ಮಧ್ಯಾಹ್ನ ಮಹತ್ವದ ಸಭೆಯೊಂದನ್ನು ನಡೆಸಲಿದ್ದಾರೆ.

ತೆಲಂಗಾಣ ವಿಧಾನಸಭೆ ವಿಸರ್ಜನೆ? ಕಾರಣವೇನು? ಪರಿಣಾಮವೇನು?

ಈ ನಿರ್ಧಾರಕ್ಕೂ ಮುನ್ನ ಸಹ ಚಂದ್ರಶೇಖರ ರಾವ್ ಅವರು, ತಮ್ಮ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್)ಯ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿದ್ದರು. ತೆಲಂಗಾಣ ವಿಧಾನಸಭೆಯ ಕಾಲಾವಧಿ ಮೇ 2019 ಕ್ಕೆ ಅಂತ್ಯವಾಗುತ್ತಿತ್ತು.

ಆ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯೂ ನಡೆಯಲಿರುವುದರಿಂದ ಅದಕ್ಕೂ ಮುನ್ನವೇ ವಿಧಾನಸಭೆ ಚುನಾವಣೆ ಮುಗಿಸಿ, ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುವ ಯೋಚನೆ ಕೆಸಿಆರ್ ಅವರದು.

ಸೆ. 2ಕ್ಕೆ ಕೆಸಿಆರ್ ರಿಂದ ತೆಲಂಗಾಣ ವಿಧಾನಸಭೆ ವಿಸರ್ಜನೆ ಘೋಷಣೆ?

ಸದ್ಯಕ್ಕೆ ತೆಲಂಗಾಣದ ಜನತೆಗೆ ಸರ್ಕಾರದ ಮೇಲೆ ಉತ್ತಮ ಅಭಿಪ್ರಾಯವಿದೆ. ತಕ್ಷಣ ಚುನಾವಣೆ ನಡೆದರೆ ಟಿಆರ್ ಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಖಂಡಿತ ಎಂಬ ಆತ್ಮವಿಶ್ವಾಸ ಕೆಸಿಆರ್ ಅವರದು.

ತೆಲಂಗಾಣದಲ್ಲಿ ಮಹತ್ವದ ಸಭೆ: ವಿಧಾನಸಭೆ ವಿಸರ್ಜನೆ ಸಾಧ್ಯತೆ

ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಚುನಾವಣೆಯೊಟ್ಟಿಗೆ ತೆಲಂಗಾಣದಲ್ಲೂ ಚುನಾವಣೆ ನಡೆಯುವ ಸಾಧ್ಯತೆ ಇದೆ.

English summary
Telangana chief minister K Chandrashekhar Rao met Governor ESL Narasimhan and informed him about decision to dissolve Telangana Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X