ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೃಕ್ಷಮಾತೆ ಸಾಲುಮರದ ತಿಮ್ಮಕ್ಕರನ್ನು ಸನ್ಮಾನಿಸಿದ ತೆಲಂಗಾಣ ಸಿಎಂ

|
Google Oneindia Kannada News

ಹೈದರಾಬಾದ್‌, ಮೇ 18: ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಸಿ. ಚಂದ್ರಶೇಖರ್‌ ಪಕ್ಷದ ಮುಖಂಡರ ಸಮ್ಮುಖದಲ್ಲಿ ಸನ್ಮಾನಿಸಿದರು.

111 ವರ್ಷದ ಸಾಲುಮರದ ತಿಮ್ಮಕ್ಕ ಸಂಸದ ಜೋಗಿನಲ್ಲಿ ಸಂತೋಷ್‌ರನ್ನು ಭೇಟಿ ಮಾಡುವುದಕ್ಕೆ ಹೈದರಾಬಾದಿಗೆ ತೆರಳಿದಿದ್ದರು. ಈ ವೇಳೆ ಪ್ರಗತಿ ಭವನದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್‌ ಅವರನ್ನು ಭೇಟಿಯಾಗಿದ್ದಾರೆ. 111 ವರ್ಷಗಳ ಕರ್ನಾಟಕದ ವೃಕ್ಷಮಾತೆಯ ಸೇವೆಗೆ ಗೌರವ ಸಲ್ಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ತಿಮ್ಮಕ್ಕರನ್ನು ಸನ್ಮಾನಿಸಿ ಮಾತನಾಡಿದ ಚಂದ್ರಶೇಖರರಾವ್, "ಸಾಲುಮರದ ತಿಮ್ಮಕ್ಕ ತೆಲಂಗಾಣ ಪ್ರಜೆಗಳಿಗೆಲ್ಲಾ ಸ್ಫೂರ್ತಿಯಾಗಬೇಕೆಂದು ಬಯಸುತ್ತೇನೆ. ಗಿಡಗಳನ್ನು ನೆಡುವುದು ಕೇವಲ ಒಂದು ಕಾರ್ಯಕ್ರಮವಲ್ಲ, ಅದು ನಮ್ಮ ಬದುಕನ್ನು ಉಳಿಸಲು ಇರುವ ಮಾರ್ಗ. ಆ ಜವಾಬ್ದಾರಿಗಾಗಿ ತನ್ನ ಜೀವನವನ್ನು ಅರ್ಪಿಸಿದ ತಿಮ್ಮಕ್ಕರನ್ನು ಮೀರಿಸುವ ದೇಶಭಕ್ತರು ಯಾರೂ ಇಲ್ಲ. ತಿಮ್ಮಕ್ಕ ಹೆಚ್ಚು ಕಾಲ ಆಯುಷ್ಯ, ಆರೋಗ್ಯದೊಂದಿಗೆ ಇರಬೇಕೆಂದು" ಆಶಯ ವ್ಯಕ್ತಪಡಿಸಿದರು.

ಸಂತೋಷ್‌ ಕುಮಾರ್ ಅಭಿನಂಧಿಸಲು ತೆರಳಿದ್ದ ತಿಮ್ಮಕ್ಕ; ಟಿಆರ್‌ಎಸ್‌ ಪಕ್ಷದ ಸಂಸದ ಸಂತೋಷ್ ಕುಮಾರ್‌ ಗ್ರೀನ್‌ ಇಂಡಿಯ ಚಾಲೆಂಜ್‌ ಎಂಬ ಕಾರ್ಯಕ್ರಮದ ನಾಲ್ಕು ವರ್ಷಗಳ ಹಿಂದೆ ಆರಂಭಿಸಿದ್ದರು. ಈ ಕಾರ್ಯಕ್ರಮಕ್ಕೆ ತೆಲಂಗಾಣದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಅತ್ಯುತ್ತಮ ಬೆಂಬಲ ಸಿಕ್ಕಿತ್ತು. ಇದರ ಭಾಗವಾಗಿ ರಾಷ್ಟ್ರ ರಾಜಧಾನಿಯಲ್ಲೂ ಒಂದು ಲಕ್ಷ ಗಿಡಗಳನ್ನು ನೆಡಲಾಗಿತ್ತು. ಸಂತೋ‍ಷ್ ಕುಮಾರ್ ಪ್ರಕೃತಿ ಸೇವೆಯನ್ನು ಅಭಿನಂದಿಸಲು ತಿಮ್ಮಕ್ಕ ಹೈದರಾಬಾದ್‌ಗೆ ತೆರಳಿದ್ದರು.

Telangana CM K Chandrashekar Rao Felicitates Saalumarada Thimmakka

ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ತಿಮ್ಮಕ್ಕ, "ತೆಲಂಗಾಣ ಸರ್ಕಾರ ಕೈಗೊಂಡ ಹಸಿರು ಹಾರಂ (ಗಿಡ ನೆಡುವ ಕಾರ್ಯಕ್ರಮ) ಕಾರ್ಯಕ್ರಮ ಮೇಲುಗೈ ಸಾಧಿಸುತ್ತಿದೆ. ಸ್ವತಃ ಸರ್ಕಾರವೇ ಗಿಡಗಳನ್ನು ನೆಡುವ ಯೋಜನೆಗೆ ಮುಂದಾಗಿರುವುದರಿಂದ ಸಸ್ಯಗಳನ್ನು ನೆಡುವುದು, ರಕ್ಷಿಸುವುದು ಮುಂತಾದ ಕಾರ್ಯಕ್ರಮಗಳ ಮಾಡುತ್ತಿರುವುದು ಮುಖ್ಯಮಂತ್ರಿಗಳಿಗೆ ಅವರಿಗೆ ಪರಿಸರದ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ" ಎಂದರು.

"ಇಲ್ಲಿ ಹಣ್ಣುಗಳ ಗಿಡಗಳನ್ನು ನೆಟ್ಟರೆ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೆ ತುಂಬಾ ಅನುಕೂಲವಾಗತ್ತದೆ. ನಾನು ಬೆಳೆಸಿರುವ ಹಣ್ಣುಗಳ ಗಿಡಗಳನ್ನು ಕಳುಹಿಸಿಕೊಡುತ್ತೇನೆ, ಅದನ್ನು ಬೆಳೆಸಿ" ಎಂದು ಕರೆ ನೀಡಿದರು.

Telangana CM K Chandrashekar Rao Felicitates Saalumarada Thimmakka

ಸಂತೋಷ್‌ಕುಮಾರ್‌ಗೆ ಅಭಿನಂದನೆ; ತಮ್ಮಂತೆಯೇ ಗಿಡಗಳ ಬೆಳಸುವ ಕಾರ್ಯದಲ್ಲಿ ಆಸಕ್ತಿ ಹೊಂದಿರುವ ಸಂಸದ ಸಂತೋಷ್ ಕುಮಾರ್‌ರನ್ನು ತಿಮ್ಮಕ್ಕ ಆಶೀರ್ವದಿಸಿದರು. ಸಸ್ಯ ಪರಂಪರೆಯನ್ನು ಮುಂದುವರೆಸುತ್ತಿರುವ ಕಾರ್ಯ ಶ್ಲಾಘಿಸಿದರು. "ಪ್ರಸ್ತುತ ಎಲ್ಲಾ ಸೌಕರ್ಯಗಳಿದ್ದರು ಮನುಷ್ಯರಲ್ಲಿ ಪ್ರಕೃತಿಯ ಪ್ರೇಮ ಕಡಿಮೆಯಾಗಿದೆ. ಆದರೂ ಎಲ್ಲೋ ಒಂದು ಕಡೆ ಮರಗಳೆಂದರೆ ಪ್ರೀತಿಸುವವರು ಇದ್ದಾರೆ, ಅದಕ್ಕೆ ಸಂತೋಷ್ ಕುಮಾರ್ ನಿದರ್ಶನವಾಗಿದ್ದಾರೆ" ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಿಮ್ಮಕ್ಕ ಅವರ 111ನೇ ವರ್ಷದ ಹುಟ್ಟಿದ ದಿನದ ಪ್ರಯುಕ್ತ "ತಿಮ್ಮಕ್ಕ ಗ್ರೀನ್ ಫೌಂಡೇಶನ್ " ಮೂಲಕ ನೀಡುವ ಪ್ರಶಸ್ತಿಯನ್ನು ಈ ವರ್ಷ ಸಂಸದ ಸಂತೋಷ್ ಕುಮಾರ್‌ಗೆ ನೀಡಲಾಯಿತು. ನಂತರ ಸಂತೋಷ್ ಕುಮಾರ್ ಅವರೊಂದಿಗೆ ಪ್ರಗತಿ ಕಟ್ಟಡದಲ್ಲಿ ಗಿಡವನ್ನು ನೆಡುವ ಮೂಲಕ "ಗ್ರೀನ್ ಇಂಡಿಯಾ ಚಾಲೆಂಜ್" ಬಗ್ಗೆ ಪ್ರಖ್ಯಾತ ಕವಿ ಜೂಲೂರಿ ಗೌರಿ ಶಂಕರ್ ಅವರು ಬರೆದ ಆಕುಪಚ್ಚನಿ ವಿಲುನಾಮಾ ಪುಸ್ತಕವನ್ನು ಬಿಡುಗಡೆ ಮಾಡಿದರು.

8000 ಮರಗಳನ್ನು ನೆಟ್ಟಿರುವ ತಿಮ್ಮಕ್ಕ; 1910 ಅಥವಾ 1911ರಲ್ಲಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರು 80 ವರ್ಷಗಳಿಂದ ಸುಮಾರು 8000 ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಅನಕ್ಷರಾದರೂ ಪರಿಸರ ಪ್ರೇಮಿಯಾಗಿರುವ ಅವರು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಹುಲಿಕೆರೆ ಗ್ರಾಮದಿಂದ ಕಡೂರು ಗ್ರಾಮದವರೆಗೆ ಹೆದ್ದಾರಿಯ ಎರಡೂ ಬದಿಯಲ್ಲಿ 385ಕ್ಕೂ ಹೆಚ್ಚು ಆಲದ ಮರಗಳನ್ನು ಬೆಳೆಸಿದ್ದಾರೆ. ಇವರಿಗೆ ಪದ್ಮಶ್ರೀ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

English summary
Telangana chief minister K. Chandrashekhar Rao felicitated a 111-year-old woman Saalumarada Thimmakka popularly known as 'Vruksha Mathe' in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X